ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿಯ ದಾಖಲೆಗಳು, ಮುಖ್ಯಾಂಶಗಳ ಸಂಪೂರ್ಣ ವಿವರ

ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಮಂಗಳವಾರ(ಮಾರ್ಚ್ 28)ದಂದು ಭಾರತ ಗಳಿಸಿಕೊಂಡಿದೆ. ಸರಣಿಯ ಪ್ರಮುಖ ಅಂಶಗಳು, ಸಾಧನೆಗಳು, ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ

By Mahesh

ಧರ್ಮಶಾಲಾ, ಮಾರ್ಚ್ 28: ಪ್ರವಾಸಿ ಆಸ್ಟ್ರೇಲಿಯಾ ವಿರುದ್ದದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರ ಅಂತರದಿಂದ ಗೆದ್ದು, ಬಾರ್ಡರ್ -ಗವಾಸ್ಕರ್ ಟ್ರೋಫಿಯನ್ನು ಮಂಗಳವಾರ(ಮಾರ್ಚ್ 28)ದಂದು ಭಾರತ ಗಳಿಸಿಕೊಂಡಿದೆ. ಸರಣಿಯ ಪ್ರಮುಖ ಅಂಶಗಳು, ಸಾಧನೆಗಳು, ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ...

| ಗ್ಯಾಲರಿ | ಟ್ವೀಟ್ ಅಭಿನಂದನೆ

ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ 106 ರನ್ ಚೇಸ್ ಮಾಡಿದ ಟೀಂ ಇಂಡಿಯಾ, ಚೇತೇಶ್ವರ್ ಪೂಜಾರ, ಮುರಳಿ ವಿಜಯ್ ವಿಕೆಟ್ ಕಳೆದುಕೊಂಡು 107ರನ್ ಗಳಿಸಿ ಪಂದ್ಯ ಹಾಗೂ ಸರಣಿಯನ್ನು ತನ್ನದಾಗಿಸಿಕೊಂಡಿತು. [ಎಲ್ಲಾ ಟೆಸ್ಟ್ ತಂಡಗಳ ವಿರುದ್ಧ ಟೀಂ ಇಂಡಿಯಾಕ್ಕೆ ಸರಣಿ ಗೆಲುವು]

ಈ ಸಾಧನೆ ಮೂಲಕ ಒಂದು ಸೀಮಿತ ಅವಧಿಯಲ್ಲಿ ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ದಾಖಲೆಯನ್ನು ಟೀಂ ಇಂಡಿಯಾ ಪಡೆದುಕೊಂಡಿದೆ.[ಟೀಂ ಇಂಡಿಯಾಕ್ಕೆ ನಗದು ಬಹುಮಾನ]

ಈ ಸರಣಿಯ ವೇಳೆಯಲ್ಲಿ ಕೆಎಲ್ ರಾಹುಲ್ ಆರು ಅರ್ಧಶತಕ ದಾಖಲೆ, ಆರ್ ಅಶ್ವಿನ್ ಅತ್ಯಧಿಕ ವಿಕೆಟ್ ಗಳಿಕೆ, ರವೀಂದ್ರ ಜಡೇಜ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದು, 2016-17ರಲ್ಲಿ ಭಾರತ 13 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು ಸೇರಿದಂತೆ ಅನೇಕ ದಾಖಲೆಗಳನ್ನು ಟೀಂ ಇಂಡಿಯಾ ಹಾಗೂ ತಂಡದ ಅಟಗಾರರು ಸಾಧಿಸಿದರು. ಇದೆಲ್ಲದರ ಪೂರ್ಣ ವಿವರ ಇಲ್ಲಿದೆ...

ಮೊದಲ ಪಂದ್ಯ ಸೋತು, ಸರಣಿ ಗೆಲುವು

ಮೊದಲ ಪಂದ್ಯ ಸೋತು, ಸರಣಿ ಗೆಲುವು

ಟೆಸ್ಟ್ ಸರಣಿಯ ಮೊದಲ ಪಂದ್ಯ ಸೋತು ನಂತರ ಸರಣಿ ಗೆಲುವು ಸಾಧಿಸಿದ ಇತಿಹಾಸ ಹೀಗಿದೆ:
* 1972-73ರಲ್ಲಿ ಮೊದಲ ಟೆಸ್ಟ್ ಸೋತ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ಸಾಧಿಸಲಾಯಿತು.
* 2000-01ರಲ್ಲಿ ಆಸ್ಟ್ರೇಲಿಯಾ ವಿರುದ್ಧ
* 2015ರಲ್ಲಿ ಶ್ರೀಲಂಕಾ ವಿರುದ್ಧ ಮತ್ತು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆಯನ್ನು ಟೀಂ ಇಂಡಿಯಾ ಸಾಧಿಸಿದೆ.

