ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಿಲ್ಲಿ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್

By Mahesh

ಗಾಲೆ, ಜುಲೈ 27: ಕ್ರಿಕೆಟ್ ದಿಗ್ಗಜ ಡೆನ್ನಿಸ್ ಲಿಲ್ಲಿ ಹೆಸರಿನಲ್ಲಿ 36 ವರ್ಷಗಳಿಂದ ಇದ್ದ ಹಳೆ ದಾಖಲೆಯನ್ನು ಆರ್ ಅಶ್ವಿನ್ ಅವರು ಗುರುವಾರ ಮುರಿದಿದ್ದಾರೆ. 50 ಟೆಸ್ಟ್ ಪಂದ್ಯಗಳನ್ನಾಡಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಅಶ್ವಿನ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿರುವ ಅಶ್ವಿನ್ ಅವರು ಈಗ 50 ಪಂದ್ಯಗಳಿಂದ 275 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.

India vs Sri Lanka Galle Testː R Ashwin smashes Dennis Lillee's record


50 ಪಂದ್ಯಗಳಲ್ಲಿ 262 ವಿಕೆಟ್ ಗಳನ್ನು 23.40 ಸರಾಸರಿಯಂತೆ ಆಸ್ಟ್ರೇಲಿಯಾದ ವೇಗಿ ಡೆನ್ನಿಸ್ ಲಿಲ್ಲಿ ಅವರು ದಾಖಲೆ ಬರೆದಿದ್ದರು. ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಅವರು 22.91 ಸರಾಸರಿಯಂತೆ 260 ವಿಕೆಟ್ ಕಿತ್ತಿದ್ದಾರೆ. ಇವರಿಬ್ಬರನ್ನು ಮೀರಿಸಿ ಭಾರತದ ಅಶ್ವಿನ್ ಅವರು 275 ವಿಕೆಟ್ ಗಳಿಸಿದ್ದಾರೆ.

ಫೆಬ್ರವರಿಯಲ್ಲಿ 45ನೆ ಟೆಸ್ಟ್ ಪಂದ್ಯವನ್ನು ಆಡಿದ್ದ ಅಶ್ವಿನ್ ಅತೀ ವೇಗದಲ್ಲಿ 250 ವಿಕೆಟ್ ಗಳನ್ನು ಕಬಳಿಸಿ ದಾಖಲೆ ಮಾಡಿದ್ದರು. 300 ವಿಕೆಟ್ ಗಳನ್ನು ತಲುಪಲು ಅಶ್ವಿನ್ ಗೆ ಇನ್ನು ಕೇವಲ 25 ವಿಕೆಟ್ ಗಳ ಅವಶ್ಯಕತೆಯಿದೆ. ಡೆನ್ನಿಸ್ ಲಿಲ್ಲಿಯವರು 56 ಪಂದ್ಯಗಳನ್ನಾಡಿ 300 ವಿಕೆಟ್ ಗಳನ್ನು ಗಳಿಸಿದ ಸಾಧನೆಯನ್ನು ಮುರಿಯಲು ಅಶ್ವಿನ್ ಗೆ ಅವಕಾಶವಿದೆ.

ಆಶ್ವಿನ್ ಮೈಲಿಗಲ್ಲುಗಳು

* 50 ವಿಕೆಟ್ ಗಳು -9 ಪಂದ್ಯಗಳು
* 100 ವಿಕೆಟ್ ಗಳು-18 ಪಂದ್ಯಗಳು
* 150 ವಿಕೆಟ್ ಗಳು-29 ಪಂದ್ಯಗಳು
* 200 ವಿಕೆಟ್ ಗಳು- 37 ಪಂದ್ಯಗಳು
* 250 ವಿಕೆಟ್ ಗಳು- 45 ಪಂದ್ಯಗಳು
* 275 ವಿಕೆಟ್ ಗಳು-50 ಪಂದ್ಯಗಳು
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X