ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೈಲಟ್ ಜನಾಂಗೀಯ ನಿಂದನೆ: ಪಿಎಂಗೆ ದೂರು ಸಲ್ಲಿಸಿದ ಭಜ್ಜಿ

ಟ್ವಿಟರ್ ನಲ್ಲಿ ಘಟನೆ ಬಗ್ಗೆ ಹೇಳಿಕೊಂಡಿದ್ದಾರಾದರೂ ಯಾವಾಗ ನಡೆಯಿತು, ಎಲ್ಲಿ ನಡೆಯಿತು, ಘಟನೆಗೆ ಕಾರಣವೇನು ಎಂಬುದನ್ನು ತಿಳಿಸಿಲ್ಲ.

ನವದೆಹಲಿ, ಏಪ್ರಿಲ್ 26: ವಿಮಾನದೊಳಗಿದ್ದ ವಿಕಲ ಚೇತನ ವ್ಯಕ್ತಿಯೊಬ್ಬನ ಮೇಲೆ ಜನಾಂಗೀಯ ನಿಂದನೆ ಮಾಡಿದ ಪೈಲಟ್ ಅನ್ನು ಕ್ರಿಕೆಟಿಗ ಹರ್ಭಜನ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರದ ಮುಖೇನ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿರುವ ಹರ್ಭಜನ್ ಸಿಂಗ್, ತಮ್ಮ ಪಂದ್ಯಗಳಿಗಾಗಿ ದೇಶದ ತುಂಬೆಲ್ಲಾ ಓಡಾಡುತ್ತಿದ್ದಾರೆ.

Harbhajan Singh slams Jet Airways pilot for being 'racist', calling 'you bloody Indian'

ಟ್ವಿಟರ್ ನಲ್ಲಿ ಹರ್ಭಜನ್ ಸಿಂಗ್ ಈ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರಾದರೂ, ಘಟನೆ ನಡೆದ ಜಾಗ, ಸಂದರ್ಭ, ಹಿನ್ನೆಲೆಗಳನ್ನು ವಿವರಿಸಿಲ್ಲ. ಹಾಗಾಗಿ, ಇತ್ತೀಚೆಗಷ್ಟೇ ಈ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದೆ.

ಟ್ವಿಟರ್ ನಲ್ಲಿ ಅವರು, ''ತಾವು, ಬೆರ್ಡ್ ಹೋಸ್ಲಿನ್ ಎಂಬ ವಿದೇಶಿ ಪೈಲಟ್ ಗೆ ಬಾರಿಸಿದ್ದೇನೆ. ಭಾರತೀಯ ಹಾಗೂ ಅಂಗವಿಕಲ ಪ್ರಯಾಣಿಕನನ್ನುಆ ಪೈಲಟ್ ಜನಾಂಗೀಯ ದ್ವೇಷ ಕಾರುವ ಮಾದರಿಯಲ್ಲಿ ಹೀನಾಯವಾಗಿ ಬೈದ. ಇದರಿಂದ ರೊಚ್ಚಿಗೆದ್ದ ನಾನು ಆತನನ್ನು ನಿಂದಿಸಿದ್ದೇನೆ '' ಎಂದು ಅವರು ತಿಳಿಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಅವರು, ''ಇಂಥ ಸಿಬ್ಬಂದಿಯಿರುವುದು ಜೆಟ್ ವಿಮಾನ ಸಂಸ್ಥೆಗೆ ಕಳಂಕ. ಇಂಥವರ ಮೇಲೆ ಸಂಸ್ಥೆಯು ಕ್ರಮ ಕೈಗೊಳ್ಳಬೇಕು'' ಎಂದು ಅವರು ಆಗ್ರಹಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X