ಆಶ್ವಿನ್ ಸ್ಪಿನ್ ಮೋಡಿ, ನ್ಯೂಜಿಲೆಂಡ್ 299 ಸ್ಕೋರಿಗೆ ಆಲೌಟ್

Posted By:
Subscribe to Oneindia Kannada

ಇಂದೋರ್, ಅಕ್ಟೋಬರ್ 10: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಸಿಲುಕಿದ ಪ್ರವಾಸಿ ನ್ಯೂಜಿಲೆಂಡ್ ಮೂರನೇ ಟೆಸ್ಟ್ ನ ಮೂರನೇ ದಿನದಂದು 299ರನ್ನಿಗೆ ಆಲೌಟ್ ಆಗಿದೆ. ಫಾಲೋ ಆನ್ ನೀಡದ ಭಾರತ 258ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ.

ಪಂದ್ಯದ ಸ್ಕೋರ್ ಕಾರ್ಡ್ ನೋಡಿ

ಭಾರತದ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 577/5 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಪಂದ್ಯದ ಮೂರನೇ ದಿನವಾದ ಸೋಮವಾರ(ಆಕ್ಟೋಬರ್ 10) ಹೋಳ್ಕರ್ ಮೈದಾನದಲ್ಲಿ ಆರ್ ಅಶ್ವಿನ್ ಅವರು ಅದ್ಭುತ ಬೌಲಿಂಗ್ ಪ್ರದರ್ಶಿಸಿ 6 ವಿಕೆಟ್ ಕಬಳಿಸಿದರು.[ಡಬ್ಬಲ್ ಸೆಂಚುರಿ ಬಾರಿಸಿ ಬ್ರಾಡ್ಮನ್ ಸಮಕ್ಕೆ ನಿಂತ ಕೊಹ್ಲಿ]

3rd Test, Day 3: New Zealand all out for 299 as Ashwin claims another fifer

ಅಶ್ವಿನ್ ಅವರು 20ನೇ ಬಾರಿಗೆ 5 ವಿಕೆಟ್ ಕಬಳಿಸಿದರು. ಅಶ್ವಿನ್ ಅವರು 27.2 ಓವರ್ ಗಳಲ್ಲಿ 6/81 ಪಡೆದರು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು 28 ಓವರ್ ಗಳಲ್ಲಿ 2/80 ಪಡೆದು ಉತ್ತಮ ಸಾಥ್ ನೀಡಿದರು.[ಚಿತ್ರಗಳಲ್ಲಿ ನೋಡಿ: ಕೊಹ್ಲಿ- ರಹಾನೆ ಜುಗಲ್ ಬಂದಿ ಆಟ]

ಪಂದ್ಯದ ಗ್ಯಾಲರಿ

ನ್ಯೂಜಿಲೆಂಡ್ ಪರ ಜೇಮ್ಸ್ ನೀಶಾಮ್ (71), ಮಾರ್ಟಿನ್ ಗಪ್ಟಿಲ್ (72) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ವೇಗಿಗಳು ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಭೋಜನ ವಿರಾಮದ ವೇಳೆಗೆ 125/1 ಸ್ಕೋರ್ ಮಾಡಿದ್ದ ಕಿವೀಸ್ ತಂಡ ನಂತರ ನಿಯಮಿತವಾಗಿ ವಿಕೆಟ್ ಕಳೆದುಕೊಂಡು 299ರನ್ನಿಗೆ ಸರ್ವಪತನ ಕಂಡಿತು.

English summary
India's frontline spinner Ravichandran Ashwin's took six wickets and did two run outs as New Zealand were all out for 299 in the first innings on day 3 of the third Test match against India here, on Monday (Oct 10).
Please Wait while comments are loading...