ಜೂನ್ ನಲ್ಲಿ ಟೀಂ ಇಂಡಿಯಾದಿಂದ ಜಿಂಬಾಬ್ವೆ ಪ್ರವಾಸ

By: ಕ್ರಿಕೆಟ್ ಡೆಸ್ಕ್
Subscribe to Oneindia Kannada

ಹರಾರೆ, ಮೇ 03 : ಹಲವು ವರ್ಷಗಳ ನಂತರ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಸರಣಿಯನ್ನು ಆಡಲು ಟೀಂ ಇಂಡಿಯಾ ಜೂನ್ ನಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಮಂಗಳವಾರ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ.

11 ಜೂನ್ ನಿಂದ 15 ಜೂನ್ ವರೆಗೆ ಮೂರು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು ನಡೆಯಲಿವೆ. ಇನ್ನು 18 ರಿಂದ 22 ರ ವೆರೆಗೆ ಮೂರು ಅಂತಾರಾಷ್ಟ್ರೀಯ ಟ್ವಂಟಿ-20 ಮಾದರಿಯ ಒಟ್ಟು ಆರು ಪಂದ್ಯಗಳು 12 ದಿನಗಳ ವರೆಗೆ ಜಿಂಬ್ಬಾಬೆಯ ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ.

2010 ರಲ್ಲಿ ಜಿಂಬಾಬ್ವೆ ಪ್ರವಾಸ ಮಾಡಿದ್ದ ಭಾರತ ಕ್ರಿಕೆಟ್ ತಂಡ 6 ವರ್ಷಗಳ ನಂತರ ಜಿಂಬಾಬ್ವೆ ಪ್ರವಾಸ ಮಾಡಲಿದೆ ಎಂದು ಜಿಂಬ್ಬಾಬೆ ಕ್ರಿಕೆಟ್ ಬೋರ್ಡ್ ನಿರ್ದೇಶಕ ವಿಲ್ ಫ್ರಡ್ ಮುಕುಂದೀವಾ ತಿಳಿಸಿದ್ದಾರೆ.

India to tour Zimbabwe in June 2016: Here is the full schedule

ಏಕದಿನ ಪಂದ್ಯಗಳ ವೇಳಾಪಟ್ಟಿ
* June 11 (Saturday) 1st ODI.
* June 13 (Monday) 2nd ODI.
* June 15 (Wednesday) 3rd ODI.

ಟಿ20 ಪಂದ್ಯಗಳ ವೇಳಾ ಪಟ್ಟಿ
* June 18 (Saturday) 1st T20I.
* June 20 (Monday) 2nd T20I.
* June 22 (Wednesday) 3rd T20I.

ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ. ಜೂನ್ ನಲ್ಲಿ ಜಿಂಬಾಬ್ವೆ ಪ್ರವಾಸ ಬೆಳಸಲಿರುವ ಟೀಂ ಇಂಡಿಯಗೆ ಆಲ್ ದಿ ಬೆಸ್ಟ್ ಹೇಳಿ.

English summary
Ahead of their gruelling tour to the West Indies, the Indian team will travel to Zimbabwe for a short limited overs series next month, Zimbabwe Cricket confirmed on Tuesday (May 3)
Please Wait while comments are loading...