ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಕೋಚ್ ಹುದ್ದೆಗೆ 6 ಜನ ಫೈನಲ್, ಮುಂಚೂಣಿಯಲ್ಲಿ ರವಿಶಾಸ್ತ್ರಿ!

ಮುಂಬೈ, ಜುಲೈ 10 : ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವುಗೊಂಡಿರುವ ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ಸಂದರ್ಶನ ಇಂದು (ಸೋಮವಾರ) ನಡೆಯುತ್ತಿದೆ.

ಭಾರತದ ಮಾಜಿ ಕ್ರಿಕೆಟರ್ಸ್ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ನೇತೃತ್ವದಲ್ಲಿ ಮುಂಬೈನಲ್ಲಿ ಟಿಂ ಇಂಡಿಯಾ ಕೋಚ್ ಹುದ್ದೆಗೆ ಸಂದರ್ಶನ ನಡೆಯುತ್ತಿದೆ.

ಕೋಚ್ ಹುದ್ದೆಗೆ 10 ಜನ ಫೈನಲ್, ರವಿಶಾಸ್ತ್ರಿ ರೇಸಿನಲ್ಲಿ ಮುಂದೆǃಕೋಚ್ ಹುದ್ದೆಗೆ 10 ಜನ ಫೈನಲ್, ರವಿಶಾಸ್ತ್ರಿ ರೇಸಿನಲ್ಲಿ ಮುಂದೆǃ

ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಲ್ಯಾನ್ಸ್ ಕ್ಲುಸ್ನರ್, ರಾಕೇಶ್ ಶರ್ಮ(ಒಮಾನ್ ತಂಡದ ಕೋಚ್), ಫಿಲ್ ಸಿಮನ್ಸ್ ಹಾಗೂ ಉಪೇಂದ್ರ ಬ್ರಹ್ಮಚಾರಿ(ಕ್ರಿಕೆಟ್ ಹಿನ್ನಲೆಯಿಲ್ಲದ ಇಂಜಿನಿಯರ್) ಒಟ್ಟು 10 ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಬಿಸಿಸಿಐ 6 ಮಂದಿಯ ಅರ್ಜಿಯನ್ನು ಸಂದರ್ಶನಕ್ಕೆ ಅಂತಿಮಗೊಳಿಸಿದೆ.

ಅಂತಿಮ 6ರಲ್ಲಿ ಯಾರ್ಯಾರು ಇದ್ದಾರೆ? ಅದರಲ್ಲಿ ಪ್ರಬಲವಾಗಿ ಕೇಳಿಬಂದಿರುವ ಹೆಸರುಗಳು ಯಾವುವು? ಎಂಬುವುದನ್ನು ತಿಳಿಯಲು ಮುಂದೆ ಓದಿ..

ಮುಂಚೂಣಿಯಲ್ಲಿ ರವಿಶಾಸ್ತ್ರಿ

ಮುಂಚೂಣಿಯಲ್ಲಿ ರವಿಶಾಸ್ತ್ರಿ

ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ 6 ಮಂದಿಯ ಅರ್ಜಿಯನ್ನು ಅಂತಿಮಗೊಳಿಸಲಾಗಿದ್ದು, ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರ ಹೆಸರು ಮುಂಚೂಣಿಯಲ್ಲಿದೆ. 2014ರಿಂದ 2016ರ ಅವಧಿಯಲ್ಲಿ ರವಿಶಾಸ್ತ್ರಿ, ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿಗೆ ಹೆಚ್ಚು ಆಪ್ತರಾಗಿರುವ ಕಾರಣದಿಂದ ಈ ಬಾರಿ ಕೋಚ್ ಹುದ್ದೆಯ ಆಯ್ಕೆಯಲ್ಲಿ ಉಂಟಾಗಿರುವ ತುರುಸಿನ ಸ್ಪರ್ಧೆಯಲ್ಲಿ ಮಿಕ್ಕೆಲ್ಲಾ ಅಭ್ಯರ್ಥಿಗಳಿಗಿಂತ ಮಂಚೂಣಿಯಲ್ಲಿದ್ದಾರೆಂದು ಹೇಳಲಾಗಿದೆ.

