ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕ ಬಂಧನ

By Mahesh

ಪಾಟ್ನ, ಜ. 13: ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕ ಇಶಾನ್ ಕಿಶಾನ್ ಗೆ ಪಾಟ್ನ ಪೊಲೀಸರು ಸಕತ್ ಗೂಸಾ ಕೊಟ್ಟು ಬಂಧಿಸಿದ ಘಟನೆ ನಡೆದಿದೆ. ಇಶಾನ್ ಚಲಿಸುತ್ತಿದ್ದ ಕಾರು ಆಟೋರಿಕ್ಷಾಕ್ಕೆ ಬಡಿದು ಹಲವರಿಗೆ ಗಾಯಗಳಾಗಿತ್ತು.

ಲಭ್ಯ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಇಶಾನ್ ಅವರು ತಮ್ಮ ತಂದೆಯ ಕಾರನ್ನು ತೆಗೆದುಕೊಂಡು ವೇಗವಾಗಿ ಚಲಾಯಿಸಿದ್ದಾರೆ. ಮಿತಿಮೀರಿದ ವೇಗದಿಂದ ನಿಯಂತ್ರಣಕ್ಕೆ ಸಿಗದೆ ಆಟೋರಿಕ್ಷಾಕ್ಕೆ ಗುದ್ದಿದ್ದಾರೆ. ಇದರಿಂದ ಆಟೋದಲ್ಲಿದ್ದವರಿಗೆ ಗಾಯಗಳಾಗಿವೆ.

ಅಪಘಾತ ಸ್ಥಳದಲ್ಲಿ ಸೇರಿದ ಜನರೊಡನೆ ಇಶಾನ್ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಕೈ ಕೈ ಮಿಲಾಯಿಸಿದ್ದಾರೆ. ಕೋಪದಲ್ಲಿದ್ದ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ.[ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿಶನ್ ನಾಯಕ]

India U-19 captain Ishan Kishan 'beaten up', arrested ahead of World Cup

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಇಶಾನ್ ಅವರನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಶಾನ್ ಅವರ ವಿರುದ್ಧ ಅಜಾಗರೂಕತೆಯ ವಾಹನ ಚಾಲನೆ, ಅಪರಿಚಿತರ ವಾಹನ ಹಾನಿ ಮತ್ತು ಅನುಚಿತ ವರ್ತನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. [ದ್ರಾವಿಡ್ ಕೋಚಿಂಗ್ ಕಮಾಲ್, ಕಿರಿಯರಿಗೆ ಕಿರೀಟ]

ಐಸಿಸಿ ಅಂಡರ್ 19 ವಿಶ್ವಕಪ್ ಆಡಲಿರುವ ಭಾರತ ತಂಡಕ್ಕೆ ನಾಯಕರಾಗಿ ಇಶಾನ್ ಕಿಶಾನ್ ಇತ್ತೀಚೆಗೆ ಆಯ್ಕೆಯಾಗಿದ್ದರು. ಬಾಂಗ್ಲಾದೇಶದಲ್ಲಿ ಈ ಟೂರ್ನಿ ನಡೆಯಲಿದ್ದು, ಭಾರತ ತಂಡಕ್ಕೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದಾರೆ. ಜನವರಿ 28ರಂದು ಐರ್ಲೆಂಡ್ ವಿರುದ್ಧ ಭಾರತ ಮೊದಲ ಪಂದ್ಯವಾಡಲಿದೆ.

ಎ ಗುಂಪಿನಲ್ಲಿರುವ ಭಾರತದ ಜೊತೆಗೆ ಐರ್ಲೆಂಡ್, ನ್ಯೂಜಿಲೆಂಡ್ ಹಾಗೂ ನೇಪಾಳ ತಂಡಗಳಿವೆ. ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಿಶಾನ್ ಅವರು ಜಾರ್ಖಂಡ್ ಪರ ಆಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ನಾಯಕ ಎಂಎಸ್ ಧೋನಿ ಜೊತೆ ಆಡಿದ ಅನುಭವ ಹೊಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X