ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪತ್ರಕರ್ತನ ಬೆವರಿಳಿಸಿದ್ದ ಮಿಥಾಲಿ ಪರವಾಗಿ ಎದ್ದ ಅಲೆ

ಪಾಕಿಸ್ತಾನದ ಪತ್ರಕರ್ತನ ಪ್ರಶ್ನೆಗೆ ತಿರುಗೇಟು ನೀಡಿದ್ದ ಮಿಥಾಲಿ ರಾಜ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ. ಭಾರತೀಯ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್.

ನವದೆಹಲಿ, ಜೂನ್ 24: ನಿಮ್ಮ ಫೇವರಿಟ್ ಕ್ರಿಕೆಟ್ ಆಟಗಾರ ಯಾರು ಎಂದು ಕೇಳಿದ ಪತ್ರಕರ್ತನಿಗೆ ಬೆವರಿಳಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

ಮಹಿಳಾ ಕ್ರಿಕೆಟ್ ವಿಶ್ವಕಪ್: 139 ದೇಶಗಳಲ್ಲಿ ನೇರಪ್ರಸಾರಮಹಿಳಾ ಕ್ರಿಕೆಟ್ ವಿಶ್ವಕಪ್: 139 ದೇಶಗಳಲ್ಲಿ ನೇರಪ್ರಸಾರ

ಲಂಡನ್ ನಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ, ಲಂಡನ್ ನಲ್ಲಿ ಬೀಡುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂದ್ಯಾವಳಿಯ ಆರಂಭಕ್ಕೂ ಮುನ್ನಾದಿನದ ರಾತ್ರಿ ಎಲ್ಲಾ ತಂಡಗಳಿಗೂ ರಾತ್ರಿಯೂಟ ಏರ್ಪಡಿಸಲಾಗಿತ್ತು.

Huge Social Media support towards Mithali Raj for her strong reply to a Pakistan Journalist

ಆ ಸಂದರ್ಭದಲ್ಲಿ, ಮಿಥಾಲಿಯವರನ್ನು ಭೇಟಿ ಮಾಡಿದ್ದ ಪಾಕಿಸ್ತಾನದ ಪತ್ರಕರ್ತನೊಬ್ಬ ''ಮಿಥಾಲಿಯವರೇ, ನಿಮ್ಮ ಫೇವರಿಟ್ ಪುರುಷ ಕ್ರಿಕೆಟರ್ ಯಾರು?'' ಎಂದು ಕೇಳಿದ್ದ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮಿಥಾಲಿ, ''ನೀವು ಪುರುಷ ಕ್ರಿಕೆಟರ್ ಗಳನ್ನು ಭೇಟಿ ಮಾಡಿದಾಗಲೂ ನೀವು ಇಂಥದ್ದೇ ಪ್ರಶ್ನೆ ಕೇಳುತ್ತೀರಾ? ಒಂದು ಬಾರಿಯಾದರೂ ಅವರಲ್ಲಿ ನಿಮ್ಮ ಫೇವರಿಟ್ ಮಹಿಳಾ ಕ್ರಿಕೆಟರ್ ಯಾರು ಎಂದು ಕೇಳಿದ್ದೀರಾ?'' ಎಂದು ಪ್ರಶ್ನಿಸಿದ್ದರು.

ಮಹಿಳಾ ವಿಶ್ವಕಪ್: ವಿಜೇತರ ಬಹುಮಾನ ಮೊತ್ತ 10 ಪಟ್ಟು ಹೆಚ್ಚು!ಮಹಿಳಾ ವಿಶ್ವಕಪ್: ವಿಜೇತರ ಬಹುಮಾನ ಮೊತ್ತ 10 ಪಟ್ಟು ಹೆಚ್ಚು!

ಮಿಥಾಲಿಯವರ ಈ ಉತ್ತರದಲ್ಲಿ ಯಾವುದೇ ಅಹಮಿಕೆ ಇರಲಿಲ್ಲ. ಆದರೆ, ಅವರು ಕೇಳಿದ್ದರಲ್ಲಿ ಸತ್ಯವಿತ್ತು. ಜನಸಾಮಾನ್ಯರಲ್ಲಿ ಕ್ರಿಕೆಟ್ ಎಂದರೆ ಪುರುಷ ಪ್ರಧಾನ ಕ್ರೀಡೆ ಎಂಬ ಜಿಜ್ಞಾಸೆಯ ವಿರುದ್ಧ ಅಸಮಾಧಾನವಿತ್ತು.

ಹೊಸತೊಂದು ಚರ್ಚೆಗೆ ನಾಂದಿ ಹಾಡಬಲ್ಲ ಮಾತುಗಳು ಅವಾಗಿದ್ದವು. ಹಾಗಾಗಿ, ಮಿಥಾಲಿಯವರ ಈ ಪ್ರಶ್ನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ತುಂಬಾ ಜನರು, ಮಿಥಾಲಿಯವರಿಂದ ದಿಟ್ಟ ಉತ್ತರ ಎಂದು ಪ್ರಶ್ನಿಸಿದ್ದರೆ ಮತ್ತೆ ಕೆಲವರು ಸತ್ಯವಾದ ಪ್ರಶ್ನೆಯನ್ನು ಮಿಥಾಲಿ ಕೇಳಿದ್ದಾರೆಂದು ಆಕೆಯ ಬೆನ್ನು ತಟ್ಟಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X