4ನೇ ಟೆಸ್ಟ್: ಇಂಗ್ಲೆಂಡ್ 400 ರನ್ ಗೆ ಸರ್ವಪತನ

Written By: Ramesh
Subscribe to Oneindia Kannada

ಮುಂಬೈ, ಡಿಸೆಂಬರ್. 09 : ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 400 ರನ್ ಗಳಿಗೆ ಸರ್ವಪತನ ಕಂಡಿದೆ.

ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಆಂಗ್ಲರು ಮೊದಲ ದಿನ ಗುರುವಾರ 5 ವಿಕೆಟ್ ಕಳೆದುಕೊಂಡು 288 ರನ್ ಗಳಿಸಿತ್ತು. 2ನೇ ದಿನವಾದ ಶುಕ್ರವಾರ ಇಂಗ್ಲೆಂಡ್ ತಂಡದ ಬಟ್ಲರ್ ಆಕರ್ಷಕ 76 ರನ್ ಗಳ ನೆರವಿನಿಂದ ಇಂಗ್ಲೆಂಡ್ 400 ರನ್ ಗಳ ಗಡಿ ಮುಟ್ಟಿತು.

India vs England, 4th Test, LIVE, Day 2: Ashwin-Jadeja pair restricts England to 400

ಭಾರತ ಪರ ರವೀಚಂದ್ರನ್ ಅಶ್ವಿನ್ 112ಕ್ಕೆ 6, ರವೀಂದ್ರ ಜಡೇಜ 109ಕ್ಕೆ 4 ವಿಕೆಟ್ ಪಡೆದು ಮಿಂಚಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ವಿಕೆಟ್ ನಷ್ಟವಿಲ್ಲದೆ 13.2 ಓವರ್ ಗಳಲ್ಲಿ 38 ರನ್ ಗಳಿಸಿ ಆಡುತ್ತಿದೆ.

English summary
Indian bowlers restricted England to 400 in their first innings after resilient Jos Buttler took the visitors to a respectable total on the second day of the fourth Test match here on Friday (Dec 9).
Please Wait while comments are loading...