ಎಲ್ಲ ತಂಡಗಳ ಮೇಲೆ ಸರಣಿ ಜಯ

ಎಲ್ಲ ತಂಡಗಳ ಮೇಲೆ ಸರಣಿ ಜಯ

* ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ಧ ಒಂದು ಸೀಮಿತ ಅವಧಿಯಲ್ಲಿ ಸರಣಿ ಜಯ ಸಾಧಿಸಿದ ದಾಖಲೆಯನ್ನು ಟೀಂ ಇಂಡಿಯಾ ಬರೆದಿದೆ.
* ಆಸ್ಟ್ರೇಲಿಯಾ ಈ ಸಾಧನೆಯನ್ನು ಮೊದಲ ಬಾರಿಗೆ 2004-05ರಲ್ಲಿ, ನಂತರ 2006-07ರಲ್ಲಿ ಆಷಸ್ ಸರಣಿಯಲ್ಲಿ ಸಾಧಿಸಿತ್ತು.
* 2012-13ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿತ್ತು.

ಆಸೀಸ್ ವಿರುದ್ಧ ತವರನಲ್ಲಿ

ಆಸೀಸ್ ವಿರುದ್ಧ ತವರನಲ್ಲಿ

ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ಇಲ್ಲಿ ತನಕ ನಡೆದಿರುವ ಟೆಸ್ಟ್ ಸರಣಿಗಳೆಲ್ಲವನ್ನು ಭಾರತ ಗೆದ್ದುಕೊಂಡಿದೆ. 2004-05ರಲ್ಲಿ ಮಾತ್ರ ಬಾರ್ಡರ್- ಗವಾಸ್ಕರ್ ಟ್ರೋಫಿ ಕಳೆದುಕೊಂಡಿತ್ತು. ಈಗ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದು, ಟ್ರೋಫಿಯನ್ನು ಭಾರತ, ಮರಳಿ ಗಳಿಸಿದೆ.

ಸ್ಮಿತ್ ಪಡೆಗೆ ತೀವ್ರ ನಿರಾಶೆ

ಸ್ಮಿತ್ ಪಡೆಗೆ ತೀವ್ರ ನಿರಾಶೆ

ಭಾರತ ವಿರುದ್ಧದ ಬಾರ್ಡರ್ -ಗವಾಸ್ಕರ್ ಟ್ರೋಫಿ ಕಳೆದುಕೊಂಡಿದ್ದಷ್ಟೇ ಅಲ್ಲ, ಏಷ್ಯಾದ ಇತರೆ ರಾಷ್ಟ್ರಗಳ ವಿರುದ್ಧ ಕೂಡಾ ಆಸ್ಟ್ರೇಲಿಯಾದ ಕಳಪೆ ಪ್ರದರ್ಶನ ಮುಂದುವರೆದಿದೆ.

ಏಷ್ಯಾ ಖಂಡದಲ್ಲಿ ಅಸ್ಟ್ರೇಲಿಯಾಕ್ಕೆ ಇದು ಸತತ ನಾಲ್ಕನೇ ಸರಣಿ ಸೋಲಾಗಿದೆ. 2012-13ರಲ್ಲಿ ಭಾರತ ವಿರುದ್ಧ, 2014-15ರಲ್ಲಿ ಪಾಕಿಸ್ತಾನ ವಿರುದ್ಧ ಯುಎಇನಲ್ಲಿ ಹಾಗೂ 2016ರಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಸರಣಿ ಸೋಲು ಕಂಡಿದೆ.
2016-17ರಲ್ಲಿ ತವರಿನಲ್ಲಿ 10 ಗೆಲುವು

2016-17ರಲ್ಲಿ ತವರಿನಲ್ಲಿ 10 ಗೆಲುವು

2016-17ರಲ್ಲಿ ತವರಿನಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಂದು ಕೂಡಾ ಸೋತಿಲ್ಲ. ನ್ಯೂಜೆಲೆಂಡ್ (3-0), ಇಂಗ್ಲೆಂಡ್ (4-0), ಬಾಂಗ್ಲಾದೇಶ (1-0), ಆಸ್ಟ್ರೇಲಿಯಾ (2-1). 10ರಲ್ಲಿ ಗೆಲುವು, 1 ಸೋಲು ಹಾಗೂ 2 ಡ್ರಾ.

