ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಗ್ಲರನ್ನು ಬಗ್ಗು ಬಡಿದ ಪಾಕಿಸ್ತಾನ, ಚಾಂಪಿಯನ್ಸ್ ಟ್ರೋಫಿ ಫೈನಲಿಗೆ

By Mahesh

ಕಾರ್ಡಿಫ್, ಜೂನ್ 14: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಟಾಸ್ ಹಾಗೂ ಮ್ಯಾಚ್ ಗೆದ್ದು ಜಯಭೇರಿ ಬಾರಿಸಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 49.5 ಓವರ್ ಗಳಲ್ಲಿ 211 ಸ್ಕೋರಿಗೆ ಆಲೌಟ್ ಆಯಿತು. ಈ ಮೊತ್ತವನ್ನು 37.1 ಓವರ್ ಗಳಲ್ಲಿ ಚೇಸ್ ಮಾಡಿ 215/2 ಸ್ಕೋರ್ ಮಾಡಿ 8 ವಿಕೆಟ್ ಗಳಿಂದ ಜಯ ಗಳಿಸಿ ಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ನಾಯಕ ಸರ್ಫರಾಜ್ ಅಹ್ಮದ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ಇಂಗ್ಲೆಂಡ್ ತಂಡವನ್ನು 212 ಸ್ಕೋರಿಗೆ ನಿಯಂತ್ರಿಸಿತು. ಹಸನ್ ಅಲಿ 3/35 ಗಳಿಸಿದರು. ಇಂಗ್ಲೆಂಡ್ ಪರ ರೂಟ್ 46ರನ್ ಗಳಿಸಿದರು. ರನ್ ಚೇಸ್ ನಲ್ಲಿ ಅಜರ್ ಅಲಿ ಭರ್ಜರಿ 76 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಎರಡನೇ ಸೆಮಿಫೈನಲ್ ಪಂದ್ಯ ಜೂನ್ 15ರಂದು ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ. ಜೂನ್ 18ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿ 2017: ಗ್ಯಾಲರಿ

ICC Champions Trophy: Semi-final 1: Pakistan invite England to bat first


ಇಂದಿನ ಪಂದ್ಯದಲ್ಲಿ ಲಯದ ಕಳೆದುಕೊಂಡಿರುವ ಜಾಸನ್ ರಾಯ್ ಬದಲಿಗೆ ಜಾನಿ ಬೈರ್ಸ್ಟೋ ಅವರನ್ನು ಇಂಗ್ಲೆಂಡ್ ಕಣಕ್ಕಿಳಿಸಿದೆ. ಪಾಕಿಸ್ತಾನ ತಂಡದಿಂದ ವೇಗಿ ಮೊಹಮ್ಮದ್ ಅಮೀರ್ ಹೊರಗುಳಿದಿದ್ದಾರೆ.

ಗಾಯಾಳು ಅಮೀರ್ ಬದಲಿಗೆ ರುಮಾನ್ ರಯೀಸ್ ಬಂದಿದ್ದರೆ, ಫಹೀಮ್ ಅಶ್ರಫ್ ಬದಲಿಗೆ ಲೆಗ್ ಸ್ಪಿನ್ನರ್ ಶಬಾದ್ ಖಾನ್ ತಂಡ ಸೇರಿದ್ದಾರೆ.

ಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿ, ಟಿವಿ ಪ್ರಸಾರ ಮಾಹಿತಿಚಾಂಪಿಯನ್ಸ್ ಟ್ರೋಫಿ : ಸೆಮಿಫೈನಲ್ ವೇಳಾಪಟ್ಟಿ, ಟಿವಿ ಪ್ರಸಾರ ಮಾಹಿತಿ

ಆಡುವ ಹನ್ನೊಂದು ಮಂದಿ:
ಇಂಗ್ಲೆಂಡ್ : ಜಾನಿ ಬೈರ್ಸ್ಟೋ, ಅಲೆಕ್ಸ್ ಹೇಲ್ಸ್, ಜೋ ರೂಟ್, ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮೋಯಿನ್ ಅಲಿ, ಅದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್, ಜೇಕ್ ಬಾಲ್.

ಏಕದಿನ ಶ್ರೇಯಾಂಕ: ಎಬಿಡಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕೊಹ್ಲಿಏಕದಿನ ಶ್ರೇಯಾಂಕ: ಎಬಿಡಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕೊಹ್ಲಿ

ಪಾಕಿಸ್ತಾನ: ಅಜರ್ ಅಲಿ, ಫಖಾರ್ ಜಮಾನ್, ಬಾಬರ್ ಅಜಮ್, ಮೊಹಮ್ಮದ್ ಹಫೀಜ್, ಶೋಯಿಬ್ ಮಲೀಕ್, ಸರ್ಫರಾಜ್ ಅಹ್ಮದ್(ನಾಯಕ, ವಿಕೆಟ್ ಕೀಪರ್), ಇಮಾದ್ ವಾಸೀಂ, ರುಮಾನ್ ರಯೀಸ್, ಶಬಾದ್ ಖಾನ್, ಹಸನ್ ಅಲಿ, ಜುನೈದ್ ಖಾನ್.(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X