ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಟ್ಲಾದಲ್ಲಿ ಇತಿಹಾಸ ನಿರ್ಮಿಸಿದ ಕೊಹ್ಲಿ ಹಾಗೂ ಟೀಂ ಇಂಡಿಯಾ

By Mahesh

ನವದೆಹಲಿ, ಡಿ. 07: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ತವರು ನೆಲ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸೋಮವಾರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಾಖಲೆಯ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಿದ್ದ ಟೀಂ ಇಂಡಿಯಾ ಈಗ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 3-0ರಲ್ಲಿ ಗೆದ್ದುಕೊಂಡಿದೆ.

ಹಶೀಂ ಅಮ್ಲಾ ಅವರ ನೇತೃತ್ವದ ದಕ್ಷಿಣ ಆಫ್ರಿಕಾ ತಂಡ 337 ರನ್ ಗಳ ಅಂತರದಿಂದ ಸೋತು ಗಾಂಧಿ ಮಂಡೇಲಾ ಫ್ರೀಡಂ ಸರಣಿಯನ್ನು ಭಾರತದ ಕೈಗೆತ್ತಿದ್ದಾರೆ. 481 ರನ್ ಚೇಸ್ ಮಾಡುತ್ತಿದ್ದ ಪ್ರವಾಸಿ ತಂಡ ಅಂತಿಮ ದಿನದಂದು 143ಸ್ಕೋರಿಗೆ ಆಲೌಟ್ ಆಗಿದೆ. ಎರಡು ಇನ್ನಿಂಗ್ಸ್ ಗಳಲ್ಲೂ ಶತಕ ಬಾರಿಸಿದ ಅಜಿಂಕ್ಯ ರಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.[ಬ್ಲಾಕಾಥಾನ್ : ಹಶೀಂ ಅಮ್ಲಾ ಅಭೂತಪೂರ್ವ ದಾಖಲೆ]

India and Virat Kohli create history at Kotla as they thrash SA by 337 runs

ಈ ಗೆಲುವಿನಿಂದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಟೀಂ ಇಂಡಿಯಾ ವಿರುದ್ಧ ಸರಣಿ ಸೋತರೂ ದಕ್ಷಿಣ ಆಫ್ರಿಕಾ ಈಗಲೂ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಕ್ಲೀನ್ ಸ್ವೀಪ್ ಇದೇ ಮೊದಲು:
ದೆಹಲಿ ಟೆಸ್ಟ್ ಗೂ ಮೊದಲು 11 ಬಾರಿ ಸಂಧಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಒಮ್ಮೆ ಕೂಡಾ ಕ್ಲೀನ್ ಸ್ವೀಪ್ ಮಾಡಿರಲಿಲ್ಲ. ಯಾವ ತಂಡವೂ 3-0 ಅಂತರದ ಗೆಲುವು ಸಾಧಿಸಿರಲಿಲ್ಲ. 1996-97(ತವರು ನೆಲದಲ್ಲಿ) ಹಾಗೂ 199-2000ರಲ್ಲಿ (ಭಾರತದಲ್ಲಿ) ದಕ್ಷಿಣ ಆಫ್ರಿಕಾ ಎರಡು ಬಾರಿ 2-0 ಅಂತರದ ಗೆಲುವು ಸಾಧಿಸಿತ್ತು.

ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 108ರನ್ ಗಳಿಂದ ಭಾರತ ಗೆದ್ದುಕೊಂಡಿತು. ಬೆಂಗಳೂರಿನ 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಯಿತು. ನಾಗ್ಪುರದ ಮೂರನೇ ಪಂದ್ಯ 124ರನ್ ಗಳಿಂದ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾದ 9 ವರ್ಷದ ಗೆಲುವಿನ ನಾಗಲೋಟಕ್ಕೆ ಭಾರತ ಬ್ರೇಕ್ ಹಾಕಿತ್ತು. ಈಗ ದೆಹಲಿಯಲ್ಲಿ ಗೆದ್ದು ಸರಣಿಯಲ್ಲಿ ತನ್ನದಾಗಿಸಿಕೊಂಡಿದೆ.

Jadeja

ಡಿಸೆಂಬರ್ 07, 2015ನಂತೆ ಭಾರತ vs ದಕ್ಷಿಣ ಆಫ್ರಿಕಾ ಸರಣಿ ಫಲಿತಾಂಶಗಳು
(ಒಟ್ಟಾರೆ 12 ಸರಣಿ : ದಕ್ಷಿಣ ಆಫ್ರಿಕಾ - 6ರಲ್ಲಿ ಜಯ, ಭಾರತ -3, ಡ್ರಾ-3)

* 1992-93: ದಕ್ಷಿಣ ಆಫ್ರಿಕಾಕ್ಕೆ 1-0 ಅಂತರದ ಜಯ (4 ಟೆಸ್ಟ್ ಪಂದ್ಯಗಳ ಸರಣಿ)
* 1996-97: ಭಾರತಕ್ಕೆ 2-1 ಅಂತರದ ಜಯ (3 ಟೆಸ್ಟ್ ಪಂದ್ಯಗಳ ಸರಣಿ)
* 1996-97: ದಕ್ಷಿಣ ಆಫ್ರಿಕಾಕ್ಕೆ 2-0 ಅಂತರದ ಜಯ (3 ಟೆಸ್ಟ್ ಪಂದ್ಯಗಳ ಸರಣಿ)
* 1999-2000: ದಕ್ಷಿಣ ಆಫ್ರಿಕಾಕ್ಕೆ 2-0 ಅಂತರದ ಜಯ (2 ಟೆಸ್ಟ್ ಪಂದ್ಯಗಳ ಸರಣಿ)
* 2001-02: ದಕ್ಷಿಣ ಆಫ್ರಿಕಾಕ್ಕೆ 1-0 ಅಂತರದ ಜಯ (2 ಟೆಸ್ಟ್ ಪಂದ್ಯಗಳ ಸರಣಿ)
* 2004-05: ಭಾರತಕ್ಕೆ 1-0 ಅಂತರದ ಜಯ (2 ಟೆಸ್ಟ್ ಪಂದ್ಯಗಳ ಸರಣಿ)
* 2006-07: ದಕ್ಷಿಣ ಆಫ್ರಿಕಾಕ್ಕೆ 2-1 ಅಂತರದ ಜಯ (3 ಟೆಸ್ಟ್ ಪಂದ್ಯಗಳ ಸರಣಿ)
* 2007-08: ಭಾರತದಲ್ಲಿ ನಡೆದ 3 ಟೆಸ್ಟ್ ಗಳ ಸರಣಿ 1-1ರಲ್ಲಿ ಡ್ರಾ.
* 2009-10: ಭಾರತದಲ್ಲಿ ನಡೆದ 2 ಟೆಸ್ಟ್ ಗಳ ಸರಣಿ 1-1ರಲ್ಲಿ ಡ್ರಾ.
* 2010-11: ದಕ್ಷಿಣ ಆಫ್ರಿಕಾದಲ್ಲಿ ನಡೆದ 3 ಟೆಸ್ಟ್ ಗಳ ಸರಣಿ 1-1ರಲ್ಲಿ ಡ್ರಾ.
* 2013-14 : ದಕ್ಷಿಣ ಆಫ್ರಿಕಾಕ್ಕೆ 1-0 (2 ಟೆಸ್ಟ್ ಪಂದ್ಯಗಳ ಸರಣಿ)
* 2015-16 : ಭಾರತಕ್ಕೆ 3-0 ಅಂತರದ ಜಯ (4 ಟೆಸ್ಟ್ ಪಂದ್ಯಗಳ ಸರಣಿ)

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X