ಮೊದಲ ಕ್ರಿಕೆಟ್ ಪಂದ್ಯ ನೆನೆಸಿಕೊಂಡ ಗೂಗಲ್ ಡೂಡಲ್!

By: ಅವಿನಾಶ್ ಶರ್ಮಾ
Subscribe to Oneindia Kannada

ನವ ದೆಹಲಿ, ಮಾರ್ಚ್ 15: ಎಲ್ಲರೂ ಮರೆತಿರುವ ಮಹತ್ವದ ಘಟನೆಯೊಂದನ್ನು ನೆನಪಿಸುವಲ್ಲಿ ಸದಾ ಮುಂದಿರುವ ಗೂಗಲ್ ಡೂಡಲ್ ಇಂದು ಅಧಿಕೃತ ಕ್ರಿಕೆಟ್ ಪಂದ್ಯದ 140 ನೇ ವರ್ಷಾಚರಣೆಯನ್ನು ನೆನಪಿಸಿದೆ.

1877 ರಲ್ಲಿ ಆಸ್ಟ್ರೇಲಿಯದ ಮೆಲ್ಬರ್ನೋ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಟೆಸ್ಟ್ ಪಂದ್ಯ ಕ್ರಿಕೆಟ್ ನ ಇತಿಹಾಸದಲ್ಲಿ ಮೊದಲ ಪಂದ್ಯವಾಗಿ ಗುರುತಾಯಿತು. ಮೊಟ್ಟ ಮೊದಲ ಅಧಿಕೃತ ಕ್ರಿಕೆಟ್ ಪಂದ್ಯ ಎಂಬ ಹೆಗ್ಗಳಿಕೆ ಪಡೆದಿದ್ದ ಈ ಪಂದ್ಯದಲ್ಲಿ ಆಗಷ್ಟೆ ಕ್ರಿಕೆಟ್ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದ ಆಸ್ಟ್ರೇಲಿಯಾ ಅನುಭವಿ ಇಂಗ್ಲೆಂಡ್ ಅನ್ನು 45 ರನ್ ಗಳಿಂದ ಸೋಲಿಸಿ ದಾಖಲೆ ಬರೆಯಿತು.

Google celebrates 140th anniversary of first official Test cricket match with a Doodle

ಆದರೆ ಅದೇ ಜಾಗದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯನ್ನು ಡ್ರಾ ಮಾಡಿಕೊಂಡಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಇಂದು ಅನೂಹ್ಯ ರೀತಿಯಲ್ಲಿ ಬೆಳೆಯುತ್ತಿರುವಾಗ ಅದು ಅಂಬೆಗಾಲಿಟ್ಟಿದ್ದ ಕ್ಷಣವನ್ನು ನೆನಪಿಸಿದ ಗೂಗಲ್ ಡೂಡಲ್ ಗೆ ನಮನ ಸಲ್ಲಿಸೋಣ.

English summary
Search Engine giant Google on Wednesday (March 15) celebrated the 140th anniversary of official Test cricket by dedicating a Doodle. The Google Doodle remembered the first Test match played between England and Australia in 1877.
Please Wait while comments are loading...