ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಜಯ ಸಂಭ್ರಮಿಸಿದ ಪ್ರತ್ಯೇಕತಾವಾದಿಗೆ ಗಂಭೀರ್ ಟಾಂಗ್

ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಸೋತಿದ್ದಕ್ಕೆ ಕಾಶ್ಮೀರದಲ್ಲಿ ಸಂಭ್ರಮಾಚರಣೆ ನಡೆಸಿದ ಪ್ರತ್ಯೇಕತಾವಾದಿಗಳು. ಈ ನಡೆಗೆ ಗೌತಮ್ ಗಂಭೀರ್ ತೀವ್ರ ಬೇಸರ. ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ ಕ್ರಿಕೆಟಿಗ.

ನವದೆಹಲಿ, ಜೂನ್ 19: ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಜಯವನ್ನು ಆಚರಿಸಿದ ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ಛೀಮಾರಿ ಹಾಕಿದ್ದಾರೆ.

ಭಾನುವಾರ (ಜೂನ್ 18) ಲಂಡನ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡವು, ಭಾರತ ತಂಡವನ್ನು 180 ರನ್ ಗಳಿಂದ ಪರಾಭವಗೊಳಿಸಿ, ಕಪ್ ಗೆದ್ದುಕೊಂಡಿತ್ತು.

ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದೇಕೆ?

Cricketer Gautam Gambhir

ಭಾರತ ತಂಡದ ಸೋಲು ಖಾತ್ರಿಯಾಗುತ್ತಲೇ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಇನ್ನು, ಪಂದ್ಯ ಮುಗಿದ ಮೇಲಂತೂ ಇವರ ಸಂತೋಷ ಇಮ್ಮಡಿಯಾಗಿತ್ತು.

ಅಗಾಧವಾಗಿ ಬೆಳೆದಿದೆ ಕುಂಬ್ಳೆ- ಕೊಹ್ಲಿ ನಡುವಿನ ಭಿನ್ನಾಭಿಪ್ರಾಯಅಗಾಧವಾಗಿ ಬೆಳೆದಿದೆ ಕುಂಬ್ಳೆ- ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ

ಈ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದರ ಜತೆಗೆ, ಕಾಶ್ಮೀರದ ಪ್ರತ್ಯೇಕತಾವಾದಿಯಾದ ಹುರಿಯತ್ ಕಾನ್ಫರೆನ್ಸ್ ಸಂಘಟನೆ ನಾಯಕ ಮಿರ್ ವೈಜ್ ಉಮರ್ ಫಾರೂಕ್ ಟ್ವೀಟ್ ಮಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಗೆದ್ದಿದ್ದು ಈಗಲೇ ರಂಜನ್ ಬಂದಂಥ ವಾತಾವರಣ ಸೃಷ್ಟಿಸಿದೆ. ಉತ್ತಮ ತಂಡ ಈ ದಿನವನ್ನಾಳಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಗಂಭೀರ್, ''ಮಿರ್ ವೈಜ್ ಉಮರ್ ಫಾರೂಕ್ ಅವರೇ, ನೀವ್ಯಾಕೆ ಗಡಿ ದಾಟಿ ಪಾಕಿಸ್ತಾನದೊಳಗೆ ಹೋಗಿ ಈ ಜಯವನ್ನು ಸಂಭ್ರಮಿಸಬಾರದು? ಅಲ್ಲಿ ನಿಮಗೆ ಇಲ್ಲಿ ಸಿಗುವುದಕ್ಕಿಂತ ಉತ್ತಮವಾದ ಪಟಾಕಿಗಳು (ಚೀನಾ ಬ್ರಾಂಡ್) ಸಿಗಬಹುದು. ನೀವು ಅಲ್ಲೇ ಈದ್ ಆಚರಿಸಿ. ನೀವೀಗಲೇ ನಿಮ್ಮ ಬಟ್ಟೆಬರೆ ಪ್ಯಾಕ್ ಮಾಡುವುದಾದರೆ ನಾನು ಸಹಾಯ ಮಾಡುವೆ'' ಎಂದು ಕಿಚಾಯಿಸಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X