ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2016 : ಧೋನಿ ಸೇರಿದಂತೆ 50 ಆಟಗಾರರು ಹರಾಜಿಗೆ!

By Mahesh

ಮುಂಬೈ, ಡಿ. 14: ಪುಣೆ ಹಾಗೂ ರಾಜ್ ಕೋಟ್ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲು ಅನುಮತಿ ಪಡೆದುಕೊಂಡಿರುವ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿರಬಹುದು. ಈ ತಂಡಗಳು ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಟೂರ್ನಿಯಲ್ಲಿ ಆಡಲಿವೆ. ಆಟಗಾರರ ಹರಾಜು ಪ್ರಕ್ರಿಯೆಗೆ ಸಿದ್ಧವಾಗುವ ಮುನ್ನ ಯಾವೆಲ್ಲ ಆಟಗಾರರು ಹರಾಜಿಗೆ ಲಭ್ಯರಿದ್ದಾರೆ ಎಂಬುದರ ಕರಡು ಪ್ರತಿ ಪ್ರಕಟವಾಗಿದೆ.

ಹೊಸದಾಗಿ ಸೇರ್ಪಡೆಗೊಂಡಿರುವ ಪುಣೆ ಹಾಗೂ ರಾಜ್ ಕೋಟ್ ತಂಡಗಳು ಡಿಸೆಂಬರ್ 15ರೊಳಗೆ ತಮ್ಮ ತಂಡಗಳ ಬಗ್ಗೆ ಅಂತಿಮ ಕರಡು ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಪುಣೆ ತಂಡಕ್ಕೆ ಹರಾಜು ಕೂಗುವ ಮೊದಲ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. [ಐಪಿಎಲ್ 9ಗೆ ಎರಡು ಹೊಚ್ಚ ಹೊಸ ತಂಡಗಳು ಪ್ರಕಟ]

Here is the full list of players for IPL 2016 draft

ಇದರಂತೆ ಡಿ.15ರಂದು ಬೆಳಗ್ಗೆ 11.30ರ ನಂತರ ಹೊಸ ಎರಡು ಐಪಿಎಲ್ ತಂಡಗಳು ತಲಾ ಐದು ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಸದ್ಯಕ್ಕೆ ಲಭ್ಯವಾಗಿದೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.

ಎಂಎಸ್ ಧೋನಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಆಟಗಾರರು ಬೆಂಗಳೂರಿನಲ್ಲಿ ಫೆಬ್ರವರಿ 6ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಎರಡು ಹೊಸ ತಂಡಗಳು ಕನಿಷ್ಠ 40 ಕೋಟಿ ರು ಹಾಗೂ ಗರಿಷ್ಠ 66 ಕೋಟಿ ರು ಬಳಸಿ ಆಟಗಾರರನ್ನು ಖರೀದಿಸಬಹುದಾಗಿದೆ.

ಹೊಸ ತಂಡಗಳು ಸಲ್ಲಿಸಲಿರುವ ಕರಡು ಪ್ರತಿಯಲ್ಲಿರುವ 50 ಆಟಗಾರರ ಹೆಸರು(33 ಭಾರತೀಯ ಹಾಗೂ 17 ವಿದೇಶಿ) :