ನಂತರದ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್

ನಂತರದ ಸ್ಥಾನದಲ್ಲಿ ವಿರೇಂದ್ರ ಸೆಹ್ವಾಗ್

ಕುಂಬ್ಳೆ ಅವಧಿ ಮುಕ್ತಾಯದ ನಂತರ ಕೋಚ್ ಹುದ್ದೆಯನ್ನು ಭರ್ತಿ ಮಾಡಲು ಬಿಸಿಸಿಐ ಮೊದಲ ಬಾರಿಗೆ ಅರ್ಜೀ ಆಹ್ವಾನಿಸಿದ ಸಮಯದಲ್ಲಿ ಸೆಹ್ವಾಗ್ ಅವರೇ ಟೀಂ ಇಂಡಿಯಾದ ಕೋಚ್ ಎಂದು ಎಲ್ಲೆಡೆ ಸುದ್ದಿ ಹರಿದಾಡತೊಡಗಿತ್ತು. ಆದರೆ, ರವಿಶಾಸ್ತ್ರಿ ಅರ್ಜಿ ಹಾಕಿದ ಬಳಿಕ ಸೆಹ್ವಾಗ್ ಅವರ ಹೆಸರು ರೇಸಿಂಗ್ ನಿಂದ 2ನೇ ಸ್ಥಾನಕ್ಕೆ ಇಳಿದಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಸಹ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಇವರ ಹೆಸರೂ ಕೂಡ ಪ್ರಬಲವಾಗಿ ಕೇಳಿ ಬರುತ್ತಿದೆ ಆದರೂ ಇವರಿಗೆ ಕೋಚ್ ಹುದ್ದೆ ದಕ್ಕುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಕೊನೆಗಳಿಗೆಯಲ್ಲಿ ಏನು ಹೇಳುವುದಕ್ಕೆ ಬರುವುದಿಲ್ಲ.

ವೆಸ್ಟ್ ಇಂಡೀಸ್ ನ ದಿಗ್ಗಜ ಫಿಲ್ ಸಿಮನ್ಸ್

ವೆಸ್ಟ್ ಇಂಡೀಸ್ ನ ದಿಗ್ಗಜ ಫಿಲ್ ಸಿಮನ್ಸ್

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವೆಸ್ಟ್ ಇಂಡೀಸ್ ನ ದಿಗ್ಗಜ ಫಿಲ್ ಸಿಮನ್ಸ್ ಅರ್ಜಿ ಹಾಕಿದ್ದು, ಇವರು ಅಂತಿಮ 6ರ ಪಟ್ಟಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ, ಕೋಚ್ ಹುದ್ದೆ ರೇಸಿಂಗ್ ನಲ್ಲಿ ಸ್ವಲ್ಪ ಮಟ್ಟಿಗೆ ಹಿಂದೆ ಇದ್ದರಾದರೂ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಸಿಮನ್ಸ್ ಅವರಿಗೆ ಕೊನೆಗಳಿಗೆಯಲ್ಲಿ ಹುದ್ದೆ ದಕ್ಕಿದರೇ ಆಶ್ಚರ್ಯ ಪಡಬೇಕಿಲ್ಲ.

ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪೂತ್

ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪೂತ್

ಭಾರತ ಕ್ರಿಕೆಟ್ ತಂಡದ ಮಾಜಿ ಮ್ಯಾನೇಜರ್ ಲಾಲ್ ಚಂದ್ ರಜಪೂತ್ ಅವರೂ ಸಹ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದು, ಕೊನೆಗಳಿಗೆಯಲ್ಲಿ ಕೋಚ್ ಸ್ಥಾನದಿಂದ ಹಿಂದೆ ಸರಿದಿರುವ ಬಗ್ಗೆ ಗುಲ್ಲೆದ್ದಿತ್ತು. ಆದರೂ ಇವರನ್ನು ತಳ್ಳಿಹಾಕುವಂತಿಲ್ಲ.

ಆಂಗ್ಲದ ರಿಚರ್ಡ್ ಪೈಬಸ್

ಆಂಗ್ಲದ ರಿಚರ್ಡ್ ಪೈಬಸ್

ಭಾರತೀಯರಿಗೆ ಹೆಚ್ಚೂಕಡಿಮೆ ಅಪರಿಚಿತರಾಗಿರುವ ರಿಚರ್ಡ್ ಪೈಬಸ್ ಸಾಕಷ್ಟು ಕೋಚಿಂಗ್ ಅನುಭವ ಹೊಂದಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ರಾಷ್ಟ್ರೀಯ ತಂಡಗಳ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಆಂಗ್ಲ ಸಂಜಾತ ಪೈಬಸ್ ಅವರು ಸದ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಅನುಭವಿ ಆಗಿರುವ ಪೈಬಸ್ ಕೋಚ್ ಆದರೂ ಆಶ್ಚರ್ಯವೆನಿಲ್ಲ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X