ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಳಗಾವ್ಯಾಗ ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!

By Mahesh

ಬೆಂಗಳೂರು, ಏ.6: ಬೇಸಿಗೆಯ ಬಿಸಿಗೆ ಮತ್ತಷ್ಟು ಕಾವೇರಿಸಲು ಇಂಡಿಯನ್ ಪ್ರಿಮಿಯರ್ ಲೀಗ್ ಬಂದಿದೆ. ಐಪಿಎಲ್ 8 ಪಂದ್ಯಾವಳಿ ಏ.8ರಿಂದ ಆರಂಭಗೊಳ್ಳಲಿದ್ದು, ಟಿಕೆಟ್ ಗಾಗಿ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಅದರೆ, ಟಿಕೆಟ್ ಸಿಗದ ಅಭಿಮಾನಿಗಳು ಚಿಂತಿಸಬೇಕಾಗಿಲ್ಲ. ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸುವ ವ್ಯವಸ್ಥೆಯನ್ನು ಬಿಸಿಸಿಐ ಜಾರಿಗೆ ತರುತ್ತಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾರಿಗೆ ತರಲಿರುವ ಈ ಹೊಸ ವ್ಯವಸ್ಥೆಯಿಂದ ಟ್ವೆಂಟಿ 20 ಕ್ರಿಕೆಟ್ ಹಬ್ಬವನ್ನು ಬೆಳಗಾವಿಯಂಥ ನಗರಗಳಲ್ಲೂ ಆಚರಿಸಬಹುದಾಗಿದೆ. ಫ್ಯಾನ್ಸ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ಬಿಸಿಸಿಐ ಆರಂಭದಲ್ಲಿ ದೇಶದ ಆಯ್ದ ನಗರಗಳಲ್ಲಿನ ಪಾರ್ಕ್ ಗಳಲ್ಲಿ ಉಚಿತವಾಗಿ ಲೈವ್ ಪಂದ್ಯ ವೀಕ್ಷಿಸುವ ಅವಕಾಶ ನೀಡುತ್ತಿದೆ. [ಆನ್ಲೈನ್ ಟಿಕೆಟ್ ಖರೀದಿ ಎಲ್ಲಿ? ಹೇಗೆ?]

Head to BCCI's Fan Parks and watch IPL 8 matches for free

ಸ್ಟೇಡಿಯಂನಲ್ಲಿರುವ ವಾತಾವರಣವನ್ನು ಪಾರ್ಕ್ ಗಳಲ್ಲಿ ತರಲು ಬಿಸಿಸಿಐ ಸಿದ್ಧವಾಗಿದ್ದು, ದೇಶದ ಸಣ್ಣ ಪುಟ್ಟ ನಗರಗಳಲ್ಲೂ ಐಪಿಎಲ್ ಕ್ರೇಜ್ ಹಬ್ಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ಬೆಳಗಾವಿಯ ಪಾರ್ಕ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟವನ್ನು ನೋಡಿ ಆನಂದಿಸಬಹುದು.[ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

ಪ್ರತಿ ಪಂದ್ಯಕ್ಕೂ 2 ಗಂಟೆ ಮುನ್ನ ಪಾರ್ಕ್ ಗಳಿಗೆ ಅಭಿಮಾನಿಗಳು ಬಂದು ಕುಳಿತುಕೊಳ್ಳಬಹುದಾಗಿದೆ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಅವಕಾಶ ಸಿಗಲಿದೆ. ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸಬಹುದು. [8 ತಂಡಗಳ ನೂರೆಂಟು ಆಟಗಾರರು]

ಸುಮಾರು 15 ನಗರಗಳಲ್ಲಿ 10,000 ಅಭಿಮಾನಿಗಳಿಗೆ ಈ ಅವಕಾಶ ಲಭ್ಯವಾಗಲಿದೆ. ಐಪಿಎಲ್ 8 ಪಂದ್ಯಾವಳಿ 12 ನಗರಗಳಲ್ಲಿ ಈ ಬಾರಿ ಆಯೋಜನೆಗೊಂಡಿದೆ. 8 ತಂಡಗಳು ಸುಮಾರು 60 ಪಂದ್ಯಗಳಲ್ಲಿ ಕಾದಾಡಲಿವೆ.

ಎಲ್ಲೆಲ್ಲಿ ಫ್ಯಾನ್ಸ್ ಪಾರ್ಕ್ ?: ಆಗ್ರಾ.ನಾಗಪುರ, ಕೊಯಮತ್ತೂರು, ಲೂಧಿಯಾನ, ಗುಂಟೂರು, ಸೂರತ್, ವಾರಂಗಲ್, ಉದಯಪುರ್, ಬೆಳಗಾವಿ, ಕಾನ್ಪುರ, ಇಂದೋರ್, ಅಲಹಾಬಾದ್ ಹಾಗೂ ಭೋಪಾಲ್ , ಇನ್ನೆರಡು ನಗರಗಳನ್ನು ಸೇರಿಸಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X