ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ಆಸೀಸ್

ಭಾರತ ವಿರುದ್ಧ ಮೊದಲ ಟೆಸ್ಟ್ ನ ಮೊದಲ ದಿನದಲ್ಲಿ ಆಸ್ಟ್ರೇಲಿಯಾ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿದೆ.

By Ramesh

ಪುಣೆ, ಫೆಬ್ರವರಿ. 23 : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಮೊದಲ ಬಾರ್ಡರ್ ಗಾವಾಸ್ಕರ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ದಿನ ಭಾರತದ ಬೌಲಿಂಗ್ ದಾಳಿಗೆ ಸ್ಟಿವ್ ಸ್ಮಿತ್ ಪಡೆ ತತ್ತರಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು ಕೇವಲ 256 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ 38 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ಅವರನ್ನು ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.

India Vs Australia, 1st Test: Steve Smith wins toss, elects to bat first

ಮ್ಯಾಥ್ಯೂ ರೆನ್ಶಾ 68, ಮಿಚೆಲ್ ಸ್ಟಾರ್ಕ್ ಅಜೇಯ 57 ರನ್ ಗಳಿಸಿದರು. ನಾಯಕ ಸ್ಮಿತ್ 27, ಪೀಟರ್ ಹ್ಯಾಂಡ್ಸ್ ಕೊಂಬ್ 22 ಅವರನ್ನು ಅಶ್ವಿನ್ ಮತ್ತು ಜಡೇಜಾ ಬಲಿ ಪಡೆದರು.

ಉಮೇಶ್ ಯಾದವ್ ಅವರು 16 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಶಾನ್ ಮಾರ್ಶ್ ಅವರ ವಿಕೆಟ್ ಪಡೆದು ಆಸ್ಟೇಲಿಯಾಕ್ಕೆ ಕಂಟಕವಾದರು.

ಭಾರತದ ಪರ ವೇಗಿ ಉಮೇಶ್ ಯಾದವ್ 4 ವಿಕೆಟ್ ಉರುಳಿಸಿದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.

ಫೆಬ್ರವರಿ 23ರಂದು ಆರಂಭವಾಗಿರುವ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟಿವ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ವೇಗಿ ಭುನವೇಶ್ವರ್ ಬದಲಾಗಿ ಜಯಂತ್ ಯಾದವ್ ಅವರಿಗೆ 11 ರ ಬಳಗದಲ್ಲಿ ಕೊಹ್ಲಿ ಅವಕಾಶ ನೀಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಯಾವುದೇ ತಂಡದಲ್ಲಿ ಬದಲಾವಣೆಯಾಗಿಲ್ಲ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ,ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮ,

ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಶಾನ್ ಮಾರ್ಷ್,ಪೀಟರ್ ಹ್ಯಾಂಡ್ಸ್ ಕೊಂಬ್,ಮ್ಯಾಥ್ಯೂ ರೆನ್ಶಾ, ಮಿಚೆಲ್ ಮಾರ್ಷ್,ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸ್ಟೀವ್ ಓ ಕೀಫೆ,ನಾಥನ್ ಲಿಯಾನ್,ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ ವುಡ್.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X