ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾದಿಂದ ಲಂಕಾ ಪ್ರವಾಸ

By Mahesh

ಮುಂಬೈ, ಜುಲೈ 09: ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೆ ಕೊನೆಗೂ ಬಿಸಿಸಿಐ ಅಧಿಕೃತ ಮುದ್ರೆ ಒತ್ತಿದೆ. ಗುರುವಾರ ಮಧ್ಯಾಹ್ನ ಶ್ರೀಲಂಕಾ ಪ್ರವಾಸದ ವಿವರಗಳನ್ನು ಪ್ರಕಟಿಸಲಾಗಿದೆ. ಇದರಿಂದ ಆಗಸ್ಟ್ ಹಾಗೂ ಸೆಪ್ಟೆಂಬರ್ 2015ರಲ್ಲಿ ಶ್ರೀಲಂಕಾ ಪ್ರವಾಸ ಖಾತ್ರಿಯಾಗಿದೆ.

ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡ ಮೂರು ಟೆಸ್ಟ್ ಪಂದ್ಯಗಳನ್ನಾಡಲಿದೆ. ಆಗಸ್ಟ್ 3ರಂದು ಕೊಲಂಬೋಗೆ ಟೀಂ ಇಂಡಿಯಾ ಆಗಮಿಸಲಿದೆ. 3 ದಿನಗಳ ಅಭ್ಯಾಸ ಪಂದ್ಯವನ್ನು ಆಗಸ್ಟ್ 6ರಂದು ಆಡಲಿದ್ದು, ಆಗಸ್ಟ್ 12 ರಿಂದ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ತಂಡ ಎದುರಿಸಲಿದೆ. ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಆ.17 ರಿಂದ ಶ್ರೀಲಂಕಾದಲ್ಲಿ ಮಹಾ ಚುನಾವಣೆ ನಡೆಯುವುದರಿಂದ ಆ.18 ರಿಂದ ಆರಂಭವಾಗಬೇಕಿದ್ದ ಮೊದಲ ಟೆಸ್ಟ್ ಪಂದ್ಯದ ವೇಳಾಪಟ್ಟಿ ಬದಲಾಯಿಸಲಾಯಿತು. ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ ಅವರಿಗೆ ಇದು ವೃತ್ತಿ ಬದುಕಿನ ವಿದಾಯದ ಸರಣಿಯಾಗಿದೆ. [2016ರಲ್ಲಿ ಆಸ್ಟ್ರೇಲಿಯಾಕ್ಕೆ ಟೀಂ ಇಂಡಿಯಾ, ವೇಳಾಪಟ್ಟಿ]

Full Schedule of Team India's tour to Sri Lanka in August-September 2015

ಟೀಂ ಇಂಡಿಯಾದಿಂದ ಶ್ರೀಲಂಕಾ ಪ್ರವಾಸ:
* ಆಗಸ್ಟ್ 3 (ಸೋಮವಾರ) ಕೊಲಂಬೋಗೆ ಟೀಂ ಇಂಡಿಯಾ ಆಗಮನ.

* ಆಗಸ್ಟ್ 6 ರಿಂದ ಆ.8 (ಗುರುವಾರ ದಿಂದ ಶನಿವಾರ) 3 ದಿನಗಳ ಅಭ್ಯಾಸ ಪಂದ್ಯ ಶ್ರೀಲಂಕಾ ಅಧ್ಯಕ್ಷೀಯ XI ವಿರುದ್ಧ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ಕೊಲೊಂಬೊ)

* ಆಗಸ್ಟ್ 12 ರಿಂದ 16 (ಬುಧವಾರ ದಿಂದ ಭಾನುವಾರ) ಮೊದಲ ಟೆಸ್ಟ್, ಗಾಲೆ.

* ಆ.20 ರಿಂದ 24 (ಗುರುವಾರದಿಂದ ಸೋಮವಾರ) ಎರಡನೇ ಟೆಸ್ಟ್ -ಕೊಲಂಬೋ. (ತಮಿಳ್ ಯೂನಿಯನ್ ಓವಲ್)

* ಆಗಸ್ಟ್ 28 ರಿಂದ ಸೆಪ್ಟೆಂಬರ್ 1 (ಶುಕ್ರವಾರ ದಿಂದ ಮಂಗಳವಾರ) ಮೂರನೇ ಟೆಸ್ಟ್- ಪಲ್ಲೆಕಲೆ (ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್)

* ಸೆಪ್ಟೆಂಬರ್ 2 (ಬುಧವಾರ)- ಭಾರತಕ್ಕೆ ನಿರ್ಗಮನ.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X