ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ದಿನದಾಟ: ವಿರಾಟ್ ಕೊಹ್ಲಿ ದ್ವಿಶತಕ ನೆರವಿನಿಂದ 687/6 ಡಿಕ್ಲೇರ್

ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 477/4 ಸ್ಕೋರ್ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಗಳಿಸಿ ಔಟಾಗಿದ್ದಾರೆ.

By Mahesh

ಹೈದರಾಬಾದ್, ಫೆಬ್ರವರಿ 10: ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 477/4 ಸ್ಕೋರ್ ಮಾಡಿತ್ತು. ನಂತರ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಹಾಗೂ ವೃದ್ಧಿಮಾನ್ ಸಹಾ ಅಜೇಯ ಶತಕದ ನೆರವಿನಿಂದ 600 ಪ್ಲಸ್ ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಸ್ಕೋರ್ : ಭಾರತ ಮೊದಲ ಇನ್ನಿಂಗ್ಸ್: 166 ಓವರ್ ಗಳಲ್ಲಿ 687/6 ಡಿಕ್ಲೇರ್

India Vs Bangladesh, Hyderabad Test, Day 2: Kohli nears another double ton, hosts 477/4 at Lunch

* ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ 600 ಪ್ಲಸ್ ರನ್ ಗಳಿಸಿದ ಪ್ರಪ್ರಥಮ ತಂಡ ಎನಿಸಿಕೊಂಡ ಭಾರತ.
* ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 106(155 ಎಸೆತಗಳು, 7‍X4, 2X6) ಗಳಿಸಿ ಅಜೇಯರಾಗಿ ಉಳಿದರು. ಇದು ಇವರ ಎರಡನೇ ಶತಕ.
Kohli nears another double ton, hosts 477/4 at Lunch



* ರವೀಂದ್ರ ಜಡೇಜ 60 ರನ್ ಗಳಿಸಿ ಸಹಾಗೆ ಸಾಥ್. ತೈಜುಲ್ ಇಸ್ಲಾಮ್ 3/156.
* ವಿರಾಟ್ ಕೊಹ್ಲಿ 204 ರನ್ ಗಳಿಸಿ ಔಟ್. ಸತತ ನಾಲ್ಕು ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿದ ಮೊಟ್ಟ ಮೊದಲ ಆಟಗಾರ.
* ಭೋಜನ ವಿರಾಮದ ವೇಳೆಗೆ ಅಜಿಂಕ್ಯ ರಹಾನೆ 82 ರನ್ ಗಳಿಸಿ ಔಟಾದರೆ, ನಾಯಕ ಕೊಹ್ಲಿ ಅವರು 191ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

* ಕೊಹ್ಲಿ 23 ಹಾಗೂ ರಹಾನೆ 11 ಬೌಂಡರಿ ಸಿಡಿಸಿದರು.
* ತೈಜುಲ್ ಇಸ್ಲಾಮ್ ಎರಡು ಹಾಗೂ ತಸ್ಕಿನ್ ಮತ್ತು ಮೆಹ್ದಿ ಹಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
* ಮೊದಲ ದಿನದ ಆಟದಲ್ಲಿ ಮುರಳಿ ವಿಜಯ್ 108 ಹಾಗೂ ಚೇತೇಶ್ವರ್ ಪೂಜಾರಾ 83ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X