ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿ ಡಿವಿಲಿಯರ್ಸ್ ಬಗ್ಗೆ ಗೊತ್ತಿಲ್ಲದ ಸಂಗತಿಗಳಿವು

ಬೆಂಗಳೂರು, ಫೆಬ್ರವರಿ, 17: ಈ ಮನುಷ್ಯನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ? ಅನೇಕಾನೇಕ ದಾಖಲೆಗಳು ಈತನ ಬುಟ್ಟಿಯಲ್ಲಿ ಸೇರಿಕೊಂಡಿವೆ. ಈತ ಆಡದ ಆಟಗಳಿಲ್ಲ. ಮಾಡದ ದಾಖಲೆಗಳಲ್ಲಿಲ್ಲ. ಕ್ರೀಡಾ ಕ್ಷೇತ್ರವೊಂದೇ ಅಲ್ಲ ಸಂಗೀತದಲ್ಲೂ ಈತ ಪಂಟರ್.

ಯಾರ ಬಗ್ಗೆ ಹೇಳಹೊರಟಿದ್ದಾರೆ ಅಂದುಕೊಂಡ್ರಾ? ನಾವು ಹೇಳುತ್ತಿರುವುದು ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್ ಬಗ್ಗೆ, ಮಿಸ್ಟರ್ 360 ಬಗ್ಗೆ. ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಬಗ್ಗೆ. ಎಬಿಡಿಗೆ ಇಂದು 32 ನೇ ಹುಟ್ಟುಹಬ್ಬದ ಸಂಭ್ರಮ.[ಎಬಿಡಿ ಬಂದ ದಾರಿ ಬಿಡಿ]

ಒಬ್ಬನೇ ಮನುಷ್ಯ ಇಷ್ಟೊಂದು ಆಟಗಳಲ್ಲಿ ಮಹತ್ ಸಾಧನೆ ಮಾಡಲು ಸಾಧ್ಯವೇ? ಎಂಬುದಕ್ಕೆ ಎಬಿಡಿ ಜೀವಂತ ಉದಾಹರಣೆ. ಅಂತಿಮವಾಗಿ ಎಬಿಡಿ ಅಪ್ಪಿಕೊಂಡಿದ್ದು ಕ್ರಿಕೆಟ್ ಅನ್ನು. ಇಂದು ಜಗತ್ತಿನ ಕ್ರಿಕೆಟ್ ದಿಗ್ಗಜರ ಸಾಲಲ್ಲಿ ಎಬಿಡಿಗೆ ಅಗ್ರಸ್ಥಾನ.[ದಾಖಲೆಗಳ ಸರದಾರನಿಗೊಂದು ಸೆಲ್ಯೂಟ್]

31 ವರ್ಷಗಳಲ್ಲಿ ಮೂರು ಜನ್ಮದ ಸಾಧನೆ ಮಾಡಿರುವ ಡಿವಿಲಿಯರ್ಸ್ ಬಗ್ಗೆ 31 ದಿನ ಬರೆದರೂ ಮುಗಿಯುವುದಿಲ್ಲವೆನೋ! ಎಬಿಡಿ ಒಬ್ಬ ಕ್ರಿಕೆಟರ್ ಆಗಿ ಎಲ್ಲರಿಗೂ ಗೊತ್ತು,, ಅದನ್ನು ಬಿಟ್ಟು ಅವರೊಬ್ಬ ಸೂಪರ್ ಮ್ಯಾನ್ ... ಅವರು ಕೇವಲ ಎಬಿಡಿ ಅಲ್ಲ ಎ ಟು ಝಡ್... ನೀವು ಒಂದು ವಿಶ್ ಮಾಡಿ..

ವೇಗದ ಶತಕ

ವೇಗದ ಶತಕ

ಏಕದಿನ ಕ್ರಿಕೆಟ್ ನಲ್ಲಿ ಕೇವಲ 31 ಚೆಂಡುಗಳಲ್ಲಿ ಶತಕ ಗಳಿಸಿದ ಎಬಿಡಿ ಕಳೆದ ವರ್ಷ ಜನವರಿಯಲ್ಲಿ ದಾಖಲೆ ಬರೆದರು. ಬರೋಬ್ಬರಿ 16 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿ ಬ್ಯಾಟಿಂಗ್ ಹೈಲೈಟ್ಸ್. ಅಂದು ಎಬಿಡಿ ಗಳಿಸಿದ್ದು 44 ಎಸೆತಗಳಲ್ಲಿ ಬರೋಬ್ಬರಿ 149 ರನ್.

ಸೆಂಚುರಿ ಪಟ್ಟಿ

ಸೆಂಚುರಿ ಪಟ್ಟಿ

ಏಕದಿನ ಖಾತೆಯಲ್ಲಿ ಎಬಿಡಿ 24 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎಬಿಡಿ ಬಳಿ 21 ಶತಕಗಳಿವೆ. ಇವುಗಳಲ್ಲಿ ಗೆಲವಿನ ಸರಾಸರಿಯೇ ಹೆಚ್ಚಿರುವುದು ವಿಶೇಷ.

ಏಕದಿನ ಸಾಧನೆ

ಏಕದಿನ ಸಾಧನೆ

ಸದ್ಯ 200 ಏಕದಿನ ಆಡಿರುವ ಡಿವಿಲಿಯರ್ಸ್ ಸ್ಟ್ರೈಕ್ ರೇಟ್ 100.3. ಸರಾಸರಿ 54.56. ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿಯೂ 50.46 ಸರಾಸರಿ ಕಾಪಾಡಿಕೊಂಡು ಬಂದಿದ್ದಾರೆ.

