ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆಯಲ್ಲಿ ಬ್ಯಾಟಿಂಗ್ ಕ್ರಮಾಂಕವೇ ಮುಳುವಾಯ್ತು: ರಾಬಿನ್

By Mahesh

ಬೆಂಗಳೂರು, ಆಗಸ್ಟ್ 05: ಜಿಂಬಾಬ್ವೆ ಪ್ರವಾಸದ ವೇಳೆ ತೆಗೆದುಕೊಂಡ ನಿರ್ಣಯಗಳು ನನ್ನ ಪಾಲಿಗೆ ಮುಳುವಾಯಿತು ಎಂದು ಕರ್ನಾಟಕದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಟೀಂ ಇಂಡಿಯಾದ ಏಕದಿನ ತಂಡಕ್ಕೆ ಸೇರಲು ಕಠಿಣ ತಯಾರಿ ನಡೆಸುತ್ತಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಮುಳುವಾಯ್ತು ಎಂದು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾದಾಗ 29 ವರ್ಷ ವಯಸ್ಸಿನ ಉತ್ತಪ್ಪ ಅವರಿಗೆ ಮತ್ತೊಮ್ಮೆ ಟೀಂ ಇಂಡಿಯಾ ಬಾಗಿಲು ತೆಗೆಯುವ ಆಸೆ ಹುಟ್ಟುಕೊಂಡಿತು. ಇದಕ್ಕೆ [ಕೆಪಿಎಲ್ 2015: ಶಿವಮೊಗ್ಗಕ್ಕೆ ಬಿನ್ನಿ, ಬಿಜಾಪುರಕ್ಕೆ ಉತ್ತಪ್ಪ]ಅವಕಾಶಗಳು ಇತ್ತು. []

ಆದರೆ, ಟೂರ್ನಿಯುದ್ದಕ್ಕೂ ರಾಬಿನ್ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.3 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 2 ಟ್ವೆಂಟಿ ಪಂದ್ಯಗಳಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡಾ ಸಿಕ್ಕಿತ್ತು.

ಮುಳುವಾದ ಬ್ಯಾಟಿಂಗ್ ಕ್ರಮಾಂಕ: ಬಲಗೈ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಇಲ್ಲಿ ತನಕ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಉತ್ತಮ ಆಟ ಪ್ರದರ್ಶಿಸಿದ್ದಾರೆ. ಅದರೆ, ಜಿಂಬಾಬ್ವೆ ಪ್ರವಾಸದಲ್ಲಿ ರಾಬಿನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಸೂಚಿಸಲಾಯಿತು. ನಾಯಕ ಅಜಿಂಕ್ಯ ರಹಾನೆ ಹಾಗೂ ಮುರಳಿ ವಿಜಯ್ ಆರಂಭಿಕರಾಗಿ ಕಣಕ್ಕಿಳಿದರು.[ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ]

I made some 'wrong judgements' in Zimbabwe, says Robin Uthappa

ಮಧ್ಯಮ ಕ್ರಮಾಂಕದಲಿ ಆಡಿ ಹೆಚ್ಚು ಅನುಭವವಿಲ್ಲದ ರಾಬಿನ್ ಗೆ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಮೂರು ಏಕದಿನ ಪಂದ್ಯಗಳಲ್ಲಿ 0,13 ಹಾಗೂ 31 ರನ್ ಮಾತ್ರ ಕಳಿಸಿದರು. ಮೊದಲೆರಡು ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಆಡಲು ಬಂದ ರಾಬಿನ್, ಕೊನೆ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬಂದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ.[ಏಕದಿನ ತಂಡದ 23ನೇ ನಾಯಕ ರಹಾನೆ]

ಟಿ20ಯಲ್ಲಿ ಉತ್ತಮ ಆಟ: ಆದರೆ,ಟಿ 20 ಪಂದ್ಯಗಳಲ್ಲಿ ಉತ್ತಮವಾಗಿ ಆಡಿ 39 ರನ್ ಗಳಿಸಿ ಭಾರತಕ್ಕೆ 54 ರನ್ ಗಳ ಜಯ ತಂದು ಕೊಟ್ಟರು. ಮುಂದಿನ ಪಂದ್ಯದಲ್ಲಿ 42ರನ್ ಗಳಿಸಿದರೂ ತಂಡ ಜಯ ಗಳಿಸಲಿಲ್ಲ.

2006ರಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಪಂದ್ಯವಾಡಲು ಆಯ್ಕೆಯಾದ ರಾಬಿನ್ ಅವರು ಟೀಂ ಇಂಡಿಯಾದಲ್ಲಿ ಶಾಶ್ವತ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಗಾಯದ ಸಮಸ್ಯೆ, ಆಯ್ಕೆಯಾದರ ಮೆಚ್ಚುಗೆ ಪಡೆಯುವಲ್ಲಿ ಸಫಲರಾಗಿಲ್ಲದಿರುವುದು ರಾಬಿನ್ ಪ್ರತಿಭೆಯನ್ನು ಮಂಕಾಗಿಸಿದೆ.

46 ಏಕದಿನ ಪಂದ್ಯಗಳಿಂದ 6 ಅರ್ಧಶತಕಗಳೊಂದಿಗೆ 934ರನ್ ಗಳನ್ನು ಗಳಿಸಿದ್ದಾರೆ. 13ಟಿ20 ಪಂದ್ಯಗಳನ್ನು ಆಡಿದ್ದಲ್ಲದೆ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟು 20 ಚಾಂಪಿಯನ್ ಶಿಪ್ ಗೆದ್ದ ತಂಡದ ಸದಸ್ಯರಾಗಿದ್ದರು.

ಸದ್ಯಕ್ಕೆ ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ಬಿಜಾಪುರ ಬುಲ್ಸ್ ಪರ ಆಡಲು ತಯಾರಿ ನಡೆಸುತ್ತಿದ್ದು, ಸೆಪ್ಟೆಂಬರ್ 2 ರಿಂದ ಟೂರ್ನಿ ಆರಂಭಗೊಳ್ಳಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X