ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಕ್ಸಿಂಗ್ ಬಗ್ಗೆ ಲಮೋ ಲೆಟರ್ ಕಳಿಸಿದ್ದು ನಿಜ: ಐಸಿಸಿ

By Mahesh

ಬೆಂಗಳೂರು, ಜೂ.29: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರಾದ ಸುರೇಶ್ ರೈನಾ, ರವೀಂದ್ರ ಜಡೇಜ ಹಾಗೂ ವೆಸ್ಟ್ ಇಂಡೀಸ್ ನ ಡ್ವಾಯ್ನೆ ಬ್ರಾವೋ ಅವರಿಗೆ ರಿಯಲ್ ಎಸ್ಟೇಟ್ ಉದ್ಯಮಿ ಕಮ್ ಬುಕ್ಕಿಯೊಬ್ಬನಿಂದ ಭಾರಿ ಮೊತ್ತ ಗಿಫ್ಟ್ ಸಿಕ್ಕಿರುವ ಬಗ್ಗೆ ಲಮೋ ಹೇಳಿದ್ದೆಲ್ಲ ಸತ್ಯ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದೃಢಪಡಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಡೇವ್ ರಿಚರ್ಡ್ ಸನ್ ​ಅವರಿಗೆ ಬರೆದಿದ್ದ ಪತ್ರವನ್ನು ಮೋದಿ ಬಹಿರಂಗ ಪಡಿಸಿದ್ದರು. ಈ ಪತ್ರದ ಸತ್ಯಾಸತ್ಯತೆ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಐಸಿಸಿ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. [ಐಪಿಎಲ್ ಫಿಕ್ಸಿಂಗ್ ಭೂತ ಎಬ್ಬಿಸಿದ ಲಲಿತ್ ಮೋದಿ]

ICC confirms Lalit Modi's mail


ಲಲಿತ್ ಮೋದಿ ಅವರು ಬರೆದಿದ್ದ ಪತ್ರ ಜೂನ್ 2013ರಲ್ಲಿ ಐಸಿಸಿ ತಲುಪಿದ್ದು, ಇದನ್ನು ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರವಾನಿಸಲಾಗಿತ್ತು, ಈ ಬಗ್ಗೆ ಬಿಸಿಸಿಐ ನ ನಿಗ್ರಹ ದಳದಿಂದಲೂ ಮಾಹಿತಿ ಕೋರಲಾಗಿತ್ತು ಎಂದು ಐಸಿಸಿ ಹೇಳಿದೆ.

ಸಿಎಸ್​ಕೆ ತಂಡದ ಈ ಮೂರು ಆಟಗಾರರಿಗೆ ಬುಕ್ಕಿ ಬಾಬಾ ದಿವಾನ್​ನಿಂದ ಲಂಚದ ರೂಪದಲ್ಲಿ ಒಟ್ಟಾರೆ 20 ಕೋಟಿ ರೂ. ಮೊತ್ತದ ನಗದು ಮತ್ತು ಫ್ಲ್ಯಾಟ್​ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಪ್ರತಿ ಪಂದ್ಯಕ್ಕೂ 50-110 ಕೋಟಿ ರು ಬೆಟ್ಟಿಂಗ್ ನಡೆಸಲಾಗುತ್ತದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು.

ಬುಕ್ಕಿ ದಿವಾನ್ ಹಾಗೂ ಗುರುನಾಥ್ ಮೇಯಪ್ಪನ್ ಮತ್ತು ರಾಜ್ ಕುಂದ್ರಾಗೂ ಗೆಳೆತನವಿತ್ತು. ದಿವಾನ್ ಒಡೆತನದ ಎಚ್​ಡಿಐಎಲ್ ಕಂಪನಿಯಿಂದ ಜಡೇಜಾಗೆ ಬಾಂದ್ರಾದ ಫ್ಲ್ಯಾಟ್ ಸಿಕ್ಕಿದ್ದರೆ, ರೈನಾ ಗೆ ದೆಹಲಿಯ ವಸಂತ್ ವಿಹಾರ್ ಹಾಗೂ ನೋಯ್ಡಾದಲ್ಲಿ ಹೊಸ ಮನೆಗಳು ಸಿಕ್ಕಿದೆ. ಬ್ರಾವೋ ನಗದು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X