ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರಲ್ಲಿ ಎಬಿಡಿ 100ನೇ ಟೆಸ್ಟ್ ಪಂದ್ಯ, ಟಿಕೆಟ್ ಬೇಕಾ?

By Mahesh

ಬೆಂಗಳೂರು, ನ.04: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನವೆಂಬರ್ 14 ರಿಂದ 18ರ ತನಕ ನಡೆಯಲಿರುವ ಈ ಪಂದ್ಯದ ಟಿಕೆಟ್ ಗಳು ನವೆಂಬರ್ 4 (ಬುಧವಾರ) ರಿಂದ ಲಭ್ಯವಿದೆ.

ಬುಧವಾರದಿಂದ ಎಲ್ಲಾ ಸ್ಟ್ಯಾಂಡ್ ಗಳ ಟಿಕೆಟ್ ಗಳು ಸಾರ್ವಜನಿಕರಿಗೆ ಲಭ್ಯವಾಗಿರುತ್ತದೆ. ಆನ್ ಲೈನ್ ಮೂಲಕ ಟಿಕೆಟ್ ಪಡೆಯಲು ಬಯಸುವ ಅಭಿಮಾನಿಗಳು ಬುಕ್ ಮೈ ಶೋ.ಕಾಂಗೆ ಲಾಗ್ ಇನ್ ಆಗಿ ಟಿಕೆಟ್ ಪಡೆದುಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಕೆಎಸ್ ಸಿಎ) ಪ್ರಕಟಿಸಿದೆ. [ಗಂಗೂಲಿ ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್]

ಟಿಕೆಟ್ ಬೆಲೆ: 100 ರು ನಿಂದ 2,000 ರು ತನಕ ಟಿಕೆಟ್ ಬೆಲೆ ಇದೆ. ಸೀಸನ್ ಟಿಕೆಟ್ ಅಥವಾ ಒಂದು ದಿನದ ಮಟ್ಟಿಗೆ ಟಿಕೆಟ್ ಖರೀದಿಸಬಹುದು ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.

India-SA Test in Bengaluru


ಎಬಿಡಿ ಸ್ಪೆಷ್ಟಲ್ 100: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಎಬಿಡಿವಿಲಿಯರ್ಸ್ ಗೆ ಕೆಎಸ್ ಸಿಎ ಮೈದಾನ ತವರು ನೆಲವಾಗಿದೆ. [ಟೆಸ್ಟ್ ದಾಖಲೆಗಿಂತ ಅಪ್ಪನಾಗುವ ಖುಷಿ ಮುಖ್ಯ: ಎಬಿಡಿ]

ಇಲ್ಲಿ ತನಕ 98 ಟೆಸ್ಟ್ ಪಂದ್ಯಗಳನ್ನಾಡಿದ್ದು 52.09ರ ಸರಾಸರಿಯಲ್ಲಿ 7,608 ರನ್‌ಗಳನ್ನು ಗಳಿಸಿದ್ದು ಇದರಲ್ಲಿ 21 ಶತಕ ಹಾಗೂ 38 ಅರ್ಧಶತಕಗಳು ಸೇರಿವೆ. ಅಜೇಯ 278 ಸರ್ವಶ್ರೇಷ್ಠ ರನ್ ಆಗಿದೆ. ಮೊದಲ ಟೆಸ್ಟ್ ಪಂದ್ಯ(ನವೆಂಬರ್ 05)ವನ್ನು ಮೊಹಾಲಿಯಲ್ಲಿ ಆಡಲಿದ್ದಾರೆ. ಕೊನೆ ಪಂದ್ಯ ನವದೆಹಲಿಯಲ್ಲಿ ನಡೆಯಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ(ನವೆಂಬರ್ 14-18) 9.30ಕ್ಕೆ ಆರಂಭ. ಟಿಕೆಟ್ ಸಿಗುವ ಸ್ಟ್ಯಾಂಡ್ ಹಾಗೂ ದರ ಪಟ್ಟಿ ಹೀಗಿದೆ. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ]

* P 2 - Rs 2,000 (ಊಟ ಸಹಿತ)
* P-Corporate - Rs 1,250 (ಊಟ ಸಹಿತ)
* P 1 - Rs 750
* P Terrace - Rs 500
* P 4 - Rs 750
* P 3 - Rs 400

* E Executive - Rs 300
* D Corporate - Rs 200
* A-upper - Rs 150
* B-upper - Rs 150
* B-lower - Rs 150
* N stand - Rs 300
* C-lower - Rs 75
* C-upper - Rs 150
* G-upper - Rs 150
* G-lower - Rs 50
* M-3 - Rs 150
* M-4 - Rs 100

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X