ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಕ್ರಿಕೆಟ್ ಲೋಕದ ಮರಡೋನಾ: ಸೌರವ್ ಗಂಗೂಲಿ

By Mahesh

ಕೋಲ್ಕತ್ತಾ, ಆಗಸ್ಟ್ 14: ಕ್ರಿಕೆಟ್ ನಂತೆ ಫುಟ್ಬಾಲ್ ಆಟವನ್ನು ಇಷ್ಟಪಡುವ ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಾಡಿ ಹೊಗಳಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಲ್ಲದೆ ಸುನಿಲ್ ಗವಾಸ್ಕರ್ ಹಾಗೂ ಕುಕ್ ನಂಥ ಸಾಧಕರ ಸಾಲಿಗೆ ಸೇರ್ಪಡೆಗೊಂಡ ಕೊಹ್ಲಿ ಅವರನ್ನು ಫುಟ್ಬಾಲ್ ಕ್ಷೇತ್ರದ ದಿಗ್ಗಜ ಡಿಯಾಗೋ ಮರಡೋನಾ ಅವರಿಗೆ ಹೋಲಿಸಿದ್ದಾರೆ.

I am a big fan of Kohli, he is like 'my favourite' Maradona: Ganguly

ಫುಟ್ಬಾಲರ್ ಅರ್ಜೆಂಟಿನಾದ ಡಿಯಾಗೋ ಮರಡೋನಾ ಅವರ ಆಟ ನಾನು ತುಂಬಾ ಇಷ್ಟಪಟ್ಟು ನೋಡುತ್ತೇನೆ. ಆಟದ ಬಗ್ಗೆ ಅವರಿಗಿರುವ ಅತಿಯಾದ ಉತ್ಸಾಹ, ಚುರುಕುತನವನ್ನು ಮೆಚ್ಚುತ್ತೇನೆ. ಇದೆಲ್ಲ ಗುಣಗಳನ್ನು ನಾನು ವಿರಾಟ್ ಕೊಹ್ಲಿ ಅವರಲ್ಲಿ ಕಾಣುತ್ತಿದ್ದೇನೆ. ನಾನು ಕೊಹ್ಲಿ ಅವರ ದೊಡ್ಡ ಫ್ಯಾನ್ ಎಂದು ಗಂಗೂಲಿ ಅವರು ಹೇಳಿದ್ದಾರೆ. [ದಿಗ್ಗಜ ಗವಾಸ್ಕಾರ್ ಸಾಲಿಗೆ ಸೇರಿದ ನಾಯಕ ಕೊಹ್ಲಿ]

ಕೊಹ್ಲಿಗೆ ಗೆಲುವಿನ ಹಸಿವು: ವಿರಾಟ್ ಕೊಹ್ಲಿ ಅವರಿಗೆ ಗೆಲುವಿನ ಹಸಿವು ಹೆಚ್ಚಾಗಿದೆ. ದೆಹಲಿ ಬ್ಯಾಟ್ಸ್ ಮನ್ ಎಲ್ಲಾ ಬಗೆಯ ಪಿಚ್ ಗಳಲ್ಲಿ ಸಮರ್ಥವಾಗಿ ಆಡಬಲ್ಲ ತಂಡವನ್ನು ಕಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ.

Sourav Ganguly

ಟೆಸ್ಟ್ ತಂಡದ ನಾಯಕನಾಗಿ ನಾಲ್ಕು ಟೆಸ್ಟ್ ಗಳಲ್ಲಿ ನಾಲ್ಕು ಶತಕ ಬಾರಿಸಿರುವುದು ದೊಡ್ಡ ಸಾಧನೆ. ಮೂರನೇ ಕ್ರಮಾಂಕದಲ್ಲಿ ಆಡಲು ರೋಹಿತ್ ಶರ್ಮ ಅವರಿಗೆ ಅವಕಾಶ ನೀಡಲಾಗಿತ್ತು. ಅದರೆ, ರೋಹಿತ್ ಕ್ಲಿಕ್ ಆಗಲಿಲ್ಲ. ತಂಡ ಕಟ್ಟುವಾಗ ಕೆಲವು ಬಾರಿ ಪ್ರಯೋಗಗಳು ಕೈಗೊಡುವುದು ಸಹಜ ಎಂದಿದ್ದಾರೆ.

ಐದು ಬೌಲರ್ ಗಳ ಬಳಕೆ: ಈ ಹಿಂದೆ ಆಸ್ಟ್ರೇಲಿಯಾ ಕೂಡಾ ಇಂಥ ಪ್ರಯೋಗ ಮಾಡಿ ಸಫಲವಾಗಿದೆ. ಆರ್ ಆಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಆಸೀಸ್ ತಂಡ ಮೆಗ್ ಗ್ರಾ, ವಾರ್ನೆ, ಗಿಲೆಪ್ಸಿ, ಲೀ ಅವರನ್ನು ಒಟ್ಟಿಗೆ ಆಡಿಸಿದ್ದನ್ನು ಮರೆಯುವಂತಿಲ್ಲ. ಶ್ರೀಲಂಕಾದಲ್ಲಿ ಪಿಚ್ ಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡಲಾಗಿದೆ. ಕೊಹ್ಲಿ ಅವರು ಮೂವರು ಸ್ಪಿನ್ನರ್ ಆಡಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X