ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗೆ 'ಚಿಕ್ಕೂ' ಎಂದು ಅಡ್ಡಹೆಸರು ಬಂದಿದ್ದು ಹೇಗೆ?

ದೆಹಲಿ ಹುಡುಗ ವಿರಾಟ್ ಕೊಹ್ಲಿಗೆ 'ಚಿಕ್ಕೂ' ಎಂದು ಆಪ್ತವರ್ಗ ಕರೆಯುತ್ತಾರೆ. ಚಿಕ್ಕು ಹಣ್ಣಿನ ಹೆಸರು ಕೊಹ್ಲಿಗೆ ಹೇಗೆ ಬಂತು? ಈ ಬಗ್ಗೆ ಯುವರಾಜ್ ಏನೆಂದು ಅಪಾರ್ಥ ಮಾಡಿಕೊಂಡಿದ್ದರು? ಎಂಬೆಲ್ಲ ವಿವರಗಳು 'ಡ್ರಿವನ್' ಪುಸ್ತಕದಲ್ಲಿ ಸಿಗುತ್ತದೆ.

By Mahesh

ಬೆಂಗಳೂರು, ಅಕ್ಟೋಬರ್ 18: ದೆಹಲಿ ಹುಡುಗ ವಿರಾಟ್ ಕೊಹ್ಲಿಗೆ 'ಚಿಕ್ಕೂ' ಎಂದು ಆಪ್ತವರ್ಗ ಕರೆಯುತ್ತಾರೆ. ಚಿಕ್ಕು ಹಣ್ಣಿನ ಹೆಸರು ಕೊಹ್ಲಿಗೆ ಹೇಗೆ ಬಂತು? ಈ ಬಗ್ಗೆ ಯುವರಾಜ್ ಏನೆಂದು ಅಪಾರ್ಥ ಮಾಡಿಕೊಂಡಿದ್ದರು? ಎಂಬೆಲ್ಲ ವಿವರಗಳು 'ಡ್ರಿವನ್' ಪುಸ್ತಕದಲ್ಲಿ ಸಿಗುತ್ತದೆ.

ಕೊಹ್ಲಿ ಅವರಿಗೆ 'ಚಿಕ್ಕೂ' ಎಂದು ಕರೆಯುವುದರ ಬಗ್ಗೆ ಯುವರಾಜ್ ಸಿಂಗ್ ಅವರು ತಮ್ಮ ಪುಸ್ತಕ' ಟೆಸ್ಟ್ ಆಫ್ ಮೈ ಲೈಫ್' ನಲ್ಲಿ ಬರೆದುಕೊಂಡಿದ್ದಾರೆ. ಚಂಪಕ್ ಕಾಮಿಕ್ ಸರಣಿಯಲ್ಲಿ ಬರುತ್ತಿದ್ದ 'ಚಿಕ್ಕೂ' ಪಾತ್ರದ ಹೆಸರನ್ನೇ ಕೊಹ್ಲಿಗೆ ಇಟ್ಟಿರಬಹುದು ಎಂದು ನಾನು ತಿಳಿದುಕೊಂಡಿದ್ದೆ ಎಂದು ಬರೆದಿದ್ದಾರೆ.

ಆದರೆ, ಟೀಂ ಇಂಡಿಯಾದ ಟೆಸ್ಟ್ ನಾಯಕ ಕೊಹ್ಲಿ ಅವರ ಆಪ್ತ ಹೆಸರಿಗೂ ಚಿಕ್ಕು ಹಣ್ಣಿಗೂ ಸಂಬಂಧವಿದೆ ಎಂದು ಪತ್ರಕರ್ತ ವಿಜಯ್ ಅವರು ಬರೆದಿರುವ ಪುಸ್ತಕದಿಂದ ತಿಳಿದು ಬರುತ್ತದೆ.[ಕೊಹ್ಲಿ ಕುರಿತ ಪುಸ್ತಕದಲ್ಲಿರುವ ಸ್ಕೋಡಾ ಕಾರು ಕಥೆ]

How Virat Kohli got his nickname 'Chikoo'

'ದೆಹಲಿ ತಂಡ ಒಮ್ಮೆ ಮುಂಬೈನಲ್ಲಿ ರಣಜಿ ಪಂದ್ಯವಾಡುತ್ತಿತ್ತು. ಆಗಿನ್ನೂ ವಿರಾಟ್ 10 ಪ್ರಥಮ ದರ್ಜೆ ಪಂದ್ಯಗಳನ್ನಾಡಿರಲಿಲ್ಲ.ಸೆಹಾಗ್ವ್, ಗಂಭೀರ್, ರಜತ್ ಭಾಟಿಯಾ, ಮಿಥುನ್ ಮನಾಸ್ ಜತೆ ಡ್ರೆಸಿಂಗ್ ರೂಮ್ ಹಂಚಿಕೊಂಡಿದ್ದರು.