ಡಿವಿಲಿಯರ್ಸ್ ಬಾಲ್ಯ

ಡಿವಿಲಿಯರ್ಸ್ ಬಾಲ್ಯ

ಅಬ್ರಾಹಿಂ ಬೆಂಜಮಿನ್ ಡಿವಿಲಿಯರ್ಸ್ ಹುಟ್ಟಿದ್ದು ದಕ್ಷಿಣ ಆಫ್ರಿಕಾದ ಪ್ರೆಟೋರಿಯಾದಲ್ಲಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಎಬಿಡಿ ಅಲ್ಲೇ ಮುಗಿಸಿದರು.

ಪ್ರೀತಿಯ ಹೆಸರುಗಳು

ಪ್ರೀತಿಯ ಹೆಸರುಗಳು

ಡಿವಿಲಿಯರ್ಸ್ ಅವರನ್ನು ಎಬಿ, ಎಬಿಡಿ, ಮಿಸ್ಟರ್ 360, ಸೂಪರ್ ಮ್ಯಾನ್ ಎಂಬುದಾಗಿ ಪ್ರಪಂಚ ಕರೆಯುತ್ತದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ಆಡುವ ಡಿವಿಲಿಯರ್ಸ್ ನಮ್ಮ ತಂಡಡದಲ್ಲೂ ಇದ್ದಾರೆ ಎಂದು ಹೆಮ್ಮೆ ಪಡೆಬಹುದು.

ಆಟದ ಪಾತ್ರ

ಆಟದ ಪಾತ್ರ

ಎಬಿಡಿ ಬಲಗೈ ಬ್ಯಾಟ್ಸಮನ್ . ಆದರೆ ಚೆಂಡು ಎಸೆದ ಮೇಲೆ ಅವರು ಹೇಗೂ ನಿಂತುಕೊಳ್ಳುತ್ತಾರೆ! ಮಧ್ಯಮ ವೇಗಿ, ವಿಕೆಟ್ ಕೀಪರ್ ಆಗಿಯೂ ನಿರ್ವಹಣೆ ತೋರಿದ್ದಾರೆ.

ಕ್ರಿಕೆಟ್ ಬಿಟ್ಟರೆ

ಕ್ರಿಕೆಟ್ ಬಿಟ್ಟರೆ

ದಕ್ಷಿಣ ಆಫ್ರಿಕಾದ ಜೂನಿಯರ್ ಹಾಕಿ ತಂಡಕ್ಕೆ ಆಯ್ಕೆ, ಶಾಲಾದಿನಗಳಲ್ಲಿ ಈಜುಕೋಳದಲ್ಲಿ ದಾಖಲೆ, ದಕ್ಷಿಣ ಆಫ್ರಿಕಾವನ್ನು ಬ್ಯಾಡ್ಮಿಂಟನ್ ತಂಡದಲ್ಲಿ ಪ್ರತಿನಿಧಿಸಿದ್ದು. ಡೆವಿಸ್ ಕಪ್ ಟೆನಿಸ್ ಟೀಂ ಪ್ರತಿನಿಧಿತ್ವ ಎಬಿಡಿ ಹೆಸರಲ್ಲಿದೆ.

ದಾಖಲೆ ಪಟ್ಟಿ

ದಾಖಲೆ ಪಟ್ಟಿ

ಏಕದಿನದ ಅತಿ ವೇಗದ ಅರ್ಧ ಶತಕ, ಅತಿ ವೇಗದ ಶತಕ, ಅತಿ ವೇಗದ 150 ಎಲ್ಲವೂ ಎಬಿಡಿ ಹೆಸರಿನಲ್ಲೇ ಇದೆ. ದಕ್ಷಿಣ ಆಫ್ರಿಕ ಪರ ದೇಶಿಕ ಕ್ರಿಕೆಟ್ ನದಾಖಲೆಗಳಿಗೆ ಎಬಿಡಿಯೇ ವಾರಸುದಾರ.

ವರ್ಷದಲ್ಲಿ 50 ಸಿಕ್ಸರ್

ವರ್ಷದಲ್ಲಿ 50 ಸಿಕ್ಸರ್

2105ರ ಕ್ಯಾಲೆಂಡರ್ ವರ್ಷದಲ್ಲಿ ಎಬಿಡಿ 50 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದರು. ಪಾಕ್ ನ ಅಫ್ರಿದಿ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಸಂಗೀತ ಸಾಮ್ರಾಟ

ಸಂಗೀತ ಸಾಮ್ರಾಟ

ಸ್ವತಃ ಗಾಯಕರಾಗಿರುವ ಎಬಿಡಿ ಬ್ಯಾಂಡ್ ವೊಂದನ್ನು ನಡೆಸುತ್ತಾರೆ. "ಶೌ ದೆಮ್ ಹು ಯು ಆರ್ " ಅವರ ಗೀತೆಗಳಲ್ಲಿ ಪ್ರಸಿದ್ಧಿ ಪಡೆದ ಹಾಡು.

ಫೆವರೇಟ್ ಯಾರು?

ಫೆವರೇಟ್ ಯಾರು?

ಎಬಿಡಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅಭಿಮಾನಿ. ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಅಭಿಮಾನಿ. ಹಿಮದ ಪ್ರದೇಶದಲ್ಲಿ ಸಾಗುವುದು ಎಂದರೆ ಅಚ್ಚುಮೆಚ್ಚು.

360 ಡಿಗ್ರಿ ಅಂದ್ರೆ ಇದೇನಾ?

ಎಬಿ ಡಿವಿಲಿಯರ್ಸ್ ಅವರನ್ನು 360 ಡಿಗ್ರಿ ಅಂದು ಕರೆಯುವುದು ಇದಕ್ಕೆ. ಈ ಟ್ವೀಟ್ ನೋಡಿಕೊಂಡು ಬನ್ನಿ..

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X