R Ashwin

1. ರವಿಚಂದ್ರನ್ ಅಶ್ವಿನ್
2. ಸ್ಟುವರ್ಟ್ ಬಿನ್ನಿ
3. ಎಂಎಸ್ ಧೋನಿ
4. ರವೀಂದ್ರ ಜಡೇಜ
5. ಧವಳ್ ಕುಲಕರ್ಣಿ
6. ಅಭಿಶೇಕ್ ನಾಯರ್
7. ಆಶೀಶ್ ನೆಹ್ರಾ
8. ಇರ್ಫಾನ್ ಪಠಾಣ್
9. ಅಜಿಂಕ್ಯ ರಹಾನೆ
10. ಸುರೇಶ್ ರೈನಾ
11. ಸಂಜು ಸಾಮ್ಸನ್
12. ಮೋಹಿತ್ ಶರ್ಮ
13. ರಾಹುಲ್ ಶರ್ಮ
14. ಬಾಬಾ ಅಪರಾಜಿತ್
15. ಅಂಕುಶ್ ಬೈನ್ಸ್
16. ರಜತ್ ಭಾಟಿಯಾ
17. ಏಕಲವ್ಯ ದ್ವಿವೇದಿ
18. ದೀಪಕ್ ಹೂಡಾ
19. ವಿಕ್ರಮ್ ಜೀತ್ ಮಲಿಕ್
20. ಮಿಥುನ್ ಮನ್ಹಾಸ್
21. ರೋನಿತ್ ಮೋರೆ
22. ಕರುಣ್ ನಾಯರ್
23. ಪವನ್ ನೇಗಿ
24. ಈಶ್ವರ್ ಚಂದ್ರ ಪಾಂಡೆ.
25. ಪ್ರದೀಪ್ ಸಾಹು
26. ದಿನೇಶ್ ಸಾಲುಂಖೆ
27. ಬಾರಿಂದರ್ ಸಿಂಗ್ ಸರಣ್
28. ಅಂಕಿತ್ ನಾಗೇಂದ್ರ ಶರ್ಮ
29. ಪ್ರತ್ಯೂಷ್ ಸಿಂಗ್
30. ಪ್ರವೀಣ್ ತಾಂಬೆ
31. ರಾಹುಲ್ ತೇವಾಟಿಯಾ
32. ಸಾಗರ್ ವಿಜಯ್ ತ್ರಿವೇದಿ
33. ದಿಶಾಂತ್ ಯಾಗ್ನಿಕ್
34. ಕೈಲಿ ಅಬಾಟ್ (ದಕ್ಷಿಣ ಆಫ್ರಿಕಾ)
35. ಸ್ಯಾಮುಯಲ್ ಬದ್ರಿ (ವೆಸ್ಟ್ ಇಂಡೀಸ್)
36. ಡ್ವಾಯ್ನೆ ಬ್ರಾವೊ (ವೆಸ್ಟ್ ಇಂಡೀಸ್)
37. ಬೆನ್ ಕಟ್ಟಿಂಗ್ (ಆಸ್ಟ್ರೇಲಿಯಾ)
38. ಫಾಫ್ ಡೂಪ್ಲೆಸಿಸ್ (ದಕ್ಷಿಣ ಆಫ್ರಿಕಾ)
39. ಜೇಮ್ಸ್ ಫಾಲ್ಕನರ್ (ಆಸ್ಟ್ರೇಲಿಯಾ)
40. ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)
41. ಮೈಕ್ ಹಸ್ಸಿ (ಆಸ್ಟ್ರೇಲಿಯಾ)
42.ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
43. ಕ್ರಿಸ್ಫೋಫರ್ ಮೋರಿಸ್ (ದಕ್ಷಿಣ ಆಫ್ರಿಕಾ)
44. ಕೇನ್ ರಿಚರ್ಡ್ಸನ್ (ನ್ಯೂಜಿಲೆಂಡ್)
45. ಡ್ವಾಯ್ನೆ ಸ್ಮಿತ್ (ವೆಸ್ಟ್ ಇಂಡೀಸ್)
46. ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
47. ಟಿಮ್ ಸೌಥಿ (ನ್ಯೂಜಿಲೆಂಡ್)
48.ಯುವಾನ್ ಥೆರಾನ್ (ದಕ್ಷಿಣ ಆಫ್ರಿಕಾ)
49. ಆಂಡ್ರ್ಯೂ ಟೈ (ಆಸ್ಟ್ರೇಲಿಯಾ)
50. ಶೇನ್ ವಾಟ್ಸನ್ (ಆಸ್ಟ್ರೇಲಿಯಾ)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X