ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಲೆ ಟೆಸ್ಟ್: ಭಾರತ ದಿನದಾಟ ಅಂತ್ಯಕ್ಕೆ 399/3 ರನ್

ಗಾಲೆ, ಜುಲೈ 26 : ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲಿಯೇ ಅಭಿನವ್ ಮುಕುಂದ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಗೂಡಿದ ಶಿಖರ್ ಧವನ್ ಹಾಗೂ ಚೇತೇಶ್ವರ ಪೂಜಾರ ಅವರ ಜೊತೆಯಾಟದ ನೆರವಿನಿಂದ ಭಾರತ ಮೊದಲ ದಿನವೇ ಅಮೋಘ 399 ರನ್ ಗಳಿಸಲು ಸಾಧ್ಯವಾಯಿತು.

ಧವನ್ 190, ಮುಕುಂದ್ 12, ನಾಯಕ ಕೊಹ್ಲಿ 3 ವಿಕೆಟ್ ನೀಡಿದರು. ಪೂಜಾರ 144 ನಾಟೌಟ್ ಹಾಗೂ ಅಜಿಂಕ್ಯಾ ರಹಾನೆ 39 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Galle Test: Dhawan-Pujara slam brilliant tons as India post 399/3 against Sri Lanka on Day 1

ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಭರ್ಜರಿ ಶತಕ ಭಾರಿಸಿದರು.

ಕೆಲ್ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಶಿಖರ್ ಧವನ್ ಇಂದು ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್ ನಲ್ಲಿ ತಮ್ಮ 5ನೇ ಶತಕ ಬಾರಿಸಿದರು. ಧವನ್ ಅವರ ಶತಕದ ನೆರವಿನಿಂದ ಭಾರತ 38 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂದು 184 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮುಂದುರೆಸಿದೆ.

ಶಿಖರ್ ಧವನ್ 111 ಹಾಗೂ ಚೇತೇಶ್ವರ ಪೂಜಾರ 57 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಭಿನವ್ ಮುಕುಂದ್ 12 ರನ್ ಗಳಿಸಿ ಔಟ್ ಆಗಿದ್ದಾರೆ.

India Vs Sri Lanka, Galle Test, Day 1: Shikhar Dhawan, Cheteshwar Pujara grind hosts

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಇಂದು ಶ್ರೀಲಂಕಾದ ಗಾಲೆಯಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ನಲ್ಲಿ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದಾರೆ.

ಇನ್ನು ಆರೋಗ್ಯ ಸಮಸ್ಯೆಯಿಂದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ಕನ್ನಡಿಗ ಕೆಎಲ್ ರಾಹುಲ್ ಬದಲಿಗೆ ಶಿಖರ್ ಧವನ್ ಸ್ಥಾನ ಪಡೆದುಕೊಂಡಿದ್ದಾರೆ.

ತಂಡಗಳು ಇಂತಿವೆ:

India: Shikhar Dhawan, Abhinav Mukund, Cheteshwar Pujara, Virat Kohli (C), Ajinkya Rahane, Hardik Pandya, Ravichandran Ashwin, Wriddhiman Saha (WK), Ravindra Jadeja, Mohammed Shami, Umesh Yadav.

Sri Lanka: Upul Tharanga, Dimuth Karunaratne, Kusal Mendis (WK), Danushka Gunathilaka, Angelo Mathews, Asela Gunaratne, Niroshan Dickwella, Dilruwan Perera, Rangana Herath (C), Nuwan Pradeep, Lahiru Kumara.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X