ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2016ರಲ್ಲಿ ಆಸ್ಟ್ರೇಲಿಯಾಕ್ಕೆ ಟೀಂ ಇಂಡಿಯಾ, ವೇಳಾಪಟ್ಟಿ

By Mahesh

ಬೆಂಗಳೂರು, ಜುಲೈ 09: 2016ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 3 ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಗುರುವಾರ ಪ್ರಕಟಿಸಿದೆ. ಪಂದ್ಯಗಳು ಜ.12, 2016ರಿಂದ ಜ.31ರ ತನಕ ನಡೆಯಲಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಸೆಮಿಫೈನಲಿಸ್ಟ್ ಟೀಂ ಇಂಡಿಯಾ ಮತ್ತೊಮ್ಮೆ ಆಸ್ಟ್ರೇಲಿಯಾಕ್ಕೆ ಕಾಲಿರಿಸಲಿದ್ದು 2016ರಲ್ಲಿ ಐದು ವಿಕ್ಟೋರಿಯಾ ಬಿಟ್ಟರ್ ಸರಣಿ ಏಕದಿನ ಪಂದ್ಯಗಳು ಹಾಗೂ ಮೂರು ಕೆಎಫ್ ಸಿ ಟಿ20 ಪಂದ್ಯಗಳನ್ನಾಡಲಿದೆ ಎಂಡು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. [ಅಡಿಲೇಡ್ ನಲ್ಲಿ ಪ್ರಪ್ರಥಮ ಹಗಲು -ರಾತ್ರಿ ಟೆಸ್ಟ್ ಪಂದ್ಯ]

ಮಾ. 11ಕ್ಕೆ ಆರಂಭವಾಗಲಿರುವ ಐಸಿಸಿ ವಿಶ್ವ ಟ್ವೆಂಟಿ 20 ಟೂರ್ನಿಗೂ ಮುನ್ನ ಈ ಟಿ20 ಪಂದ್ಯಾವಳಿಗಳು ಉಭಯ ದೇಶಗಳಿಗೂ ಉತ್ತಮ ಅಭ್ಯಾಸ ನೀಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಮೈಕ್ ಮೆಕೆನ್ನಾ ಹೇಳಿದ್ದಾರೆ.

India to tour Australia in January 2016

ಕಳೆದ ವರ್ಷ 2014ರ ನವೆಂಬರ್ ನಲ್ಲಿ ಅಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ 4 ಟೆಸ್ಟ್ ಹಾಗೂ ತ್ರಿಕೋನ ಏಕದಿನ ಸರಣಿ ಪಂದ್ಯವನ್ನಾಡಿತ್ತು. ಟೆಸ್ಟ್ ಸರಣಿ ಸಂಪೂರ್ಣವಾಗಿ ಸೋತರೆ, ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಫೈನಲ್ ತಲುಪಿದ್ದವು. 47 ವರ್ಷಗಳ ಇತಿಹಾಸದಲ್ಲೇ ಖಾಲಿ ಕೈ ಹೊತ್ತು ಟೀಂ ಇಂಡಿಯಾ ಮರಳಬೇಕಾಯಿತು. [2015-16 ಟೀಂ ಇಂಡಿಯಾಕ್ಕೆ ಬಿಗಿ ವೇಳಾಪಟ್ಟಿ ]

ಏಕದಿನ ಪಂದ್ಯಗಳ ವೇಳಾಪಟ್ಟಿ

* ಮೊದಲ ಏಕದಿನ ಪಂದ್ಯ: ಜನವರಿ 12 (ಮಂಗಳವಾರ) , ಪರ್ತ್ (ವಾಕಾ)
* ಎರಡನೇ ಏಕದಿನ ಪಂದ್ಯ: ಜನವರಿ 15 (ಶುಕ್ರವಾರ), ಬ್ರಿಸ್ಬೇನ್ (ಗಬ್ಬಾ)
* ಮೂರನೇ ಏಕದಿನ ಪಂದ್ಯ: ಜನವರಿ 17 (ಭಾನುವಾರ),ಮೆಲ್ಬೋರ್ನ್ (ಎಂಸಿಜಿ)
* ನಾಲ್ಕನೇ ಏಕದಿನ ಪಂದ್ಯ: ಜನವರಿ 20 (ಬುಧವಾರ), ಕ್ಯಾನ್ ಬೆರಾ (ಮನುಕಾ ಓವಲ್)
* ಐದನೇ ಏಕದಿನ ಪಂದ್ಯ: ಜನವರಿ 23 (ಶನಿವಾರ), ಸಿಡ್ನಿ (ಎಸ್ ಸಿಜಿ)

ಟ್ವೆಂಟಿ 20 ಪಂದ್ಯಗಳ ವೇಳಾಪಟ್ಟಿ [ಭಾರತದ ಜಿಂಬಾಬ್ವೆ ಕ್ರಿಕೆಟ್ ಟೂರ್ ಫುಲ್ ಗೈಡ್]
* ಮೊದಲ ಟಿ20 : ಜನವರಿ 26 (ಮಂಗಳವಾರ), ಅಡಿಲೇಡ್
* ಎರಡನೇ ಟಿ20 : ಜನವರಿ 29 (ಶುಕ್ರವಾರ), ಎಂಸಿಜಿ
* ಮೂರನೇ ಟಿ20 : ಜನವರಿ 31 (ಭಾನುವಾರ), ಸಿಡ್ನಿ
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X