ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಂತರ ಸಿಪಿಎಲ್ ನಲ್ಲೂ ಕಿಂಗ್ ಖಾನ್ ತಂಡ

By Mahesh

ಮುಂಬೈ, ಜೂ.10: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಕಿಂಗ್ ಖಾನ್ ಶಾರುಖ್ ಅವರು ಈಗ ಕೆರಿಬಿಯನ್ ಪ್ರಿಮಿಯರ್ ಲೀಗ್ ನತ್ತ ಮುಖ ಮಾಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ನಂತರ ಶಾರುಖ್ ಖಾನ್ ಮತ್ತೊಂದು ಟ್ವೆಂಟಿ 20 ಕ್ರಿಕೆಟ್ ತಂಡ ಖರೀದಿಸಿದ್ದಾರೆ.

ಐಪಿಎಲ್ ಮಾದರಿಯಲ್ಲೇ ಆರಂಭವಾಗಿ ತಕ್ಕಮಟ್ಟಿನ ಯಶಸ್ಸುಗಳಿಸಿರುವ ವೆಸ್ಟ್ ಇಂಡೀಸ್ ನ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿರುವ (ಸಿಪಿಎಲ್) ಟ್ರಿನಿಡಾಡ್ ಮತ್ತು ಟೊಬ್ಯಾಗೋ ತಂಡಕ್ಕೆ ಶಾರುಖ್ ಹಣ ಹೂಡಿದ್ದಾರೆ.[ಸಚಿನ್- ವಾರ್ನ್ ಆಲ್ ಸ್ಟಾರ್ ಲೀಗ್]

ಮೂರನೇ ಆವೃತ್ತಿಯ ಸಿಪಿಎಲ್ ಟೂರ್ನಿ ಜೂ.20 ರಿಂದ ಜುಲೈ 26 ರ ತನಕ ನಡೆಯಲಿದೆ. ಕ್ರಿಸ್ ಗೇಲ್, ಕಿರಾಣ್ ಪೊಲ್ಲಾರ್ಡ್, ಡ್ವಾಯ್ನೆ ಬ್ರಾವೋ ಮುಂತಾದ ಆಟಗಾರರನ್ನು ನೋಡುವ ಭಾಗ್ಯ ಸಿಗಲಿದೆ.

Shah Rukh Khan now owns another T20 team


ಸಿಪಿಎಲ್​ನ ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರೈಡೆಂಟ್ ತಂಡಕ್ಕೆ ಹಾಲಿವುಡ್ ತಾರೆ ಮಾರ್ಕ್ ವಹ್ಲಬರ್ಗ್ ಮಾಲೀಕರಾಗಿದ್ದರೆ, ದೈತ್ಯ ಕ್ರಿಸ್ ಗೇಲ್ ನಾಯಕತ್ವದ ಜಮೈಕಾ ತಲ್ಲವಾಸ್ ತಂಡ ಹಾಲಿವುಡ್​ನ ಮತ್ತೊಬ್ಬ ತಾರೆ ಗೆರಾರ್ಡ್ ಬಟ್ಲರ್ ಒಡೆತನದಲ್ಲಿದೆ. [ಟ್ವೆಂಟಿ20: ಹೊಸ ದಾಖಲೆ ಬರೆದ ಕಿಂಗ್ ಕ್ರಿಸ್ ಗೇಲ್]

ಶಾರುಖ್ ಖಾನ್ ಒಡೆನದ ರೆಡ್ ಚಿಲ್ಲೀಸ್ ಎಂಟರ್​ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ, ಕೆಕೆಆರ್ ಸಹ ಮಾಲೀಕತ್ವ ಹೊಂದಿರುವ ಜೂಹಿ ಚಾವ್ಲಾ ಹಾಗೂ ಆಕೆ ಪತಿ ಜೇ ಮೆಹ್ತಾ ಅವರು ಟ್ರಿನಿಡಾಡ್ ಮತ್ತು ಟೊಬ್ಯಾಗೋ ತಂಡದ ಫ್ರಾಂಚೈಸ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.


ಈ ಮೂಲಕ ವಿದೇಶಿ ತಂಡವನ್ನು ಖರೀದಿಸಿದ ಐಪಿಎಲ್​ನ ಮೊದಲ ತಂಡವೆಂಬ ಹೆಗ್ಗಳಿಕೆ ಕೆಕೆಆರ್ ಗೆ ಸೇರುತ್ತದೆ. ಸಿಪಿಎಲ್ 2015 ಆವೃತ್ತಿಗೆ ಹೀರೋ ಮೋಟೋ ಕಾರ್ಪ್ ಪ್ರಮುಖ ಪ್ರವರ್ತಕ ಸಂಸ್ಥೆಯಾಗಿರುವುದು ವಿಶೇಷ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X