ಭಾರತ vs ಇಂಗ್ಲೆಂಡ್, ಏಕದಿನ, ಟಿ20 ಸರಣಿಗೆ ಫುಲ್ ಗೈಡ್

ಏಕದಿನ ಹಾಗೂ ಟಿ20 ಎರಡು ತಂಡಕ್ಕೆ ಕೊಹ್ಲಿ ನಾಯಕರಾಗಿದ್ದು, ಹೊಸ ಅಧ್ಯಾಯ ಅರಂಭಗೊಂಡಿದೆ. ಏಕದಿನ ಹಾಗೂ ಟಿ20 ಸರಣಿಯ ಪಂದ್ಯಾವಳಿ ಎಲ್ಲೆಲ್ಲಿ ನಡೆಯಲಿದೆ? ಯಾವಾಗ ಪ್ರಸಾರವಾಗಲಿದೆ? ಇನ್ನಿತರ ಮಾಹಿತಿಯುಳ್ಳ ಪೂರ್ಣ ಮಾರ್ಗದರ್ಶಿ ಮಾಹಿತಿ ಇಲ್ಲಿದೆ

By:
Subscribe to Oneindia Kannada

ಬೆಂಗಳೂರು, ಜನವರಿ 09: ಏಕದಿನ ಹಾಗೂ ಟಿ20 ಎರಡು ತಂಡಕ್ಕೆ ಕೊಹ್ಲಿ ನಾಯಕರಾಗಿದ್ದು, ಹೊಸ ಅಧ್ಯಾಯ ಅರಂಭಗೊಂಡಿದೆ. ಏಕದಿನ ಹಾಗೂ ಟಿ20 ಸರಣಿಯ ಪಂದ್ಯಾವಳಿ ಎಲ್ಲೆಲ್ಲಿ ನಡೆಯಲಿದೆ? ಯಾವಾಗ ಪ್ರಸಾರವಾಗಲಿದೆ? ಇನ್ನಿತರ ಮಾಹಿತಿಯುಳ್ಳ ಪೂರ್ಣ ಮಾರ್ಗದರ್ಶಿ ಮಾಹಿತಿ ಇಲ್ಲಿದೆ

ಎರಡು ಸರಣಿಗೂ ಆಯ್ಕೆಯಾದ ತಂಡಕ್ಕೂ ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ. ಸುರೇಶ್ ರೈನಾ ಅವರನ್ನು ಕಡೆಗಣಿಸಲಾಗಿದೆ. [ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟ]

ಜನವರಿ 15 ರಂದು ಪುಣೆಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಫೆಬ್ರವರಿ 1 ರಂದು ಬೆಂಗಳೂರಲ್ಲಿ ಕೊನೆ ಟಿ20 ನಿಗದಿಯಾಗಿದೆ.

India Vs England ODI, T20I series: Full schedule, squads, TV information

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 4-0 ಅಂತರದಲ್ಲಿ ಗೆದ್ದಿರುವ ಕೊಹ್ಲಿ ಪಡೆ, ಈಗ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ಏಕದಿನ ಹಾಗೂ ಟಿ20 ಎರಡು ತಂಡಕ್ಕೂ ಕರ್ನಾಟಕದ ಕೆಎಲ್ ರಾಹುಲ್, ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ.

ಎಂಎಸ್ ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿರುವ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರೆ, ಧೋನಿ ಅವರು ಆಟಗಾರನಾಗಿ ತಂಡದಲ್ಲಿ ಉಳಿದಿದ್ದಾರೆ. ಯುವರಾಜ್ ಸಿಂಗ್ ಹಾಗೂ ಆಶೀಶ್ ನೆಹ್ರಾ ತಂಡಕ್ಕೆ ಮರಳಿದ್ದಾರೆ.

