ಟಿ-20 ವಿಶ್ವಕಪ್: ಆಟಗಾರರಿಗೆ ಡೋಪಿಂಗ್ ಟೆಸ್ಟ್ ಕಡ್ಡಾಯ

Subscribe to Oneindia Kannada

ನವದೆಹಲಿ, ಮಾರ್ಚ್, 11:ಐಸಿಸಿ ಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಎಲ್ಲ ಆಟಗಾರರಿಗೆ ಡೋಪಿಂಗ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.

ನಿರಂತರವಾಗಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಆಟಗಾರರನ್ನು ಒಳಪಡಿಸಲಾಗುತ್ತಿದೆ. ಇದನ್ನು ಈ ವಿಶ್ವಕಪ್ ವೇಳೆ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ ಎಂದು ಪಂದ್ಯಾವಳಿಯ ನಿರ್ದೇಶಕ ಎಂ ವಿ ಶ್ರೀಧರ್ ತಿಳಿಸಿದ್ದಾರೆ.[ಪಾಕಿಸ್ತಾನ ಕೋಲ್ಕತಾಗೆ ಬಂದ್ರೆ ಈಡನ್‌ಗೆ 'ಗುದ್ದಲಿ' ಪೂಜೆ!]

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

t20

ಐಸಿಸಿ ಅಂತಾರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷಾ ಕೇಂದ್ರದ ಭಾಗವಲ್ಲ. ಆದರೂ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.2011 ರ ವಿಶ್ವಕಪ್ ನಂತರ ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಿಕೊಂಡು ಬರಲಾಗುತ್ತಿದೆ. 2012,2014 ರ ಟಿ-20 ವಿಶ್ವಕಪ್ ನಲ್ಲಿಯೂ ಮದ್ದು ಪರೀಕ್ಷೆ ಕೈಗೊಳ್ಳಾಗಿತ್ತು ಎಂದು ತಿಳಿಸಿದರು.[ಡ್ರಗ್ಸ್ ಸೇವನೆ: ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ನಿಷೇಧ]

ಖ್ಯಾತ ಟೆನಿಸ್ ತಾರೆ ಮರಿಯಾ ಶರಪೋವಾ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾಗಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಅಲ್ಲದೇ ಅನೇಕ ಸಂಸ್ಥೆಗಳು ಅವರೊಂದಿಗೆ ಇದ್ದ ಒಪ್ಪಂದವನ್ನು ಕೈ ಬಿಟ್ಟಿದ್ದವು.

English summary
The International Cricket Council will conduct random dope tests during the World Twenty20 Championship in India, which is a regular practice in all ICC events, Tournament Director MV Sridhar said."The random dope tests have been a part of ICC events for a long time. Random dope tests are performed at all ICC events and it is not a new phenomenon," Tournament Director M V Sridhar told PTI.
Please Wait while comments are loading...