ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್

By Mahesh

ಬೆಂಗಳೂರು, ಅ.20: ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಬಗ್ಗೆ ಹಬ್ಬಿದ್ದ ಗಾಳಿಸುದ್ದಿ ನಿಜವಾಗಿದೆ. ಟ್ವೀಟ್ ಮಾಡಿ ನಿವೃತ್ತಿ ಘೋಷಿಸಿದ್ದಲ್ಲದೆ, ನಿವೃತ್ತಿ ಬಗ್ಗೆ ನಿರ್ಧರಿಸಿದ್ದೇಕೆ ಎಂಬುದನ್ನು ಎರಡು ಪುಟಗಳ ಪತ್ರದಲ್ಲಿ ವಿವರಿಸಿದ್ದಾರೆ.

ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ ನಿಂದಲೂ ನಿವೃತ್ತಿ ಹೊಂದುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ನಂತರ ಮತ್ತೊಂದು ಟ್ವೀಟ್ ನಲ್ಲಿ ನಿವೃತ್ತಿ ಘೋಷಣೆ ಬಗ್ಗೆ ಎರಡು ಪುಟಗಳ ಪತ್ರ ಪ್ರಕಟಿಸಿದ್ದಾರೆ. ಅದರೆ, ಅಭಿಮಾನಿಗಳು ಐಪಿಎಲ್ ನಿಂದಲೂ ನಿವೃತ್ತಿಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. [ಹುಟ್ಟುಹಬ್ಬದ ದಿನದಂದೇ ನಿವೃತ್ತಿ ಘೋಷಣೆ]

ಸೆಹ್ವಾಗ್ ಅವರ ಪತ್ರದ ಸಾರಾಂಶ ಇಲ್ಲಿದೆ:

ಮಾರ್ಕ್ ಟ್ವೇನ್ ಉಲ್ಲೇಖಿಸಿ ಪತ್ರ ಆರಂಭಿಸಿರುವ ಸೆಹ್ವಾಗ್ ಅವರು ನನಗೆ ಸರಿ ಅನ್ನಿಸಿದ್ದನ್ನು ನಾನು ಮಾಡುತ್ತಾ ಬಂದೆ. ನನ್ನ ಆಟಕ್ಕೆ ದೇವರು ಬೆಂಬಲ ನೀಡುತ್ತಾ ಬಂದಿದ್ದರು. [ಅಂಕಿ ಸಂಖ್ಯೆಗಳಲ್ಲಿ ಸೆಹ್ವಾಗ್ ಸೂಪರ್ ವೃತ್ತಿ ಬದುಕು]

ಸುದೀರ್ಘ ಕಾಲ ಕ್ರಿಕೆಟ್ ವೃತ್ತಿ ಬದುಕಿನ ನಂತರ ನಾನು ನನ್ನ 37ನೇ ಹುಟ್ಟುಹಬ್ಬದ ದಿನದಂದು ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಅಂದುಕೊಂಡಂತೆ ಆಡಲು ಸಾಧ್ಯವಾಗದ ಕಾರಣ ನಿವೃತ್ತಿಯ ನಿರ್ಧಾರಕ್ಕೆ ಬರಬೇಕಾಯಿತು ಎಂದು ನಿವೃತ್ತಿಯ ಕಾರಣ ಹೇಳಿದ್ದಾರೆ. [ಸೆಹ್ವಾಗ್ ರನ್ನು ದಿಗ್ಗಜ ರಿಚರ್ಡ್ಸ್ ಗೆ ಹೋಲಿಸಿ ಧೋನಿ]

Full Text: Virender Sehwag's statement on his retirement

ಟೀಂ ಇಂಡಿಯಾದಲ್ಲಿ ಆಡಲು ನಾನು ಅದೃಷ್ಟ ಮಾಡಿದ್ದೆ. ಕ್ರಿಕೆಟ್ ದಿಗ್ಗಜರು, ಮಹಾನ್ ನಾಯಕರ ಜೊತೆ ಆಡಿದ ಅನುಭವವನ್ನು ವರ್ಣಿಸಲಾರೆ. ನನ್ನ ಕುಟುಂಬ, ಅಭಿಮಾನಿಗಳು ನನಗೆ ಸದಾ ಸ್ಪೂರ್ತಿ ತುಂಬುತ್ತಿದ್ದರು. ನನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕೋಚ್ ಎ.ಎನ್ ಶರ್ಮ ಸರ್ ಅವರಿಗೆ ನನ್ನ ನಮನಗಳು. ನನ್ನ ಪತ್ನಿ ಆರತಿ, ಮಕ್ಕಳಾದ ಆರ್ಯವೀರ್ ಹಾಗೂ ವೇದಾಂತ್ ನನ್ನ ಬಲವಾಗಿದ್ದಾರೆ. []

ಬಿಸಿಸಿಐ, ದೆಹಲಿ ಕ್ರಿಕೆಟ್ ಸಂಸ್ಥೆ, ಅರುಣ್ ಜೇಟ್ಲಿ ಅವರ ಬೆಂಬಲದಿಂದ ನಾನು ಇಷ್ಟು ಕಾಲ ಕ್ರಿಕೆಟ್ ಆಡಲು ಸಾಧ್ಯವಾಯಿತು. ಇತ್ತೀಚೆಗೆ ಹರ್ಯಾಣಗೆ ನಾನು ಶಿಫ್ಟ್ ಆಗಿದ್ದೇನೆ. ಇಲ್ಲಿ ನನಗೆ ಉತ್ತಮ ಸ್ವಾಗತ ಸಿಕ್ಕಿದೆ. ಅನಿರುಧ್ ಚೌಧರಿ, ರಣಬೀರ್ ಸಿಂಗ್ ಮಹೇಂದ್ರ ಅವರಿಗೆ ನನ್ನ ಧನ್ಯವಾದಗಳು.

ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಿದ ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ‍XI ಪಂಜಾಬ್ ನನಗೆ ಉದ್ಯೋಗ ನೀಡಿದ ಒಎನ್ ಜಿಸಿ ಸಂಸ್ಥೆ, ಪ್ರಾಯೋಜಕತ್ವ ಸಂಸ್ಥೆ, ಬ್ಯಾಟ್ ಉತ್ಪಾದನಾ ಸಂಸ್ಥೆಗೆ ನನ್ನ ಥ್ಯಾಂಕ್ಸ್. []

"ಸೆಹ್ವಾಗ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹೆಚ್ಚು ಕಾಲ ಕಳೆಯಲು ಇಷ್ಟಪಡುತ್ತೇನೆ. ನನ್ನ ವೃತ್ತಿ ಬದುಕಿನಲ್ಲಿ ನನಗೆ ಅನೇಕ ಜನ ಸಲಹೆಗಳನ್ನು ನೀಡಿದರು ಅದರೆ, ನಾನು ಅದರಲ್ಲಿ ಕೆಲವನ್ನು ಮಾತ್ರ ಪಾಲಿಸಿದ್ದೇನೆ. ಹಲವು ಸಲಹೆಗಳನ್ನು ಬದಿಗೊತ್ತಲು ನನ್ನದೇ ಆದ ಕಾರಣಗಳಿವೆ. ಇದು ನನ್ನ ವೃತ್ತಿ ನನ್ನ ದಾರಿ' ಪೂರ್ಣ ಪಾಠ ಇಲ್ಲಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X