ಬೆಂಗಳೂರು, ಅ.15: ಟೀಂ ಇಂಡಿಯಾದ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅವರು ಗುರುವಾರ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಅಂತಾ ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರೂ ಇಂಡಿಯನ್ ಪ್ರಿಮಿಯರ್ ಲೀಗ್ ನ ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವುದಾಗಿ ಘೋಷಿಸಿದ್ದಾರೆ. ಜಹೀರ್ ಅವರು ನಿವೃತ್ತಿ ಘೋಷಣಾ ಪತ್ರ ಟ್ವೀಟ್ ಮಾಡಿದ್ದಾರೆ.ಜಹೀರ್ ಖಾನ್ ಅವರು ಇಂದು ತಮ್ಮ ಕ್ರಿಕೆಟ್ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿಯ ನಂತರದ ಅವರ ಜೀವನಕ್ಕೆ ಶುಭ ಕೋರುತ್ತೇನೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.37 ವರ್ಷ ವಯಸ್ಸಿನ ಜಹೀರ್ ಖಾನ್ ಅವರು ಭಾರತ ಪರ 92 ಟೆಸ್ಟ್ ಪಂದ್ಯಗಳು, 200 ಏಕ ದಿನ ಪಂದ್ಯ, 17 ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧ 2000ರಲ್ಲಿ ಟೆಸ್ಟ್ ವೃತ್ತಿ ಬದುಕು ಹಾಗೂ ಅದೇ ವರ್ಷ ಅಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು.92 ಪಂದ್ಯಗಳಲ್ಲಿ ಜಹೀರ್ 311 ವಿಕೆಟ್ ಪಡೆದಿದ್ದಾರೆ. ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪೈಕಿ ಅನಿಲ್ ಕುಂಬ್ಳೆ(619), ಕಪಿಲ್ ದೇವ್(434) ಹರ್ಬಜನ್ ಸಿಂಗ್(417) ನಂತರದ ನಾಲ್ಕನೇ ಸ್ಥಾನದಲ್ಲಿ ಜಹೀರ್ ಇದ್ದಾರೆ.2011ರ ವಿಶ್ವಕಪ್ ಕ್ರಿಕೆಟ್ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಹೀರ್ ಈ ವೇಳೆ ನಡೆದ ಪಂದ್ಯಗಳಲ್ಲಿ 21 ವಿಕೆಟ್ ಗಳಿಸಿದ್ದರು.ನ್ಯೂಜಿಲೆಂಡ್ ವಿರುದ್ಧ 2014ರ ಫೆಬ್ರವರಿಯಲ್ಲಿ ಕೊನೆ ಪಂದ್ಯವಾಡಿದ್ದರು.A New Beginning.... The toughest call in a cricketing career is when one has to walk away from the game itself. You almost will yourself and want to push that few, extra miles but then the body, after nearly two decades, decides not to respond. As I was training for the upcoming season, it dawned on me that my shoulder may not last the rigours of bowling nearly eighteen (18) overs a day, and thats when I knew it was time.... With immediate effect, I bid adieu to my career in international cricket. I look forward to signing off my last season in domestic cricket at the conclusion of Indian Premier League season 9 (2016). ಪೂರ್ಣ ಪಾಠ ಓದಿ