ಏಕದಿನ ಹಾಗೂ ಟ್ವೆಂಟಿ20 ಸರಣಿ ವೇಳಾಪಟ್ಟಿ

* ಏಕದಿನ ಪಂದ್ಯಗಳು ಹಗಲು ರಾತ್ರಿ ಪಂದ್ಯಗಳಾಗಿದ್ದು (1.30 PM ISTಕ್ಕೆ ಆರಂಭ)
* ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್ ಟಿವಿ ನೆಟ್ವರ್ಕ್ ನಲ್ಲಿ ನೇರ ಪ್ರಸಾರವಾಗಲಿದೆ.

ಪಂದ್ಯದಿನಾಂಕಎಲ್ಲಿ
ಮೊದಲ ಏಕದಿನ ಪಂದ್ಯಜನವರಿ 15 (ಭಾನುವಾರ)ಪುಣೆ (ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ))
ಎರಡನೇ ಏಕದಿನ ಪಂದ್ಯಜನವರಿ 19 (ಗುರುವಾರ)ಕಟಕ್ (ಬಾರಾಬತಿ ಸ್ಟೇಡಿಯಂ)
ಮೂರನೇ ಏಕದಿನ ಪಂದ್ಯಜನವರಿ 22 (ಭಾನುವಾರ)ಕೋಲ್ಕತಾ (ಈಡೆನ್ ಗಾರ್ಡನ್ಸ್)

ಟಿ20ಐ

ಪಂದ್ಯದಿನಾಂಕಎಲ್ಲಿ
ಮೊದಲ ಟಿ20ಐ ಪಂದ್ಯಜನವರಿ 26 (ಗುರುವಾರ)ಕಾನ್ಪುರ್ (ಗ್ರೀನ್ ಪಾರ್ಕ್) (4.30 PM IST)
ಎರಡನೇ ಟಿ20ಐ ಪಂದ್ಯಜನವರಿ 29 (ಭಾನುವಾರ)ನಾಗ್ಪುರ್ (ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ)
(7 PM IST)
ಮೂರನೇ ಟಿ20ಐ ಪಂದ್ಯಫೆಬ್ರವರಿ 1 (ಬುಧವಾರ)ಬೆಂಗಳೂರು (ಎಂ ಚಿನ್ನಸ್ವಾಮಿ ಸ್ಟೇಡಿಯಂ) (7 PM IST)

ತಂಡಗಳು: ಭಾರತ
ಏಕದಿನ ಪಂದ್ಯಕ್ಕೆ

ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ( ವಿಕೆಟ್ ಕೀಪರ್), ಕೆಎಲ್ ರಾಹುಲ್, ಶಿಖರ್ ಧವನ್, ಮನೀಶ್ ಪಾಂಡೆ, ಕೇದಾರ್ ಜಾಧವ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್.ಟಿ20 ಪಂದ್ಯಕ್ಕೆ ತಂಡ ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ( ವಿಕೆಟ್ ಕೀಪರ್), ಕೆಎಲ್ ರಾಹುಲ್, ಮನ್ದೀಪ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಮನೀಶ್ ಪಾಂಡೆ, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಆಶೀಶ್ ನೆಹ್ರಾ.


ಇಂಗ್ಲೆಂಡ್ ಏಕದಿನ ತಂಡ: ಇಯಾನ್ ಮಾರ್ಗನ್(ನಾಯಕ), ಮೋಯಿನ್ ಅಲಿ, ಜಾನಿ ಬೈರ್ಸ್ಟೊ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಅಲೆಕ್ಸ್ ಹೇಲ್ಸ್, ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್.


ಟಿ20 :ಇಯಾನ್ ಮಾರ್ಗನ್(ನಾಯಕ), ಮೋಯಿನ್ ಅಲಿ, ಜೇಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಟಿಮಾಲ್ ಮಿಲ್ಸ್,ಲಿಯಾನ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ  (ಒನ್ಇಂಡಿಯಾ ಸುದ್ದಿ)

English summary
India and England will face off in limited overs series starting in Pune on January 15 (Sunday).Here is the full schedule and squads All ODIs are day-night (1.30 PM IST start)
Please Wait while comments are loading...