ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶತಕ ಬಾರಿಸಿದ ಸ್ಮಿತ್: ಆಸೀಸ್ ಗೆ ಕಂಟಕವಾದ ಕುಲ್ ದೀಪ್ ಯಾದವ್‌

By Bharath Kumar

ಧರ್ಮಶಾಲಾ, ಮಾರ್ಚ್ 25 : ಧರ್ಮಶಾಲಾದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಭರ್ಜರಿ ಶತಕ ಬಾರಿಸಿದ್ದಾರೆ.

ಅದ್ಭುತ ಫಾರ್ಮ್ ನಲ್ಲಿದ್ದ ಸ್ಟೀವ್ ಸ್ಮಿತ್ 173 ಎಸೆತಗಳಲ್ಲಿ 14 ಬೌಂಡರಿ ಸಮೇತ ಭರ್ಜರಿ 111 ರನ್ ಗಳಿಸಿ, ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು..[4ನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಔಟ್: ರಹಾನೆ ನಾಯಕ]

India Vs Australia: Steve Smith hit 20th Century

ನಾಲ್ಕನೇ ಟೆಸ್ಟ್ ಪಂದ್ಯದ ಆರಂಭದಲ್ಲೇ ಆರಂಭಿಕ ಮ್ಯಾಥ್ಯೂವ್ ರೆನ್ಸ್ಯೂ ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ, ನಾಯಕ ಸ್ಮಿತ್ ಆಸರೆಯಾದರು. ಡೇವಿಡ್ ವಾರ್ನರ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ ಸ್ಮಿತ್ ತಮ್ಮ ವೈಯಕ್ತಿಕ ಜೀವನದ 20ನೇ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಮತ್ತೊಂದೆಡೆ ನಾಯಕನಿಗೆ ಉತ್ತಮ ಸಾಥ್ ಕೊಟ್ಟ ಡೇವಿಡ್ ವಾರ್ನರ್ 56 ಸಿಡಿಸಿ ವಿಕೆಟ್ ಒಪ್ಪಿಸಿದ್ದರು. [ಮೊದಲ ಎಸೆತದಲ್ಲೇ ವಾರ್ನರ್ ಗೆ ಜೀವದಾನ: ಆಸೀಸ್ 1 ವಿಕೆಟ್ ಪತನ]

ಮತ್ತೊಂದೆಡೆ ಮಿಂಚಿನ ದಾಳಿ ನಡೆಸಿದ ಭಾರತೀಯ ಬೌಲರ್ ಗಳು ಆಸೀಸ್ ಬ್ಯಾಟ್ಸ್ ಮನ್ ಗಳ ಮೇಲೆ ಸವಾರಿ ನಡೆಸಿದ್ದಾರೆ. ಭಾರತದ ಪರ ಉಮೇಶ್ ಯಾದವ್ 2 ಮತ್ತು ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿ ಮಿಂಚಿದ್ರೆ, ಅಶ್ವಿನ್ 1 ವಿಕೆಟ್ ಪಡೆದರು. ಟೀ ಬ್ರೇಕ್ ಹೊತ್ತಿಗೆ ಆಸ್ಟ್ರೇಲಿಯಾ 208 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ, ಮ್ಯಾಥೀವ್ ವೇಡ್ ಮತ್ತು ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಡುತ್ತಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X