ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ ಸೋತ ಕಿವೀಸ್, ಟೂರ್ನಿಯಿಂದ ಔಟ್!

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 265/8 ಸ್ಕೋರ್ ಮಾಡಿತ್ತು. ಈ ಗುರಿಯನ್ನು 47.2 ಓವರ್ ಗಳಲ್ಲಿ 268/5 ಗಳಿಸಿದ ಬಾಂಗ್ಲಾ ಜಯಭೇರಿ ಬಾರಿಸಿತು.

By Mahesh

ಕಾರ್ಡಿಫ್, ಜೂನ್ 09 : ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 265/8 ಸ್ಕೋರ್ ಮಾಡಿತ್ತು. ಈ ಗುರಿಯನ್ನು 47.2 ಓವರ್ ಗಳಲ್ಲಿ 268/5 ಗಳಿಸಿದ ಬಾಂಗ್ಲಾ ಜಯಭೇರಿ ಬಾರಿಸಿತು.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಬಾಂಗ್ಲಾ ಚೇಸಿಂಗ್:
* ಉತ್ತಮ ಲಯದಲ್ಲಿರುವ ತಮೀಮ್ ಇಕ್ಬಾಲ್ ಶೂನ್ಯಕ್ಕೆ ಔಟ್.
* ಶಕೀಬ್ ಅಲ್ ಹಸನ್ 114ರನ್, ಮಹಮದುಲ್ಲಾ ಅಜೇಯ 102ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
* ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಗೆದ್ದರೆ, ಈ ಟೂರ್ನಿಯಲ್ಲಿ ಟಾಪ್ ತಂಡಗಳಾದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಎರಡು ಎ ಗುಂಪಿನಿಂದ ಮನೆಗೆ ಹೋಗುತ್ತವೆ. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಸೆಮೀಸ್ ತಲುಪಲಿವೆ.

ನ್ಯೂಜಿಲೆಂಡ್ ಇನ್ನಿಂಗ್ಸ್:
* ಕೇನ್ ವಿಲಿಯಮ್ಸನ್ 57, ರಾಸ್ ಟೇಲರ್ 63 ರನ್ ಗಳಿಸಿ ಉತ್ತಮ ಆಟ ನೀಡಿದರು.
* ಬಾಂಗ್ಲಾ ಪರ ಮೊಸೆಡೆಕ್ ಹುಸೇನ್ 13ರನ್ನಿತ್ತು 3 ಓವರ್ ಗಳಲ್ಲಿ 3 ವಿಕೆಟ್ ಕಿತ್ತರು.

Match 9: New Zealand 265/8 in 50 overs, Bangladesh need 266 to win


ಎ ಗುಂಪಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಈ ಎರಡು ತಂಡಗಳು ಸೋಲು ಕಂಡಿವೆ. ಈ ಪಂದ್ಯವನ್ನು ಗೆದ್ದವರು ಸೆಮಿಫೈನಲ್ ಕನಸು ಕಾಣಬಹುದು. ಆದರೆ, ಆಸ್ಟ್ರೇಲಿಯಾ ತಂಡವು ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಗಳಿಸಬೇಕಿದೆ. 2005ರಲ್ಲಿ ಇದೇ ಮೈದಾನದಲ್ಲಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಬಾಂಗ್ಲಾದೇಶ ಭರ್ಜರಿ ಜಯ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X