ಪಂದ್ಯದ ನಂತರ ಸಂಜೆ ಹೋಟೆಲ್ ರೂಮಿಗೆ ಹಿಂತಿರುಗುವಾಗ ಒಳ್ಳೆ ಸಲೂನ್ ಕಂಡಿದ್ದಾರೆ. ತಕ್ಷಣವೆ ಹೊಸ ಹೇರ್ ಸ್ಟೈಲ್ ಮಾಡಿಸಿಕೊಳ್ಳುವ ಬಯಕೆ ಉಂಟಾಗಿದೆ. ಅದ್ಯಾವರೀತಿ ಕೇಶ ವಿನ್ಯಾಸ ಮಾಡಿಸಿಕೊಂಡರೋ ಗೊತ್ತಿಲ್ಲ. ಖುಷಿಯಿಂದ ಎಲ್ಲರ ಬಳಿ ತೆರಳಿ ನನ್ನ ಹೇರ್ ಸ್ಟೈಲ್ ಹೇಗಿದೆ ಎಂದು ಕೇಳಿದ್ದಾರೆ. ಹಿರಿಯ ಕಿರಿಯ ಕ್ರಿಕೆಟರ್ ಗಳ ಬಳಿ ತಮ್ಮ ಕೊಹ್ಲಿ ಮಾಡುತ್ತಿರುವ ಗಲಾಟೆ ಕಂಡು ಅಲ್ಲಿಗೆ ಬಂದ ಸಹಾಯಕ ಕೋಚ್ ಅಜಿತ್ ಚೌಧರಿ ಅವರನ್ನು ಕೊಹ್ಲಿ ಇದೇ ಪ್ರಶ್ನೆ ಕೇಳಿದ್ದಾರೆ.[ಕೊಹ್ಲಿ ಗರ್ಲ್ ಫ್ರೆಂಡ್ ಯಾರು? 9ನೇ ಕ್ಲಾಸ್ ಪರೀಕ್ಷೆಯಲ್ಲಿ ಪ್ರಶ್ನೆ]

'ಪರ್ವಾಗಿಲ್ಲ, ನೋಡೋಕೆ ಒಳ್ಳೆ ಸಪೋಟ(ಚಿಕ್ಕೂ) ಥರಾ ಕಾಣ್ತಾ ಇದೆ' ಎಂದಿದ್ದಾರೆ. ಈ ಡೈಲಾಗ್ ಕೇಳಿ ಸೆಹ್ವಾಗ್ ಸೇರಿದಂತೆ ಎಲ್ಲರೂ ನಗೆಯಾಡಿದ್ದಾರೆ. ಅಂದಿನಿಂದ ಕೊಹ್ಲಿಗೆ ಚಿಕ್ಕೂ ಎಂಬ ಹೆಸರು ಕಾಯಂ ಆಗಿಬಿಟ್ಟಿತು. ಕೊಹ್ಲಿ ಸದಾಕಾಲ ಯಶಸ್ಸಿನತ್ತ ಗುರಿ ಇರಿಸುತ್ತಿದ್ದ. ಆತನ ಕಾಲದಲ್ಲಿ ಅಷ್ಟು ಸ್ಪರ್ಧಾತ್ಮಕ ಮನೋಭಾವದ ಹುಡುಗನನ್ನು ನಾನು ನೋಡಲಿಲ್ಲ. ಒಮ್ಮೆ ಗುರಿ ಇಟ್ಟರೆ ಸಾಧಿಸುವ ತನಕ ಹಿಂತಿರುಗುತ್ತಿರಲಿಲ್ಲ ಎಂದು ಸಹಾಯಕ ಕೋಚ್ ಚೌಧರಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರುತ್ತಿರುವ ಕೊಹ್ಲಿ ರನ್ ಮಷಿನ್ ಆಗಿ ಬೆಳೆಯಲು ರಾಜ್ ಕುಮಾರ್ ಶರ್ಮ ಹಾಗೂ ಸಹಾಯಕ ಕೋಚ್ ಅಜಿತ್ ಚೌಧರಿ ಅವರ ಕೊಡುಗೆ ಅಪಾರ ಎಂದು ಪತ್ರಕರ್ತ ವಿಜಯ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. (ಪಿಟಿಐ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X