ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಯಾಂಕ್, ಪಾಂಡೆ ಭರ್ಜರಿ ಶತಕ ಫೈನಲಿಗೆ ಭಾರತ ಎ

By Mahesh

ಚೆನ್ನೈ, ಆಗಸ್ಟ್ 13:ತ್ರಿಕೋನ ಏಕದಿನ ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಕರ್ನಾಟಕದ ಮಾಯಾಂಕ್ ಅಗರವಾಲ್ ಹಾಗೂ ಮನೀಶ್ ಪಾಂಡೆ ಭರ್ಜರಿ ಶತಕ ಸಿಡಿಸಿ ಅದ್ಭುತ ಆಟವಾಡಿದ್ದಾರೆ.

ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಕೂಡಾ ಸಮರ್ಥವಾಗಿ ಆಟ ಪ್ರದರ್ಶಿಸಿದರೂ ಕೊನೆಗೆ 34ರನ್ ಗಳಿಂದ ಪಂದ್ಯ ಬಿಟ್ಟುಕೊಟ್ಟಿದೆ. 50 ಓವರ್ ಗಳಲ್ಲಿ 337/6 ಸ್ಕೋರ್ ಮಾಡಿತು. ಕ್ವಿಂಟನ್ ಡಿ ಕಾಕ್ 113 ರನ್ ಹಾಗೂ ಖಾಯಾ ಜೋಂಡು 86ರನ್ ಗಳಿಸಿದರು ಅಕ್ಷರ್ ಪಟೇಲ್ 3/32 ಪಡೆದುಕೊಂಡರು.

ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಅವರು 133 ಎಸೆತಗಳಲ್ಲಿ 176 ರನ್ ಚೆಚ್ಚಿದರೆ, ಮನೀಶ್ ಪಾಂಡೆ ಅವರು ಜವಾಬ್ದಾರಿಯುತ 108 ರನ್ ಗಳಿಸಿದ್ದಾರೆ. ಈ ಸರಣಿಯಲ್ಲಿ ಈಗಾಗಲೇ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಿದೆ.

Mayank Agarwal smashes 133-ball 176 as India A post 371/3

24 ವರ್ಷ ವಯಸ್ಸಿನ ಬೆಂಗಳೂರಿನ ಸ್ಫೋಟಕ ಬ್ಯಾಟ್ಸ್ ಮನ್ ಮಾಯಾಂಕ್ ಅವರು ತಮ್ಮ ಚೊಚ್ಚಲ ದ್ವಿಶತಕ ದಾಖಲಿಸುವ ಉತ್ಸಾಹದಲ್ಲಿದರು. ಆದರೆ, 46ನೇ ಓವರ್ ನಲ್ಲಿ 176ರನ್ ಆಡುತ್ತಿದ್ದಾಗ ಕ್ಯಾಚಿತ್ತು ಔಟಾದರು. ಮಾಯಾಂಕ್ ಅವರು ತಮ್ಮ ಇನ್ನಿಂಗ್ಸ್ ನಲ್ಲಿ 20 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್ ಸಿಡಿಸಿದ್ದಾರೆ.

ಮಾಯಾಂಕ್ ಜೊತೆಗೂಡಿದ ಪಾಂಡೆ ಅವರು 85 ಎಸೆತಗಳಲ್ಲಿ 108 ರನ್ (8X4, 2x6) ಚೆಚ್ಚಿದರು. ಕರ್ನಾಟಕದ ಈ ಇಬ್ಬರು ಬ್ಯಾಟ್ಸ್ ಮನ್ ಗಳ ಶತಕದ ನೆರವಿನಿಂದ 50 ಓವರ್ ಗಳಲ್ಲಿ 371/3 ಸ್ಕೋರ್ ಮಾಡಿತು.

ಆಗಸ್ಟ್ 14 ರಂದು ಆಸ್ಟ್ರೇಲಿಯಾ ಎ ವಿರುದ್ಧ ಯಾವ ತಂಡ ಸ್ಪರ್ಧಿಸಲಿದೆ ಎಂಬುದು ಗುರುವಾರ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಿರ್ಧಾರವಾಗಲಿದೆ.

ಸಂಕ್ಷಿಪ್ತ ಸ್ಕೋರ್:
ಭಾರತ ಎ 371/3, 50 ಓವರ್ಸ್ (ಮಾಯಾಂಕ್ ಅಗರವಾಲ್ 176, ಮನೀಶ್ ಪಾಂಡೆ 10 ಅಜೇಯ, ಉನ್ಮುಕ್ತ್ ಚಂದ್ 64)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X