ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಿತ್ರಗಳಲ್ಲಿ ಸಿಂಹಗಳ ಮೇಲೆ ಡೆಲ್ಲಿ ಸರದಾರರ ಸವಾರಿ

By Mahesh

ಪುಣೆ, ಏ.16: ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಕೊನೆಗೂ ಲಕ್ ತಿರುಗಿದೆ. ಕೋಟಿಗಟ್ಟಲೆ ದುಡ್ಡು ಸುರಿದು ಪಡೆದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಮತ್ತೆ ಲಯಕ್ಕೆ ಮರಳಿದ್ದಾರೆ. ಯುವ ಆಟಗಾರ ಮಾಯಾಂಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಪಂಬಾಬಿನ ಸಿಂಹಗಳ ಮೇಲೆ ಡೆಲ್ಲಿ ಸರದಾರರು ಸವಾರಿ ಮಾಡುವ ಮೂಲಕ ಐಪಿಎಲ್ 2015ರಲ್ಲಿ ಮೊದಲ ಜಯ ದಾಖಲಿಸಿದ್ದಾರೆ.

ಐಪಿಎಲ್‌ನ 10ನೇ ಪಂದ್ಯದಲ್ಲಿ ಬಲಿಷ್ಠ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ ತಂಡ 5 ವಿಕೆಟ್‌ಗಳ ಜಯ ಗಳಿಸಿ, ಗೆಲುವಿನ ರುಚಿ ಕಂಡಿದೆ. ಐಪಿಎಲ್ ನಲ್ಲಿ ಸತತ 11 ಪಂದ್ಯ ಸೋತಿದ್ದ ಡೆಲ್ಲಿ 12ನೇ ಪಂದ್ಯದಲ್ಲಿ ಜಯ ದಾಖಲಿಸಿದೆ. []

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 166 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಆಲ್‌ರೌಂಡರ್ ಯುವರಾಜ್ ಸಿಂಗ್(55) ಮತ್ತು ಮಾಯಾಂಕ್ ಅಗರವಾಲ್ (68) ನೆರವಿನಿಂದ 5 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಗೆಲುವು ಪಡೆಯಿತು.

ಪ್ರೀತಿಗಾಗಿ ಬಂದೆ ಎಂದ ನಟ ಅರ್ಬಾಜ್ ಖಾನ್

ಪ್ರೀತಿಗಾಗಿ ಬಂದೆ ಎಂದ ನಟ ಅರ್ಬಾಜ್ ಖಾನ್

ಐಪಿಎಲ್ ಆಟದ ಬಗ್ಗೆ ಇರುವ ಪ್ರೀತಿ ಹಾಗೂ ನಟಿ ಪ್ರೀತಿ ತಂಡವನ್ನು ಬೆಂಬಲಿಸಲು ಬಂದೆ ಎಂದ ಬಾಲಿವುಡ್ ನಟ ಅರ್ಬಾಜ್ ಖಾನ್. PTI Photo /BCCI

ವೀರೆಂದರ್ ಸೆಹ್ವಾಗ್ ಉತ್ತಮ ಆರಂಭ

ವೀರೆಂದರ್ ಸೆಹ್ವಾಗ್ ಉತ್ತಮ ಆರಂಭ

ಪಂಜಾಬ್ ಪರ ವೀರೆಂದರ್ ಸೆಹ್ವಾಗ್ ಉತ್ತಮ ಆರಂಭ ಒದಗಿಸಿದರು. 4 ಬೌಂಡರಿ, 2 ಸಿಕ್ಸರ್ ಸಿಡಿಸಿ 41 ಎಸೆತಗಳಲ್ಲಿ 47 ರನ್ ಗಳಿಸಿದರು