10 ಗೆಲುವು -ಆಸ್ಟ್ರೇಲಿಯಾ ಎರಡು ಬಾರಿ ಸಾದಿಸಿದೆ. 2005-06ರಲ್ಲಿ ಹಾಗೂ 1999-2000 ಸೀಸನ್ ನಲ್ಲಿ ಸತತ 10 ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
ಕೊಹ್ಲಿ ದಾಖಲೆ ಸಮಕ್ಕೆ ಜಡೇಜ

ಕೊಹ್ಲಿ ದಾಖಲೆ ಸಮಕ್ಕೆ ಜಡೇಜ

ಆಲ್ ರೌಂಡರ್ ರವೀಂದ್ರ ಜಡೇಜ ಅವರು ಧರ್ಮಶಾಲಾ ಪಂದ್ಯದ ಶ್ರೇಷ್ಠ ಆಟಗಾರ ಹಾಗೂ ಸರಣಿ ಶ್ರೇಷ್ಠ ಆಟಗಾರ ಎನಿಸಿಕೊಳ್ಳುವ ಮೂಲಕ ಕೊಹ್ಲಿ ಸಮಕ್ಕೆ ನಿಂತಿದ್ದಾರೆ. ಆಲ್ ರೌಂಡರ್ ಜಡೇಜ ಅವರು ಮೂರು ಬಾರಿ ತವರಿನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ. ಕೊಹ್ಲಿ ಕೂಡಾ ಇಲ್ಲಿ ತನಕ ತವರಿನಲ್ಲಿ ನಡೆದ ಸರಣಿಗಳಲ್ಲಿ ಮೂರು ಬಾರಿ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಎನಿಸಿಕೊಂಡಿದ್ದಾರೆ.

ರಾಹುಲ್ ರಿಂದ ಸತತ 6 ಅರ್ಧಶತಕ

ರಾಹುಲ್ ರಿಂದ ಸತತ 6 ಅರ್ಧಶತಕ

ಕನ್ನಡಿಗ ಕೆಎಲ್ ರಾಹುಲ್ ಅವರು ಸರಣಿಯೊಂದರಲ್ಲಿ 6 ಅರ್ಧಶತಕ ಬಾರಿಸಿದ ಸಾಧನೆ(ಶತಕ ಗಳಿಸದೆ) ಮಾಡಿದ್ದಾರೆ. 2016-17ರ ಸೀಸನ್ ಲೆಕ್ಕ ತೆಗೆದುಕೊಂಡರೆ ರವೀಂದ್ರ ಜಡೇಜ ಕೂಡಾ 6 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಈ ರೀತಿ ಸಾಧನೆಯನ್ನು ಈ ಮುಂಚೆ ವಿರಾಟ್ ಕೊಹ್ಲಿ, ಮುರಳಿ ವಿಜಯ್ ಸಾಧಿಸಿದ್ದಾರೆ. ಈ ಪಟ್ಟಿಯಲ್ಲಿ ಚೇತೇಶ್ವರ್ ಪೂಜಾರಾ ಮುಂದಿದ್ದು, 12 ಅರ್ಧಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಡೇಲ್ ಸ್ಟೇನ್ ದಾಖಲೆ ಮುರಿದ ಅಶ್ವಿನ್

ಡೇಲ್ ಸ್ಟೇನ್ ದಾಖಲೆ ಮುರಿದ ಅಶ್ವಿನ್

ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೇನ್ ದಾಖಲೆ ಮುರಿದ ಆರ್ ಅಶ್ವಿನ್, ಸೀಸನ್ ವೊಂದರಲ್ಲಿ 81 ವಿಕೆಟ್ ಗಳಿಸಿದ್ದಾರೆ. 2007-08ರಲ್ಲಿ ಡೇಲ್ ಸ್ಟೇನ್ ಅವರು 78 ವಿಕೆಟ್ ಪಡೆದಿದ್ದು ಇಲ್ಲಿ ತನಕ ದಾಖಲೆಯಾಗಿತ್ತು.

ಸತತ 7ನೇ ಸರಣಿ ಗೆದ್ದ ಕೊಹ್ಲಿ

ಸತತ 7ನೇ ಸರಣಿ ಗೆದ್ದ ಕೊಹ್ಲಿ

ಟೆಸ್ಟ್ ತಂಡದ ನಾಯಕರಾದ ಬಳಿಕ ವಿರಾಟ್ ಕೊಹ್ಲಿ ಅವರು ಇಲ್ಲಿ ತನಕ ಒಂದು ಸರಣಿಯಲ್ಲೂ ಸೋಲು ಕಂಡಿಲ್ಲ. ಸತತ 7 ಸರಣಿಗಳನ್ನು ಗೆದ್ದುಕೊಂಡಿದ್ದಾರೆ.

2015ರಲ್ಲಿ ಶ್ರೀಲಂಕಾ,ದಕ್ಷಿಣ ಆಫ್ರಿಕಾ
2016ರಲ್ಲಿ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್
2017ರಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾ

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X