ಡೆಲ್ಲಿ ನಾಯಕ ಜೆಪಿ ಡುಮಿನಿ ರನೌಟ್

ಡೆಲ್ಲಿ ನಾಯಕ ಜೆಪಿ ಡುಮಿನಿ ರನೌಟ್

ಡೆಲ್ಲಿ ನಾಯಕ ಜೆಪಿ ಡುಮಿನಿ ರನೌಟ್ ಮಾಡಿದ ಸಂಭ್ರಮದಲ್ಲಿ ಪಂಜಾಬ್ ಆಟಗಾರರು

ಭರ್ಜರಿ ಆಟ ಪ್ರದರ್ಶಿಸಿದ ಮಾಯಾಂಕ್

ಭರ್ಜರಿ ಆಟ ಪ್ರದರ್ಶಿಸಿದ ಮಾಯಾಂಕ್

ಮಾಯಾಂಕ್ ಅಗರವಾಲ್ ಉತ್ತಮ ಆಟ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. 42 ರನ್ ಗಳಿಸಿದ್ದಾಗ ಜೀವದಾನ ಪಡೆದ ಲಾಭ ಗಳಿಸಿ 68ರನ್ ಗಳಿಸಿ ತಂಡದ ಜಯಕ್ಕೆ ಕಾರಣರಾದರು. PTI Photo /BCCI

ಅರ್ಧಶತಕ ಗಳಿಸಿದ ಯುವರಾಜ್ ಸಿಂಗ್

ಅರ್ಧಶತಕ ಗಳಿಸಿದ ಯುವರಾಜ್ ಸಿಂಗ್

ಅರ್ಧಶತಕ ಗಳಿಸಿದ ಯುವರಾಜ್ ಸಿಂಗ್ ಡೆಲ್ಲಿ ತಂಡಕ್ಕೆ ಆಸರೆಯಾದರು. ದುಬಾರಿ ಬೆಲೆ ಹೊತ್ತಿರುವ ಯುವಿ ಮತ್ತೆ ಲಯಕ್ಕೆ ಮರಳಿರುವುದು ಅವರ ಅಭಿಮಾನಿಗಳಿಗೆ ಸಕತ್ ಖುಷಿ ಕೊಟ್ಟಿದೆ.PTI Photo /BCCI

ಅನುರೀತ್ ಸಿಂಗ್ ಗೆ ಎರಡು ವಿಕೆಟ್

ಅನುರೀತ್ ಸಿಂಗ್ ಗೆ ಎರಡು ವಿಕೆಟ್

ಮಾಯಾಂಕ್ ಅಗರವಾಲ್, ಯುವರಾಜ್ ಸಿಂಗ್ ಇಬ್ಬರನ್ನು ಔಟ್ ಮಾಡಿದ ಅನುರೀತ್ ಸಿಂಗ್ ಸಂಭ್ರಮ

ಡೇವಿಡ್ ಮಿಲ್ಲರ್ ವೈಫಲ್ಯ

ಡೇವಿಡ್ ಮಿಲ್ಲರ್ ವೈಫಲ್ಯ

ಡೇವಿಡ್ ಮಿಲ್ಲರ್ ವೈಫಲ್ಯ ಪಂಜಾಬಿ ದುಬಾರಿ ಎನಿಸಿತು. 5 ರನ್ ಗಳಿಸಿದ್ದ ಮಿಲ್ಲರ್ ಜೆಪಿ ಡುಮಿನಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.

ಸ್ಪಿನ್ ಮೋಡಿಗೆ ಸಿಲುಕಿದ ಪಂಜಾಬಿಗಳು

ಸ್ಪಿನ್ ಮೋಡಿಗೆ ಸಿಲುಕಿದ ಪಂಜಾಬಿಗಳು

ಇಮ್ರಾನ್ ತಾಹೀರ್(3 ವಿಕೆಟ್) ಹಾಗೂ ಜೆಪಿ ಡುಮಿನಿ(2) ಮತ್ತು ಅಮಿತ್ ಮಿಶ್ರಾ(1) ಸ್ಪಿನ್ ಮೋಡಿಗೆ ಸಿಲುಕಿದ ಪಂಜಾಬಿಗಳು

ಮಾಯಾಂಕ್ ಬಗ್ಗೆ ಯುವರಾಜ್ ಮೆಚ್ಚುಗೆಯ ಮಾತು

ಮಾಯಾಂಕ್ ಬಗ್ಗೆ ಯುವರಾಜ್ ಮೆಚ್ಚುಗೆಯ ಮಾತು

ಮಾಯಾಂಕ್ ಬಗ್ಗೆ ಯುವರಾಜ್ ಮೆಚ್ಚುಗೆಯ ಮಾತುಗಳನ್ನಾಡಿ, ಟೀಂ ಇಂಡಿಯಾ ಸೇರುವ ಎಲ್ಲಾ ಪ್ರತಿಭೆ ಆತನಲ್ಲಿದೆ ಎಂದಿದ್ದಾರೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X