ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 10: ಈ ಬಾರಿ ಒಬ್ಬ ಪಾಕಿಸ್ತಾನಿ ಕಾಮೆಂಟೆಟರ್ ಇಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ವೀಕ್ಷಕ ವಿವರಣೆ ನೀಡುವವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ (ಏಪ್ರಿಲ್ 04) ದಂದು ಪ್ರಕಟಿಸಿದೆ.

By Mahesh

ಬೆಂಗಳೂರು, ಏಪ್ರಿಲ್ 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ವೀಕ್ಷಕ ವಿವರಣೆ ನೀಡುವವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ (ಏಪ್ರಿಲ್ 04) ದಂದು ಪ್ರಕಟಿಸಿದೆ. ಪಾಕಿಸ್ತಾನದ ಯಾವುದೇ ಮಾಜಿ, ಹಾಲಿ ಕ್ರಿಕೆಟರ್ ಗಳು ಕಾಮೆಂಟೆಟರ್ ಪಟ್ಟಿಯಲ್ಲಿಲ್ಲ.

ಐಪಿಎಲ್ 2017 : ಆರ್ ಸಿಬಿ ವೇಳಾಪಟ್ಟಿ | ಸಂಪೂರ್ಣ ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು?

ಆದರೆ, ಪಾಕಿಸ್ತಾನದಿಂದ ಯಾರೊಬ್ಬರೂ ಕಾಮೆಂಟ್ರಿ ತಂಡದಲ್ಲಿಲ್ಲ. ಕಳೆದ ಬಾರಿ ಶೋಯಿಬ್ ಅಖ್ತರ್,ರಮೀಜ್ ರಾಜ, ವಖಾರ್ ಯೂನಿಸ್ ಹಾಗೂ ವಾಸೀಂ ಅಕ್ರಮ್ ಅವರು ಕಾಮೆಂಟ್ರಿ ಮಾಡಿದ್ದರು.

ಏಪ್ರಿಲ್ 05 ರಿಂದ ಮೇ 02. 2017ರ ತನಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ನೇ ಆವೃತ್ತಿ ಕ್ರಿಕೆಟ್ ಹಬ್ಬ ನಡೆಯಲಿದೆ. ಭಾರತದಲ್ಲಿ ಸೋನಿ ಸಿಕ್ಸ್, ಸೋನಿ ಮ್ಯಾಕ್ಸ್ ನಲ್ಲಿ ಪಂದ್ಯಗಳ ನೇರ ಪ್ರಸಾರವಿರುತ್ತದೆ.

Full list of commentators for IPL 2017; No Pakistan cricketer in panel

ಈ ಬಾರಿ ಕಾಮೆಂಟೆಟರ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆ(7)ಯಲ್ಲಿದ್ದಾರೆ. ಭಾರತದಿಂದ 6, ನ್ಯೂಜಿಲೆಂಡ್ 3, ಇಂಗ್ಲೆಂಡ್ 2 ಹಾಗೂ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಿಂದ ತಲಾ ಒಬ್ಬರು ಕಾಮೆಂಟ್ರಿ ಕೊಡಲಿದ್ದಾರೆ.

ಆಸ್ಟ್ರೇಲಿಯಾದ ಮಹಿಳಾ ಮಾಜಿ ಕ್ರಿಕೆಟರ್ ಲೀಸಾ ಸ್ಥೇಲೆಕರ್, ಅಜುಮ್ ಛೋಪ್ರಾ, ಇಶಾ ಗುಪ್ತಾ, ಮೆಲನಿ ಜೋನ್ಸ್ ಕೂಡಾ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

ಐಪಿಎಲ್ 10 ಕಾಮೆಂಟೆಟರ್ ಗಳ ಪಟ್ಟಿ:
1. ಸುನಿಲ್ ಗವಾಸ್ಕರ್ (ಭಾರತ)
2. ರವಿ ಶಾಸ್ತ್ರಿ (ಭಾರತ)
3. ಸಂಜಯ್ ಮಂಜೇಕ್ರರ್ (ಭಾರತ)
4. ಲಕ್ಷ್ಮಣ್ ಶಿವರಾಮಕೃಷ್ಣನ್ (ಭಾರತ)
5. ಅಜುಮ್ ಛೋಪ್ರಾ (ಭಾರತ)
6. ಮುರಳಿ ಕಾರ್ತಿಕ್ (ಭಾರತ)
7. ಸ್ಕಾಟ್ ಸ್ತೈರಿಸ್ (ನ್ಯೂಜಿಲೆಂಡ್)
8. ಸೈಮನ್ ಡೌಲ್ (ನ್ಯೂಜಿಲೆಂಡ್)
9. ಡ್ಯಾನಿ ಮಾರಿಸನ್ (ನ್ಯೂಜಿಲೆಂಡ್)
10. ಮೈಕಲ್ ಹಸ್ಸಿ (ಆಸ್ಟ್ರೇಲಿಯಾ)
11. ಲೀಸಾ ಸ್ಥೆಲೆಕರ್ (ಆಸ್ಟ್ರೇಲಿಯಾ)
12. ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
13. ಮೆಲಾನಿ ಜೋನ್ಸ್ (ಆಸ್ಟ್ರೇಲಿಯಾ)
14. ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ)
15. ಬ್ರೆಂಡನ್ ಜೂಲಿಯನ್ (ಆಸ್ಟ್ರೇಲಿಯಾ)
16. ಬ್ರೆಟ್ ಲೀ (ಆಸ್ಟ್ರೇಲಿಯಾ)
17. ಕೆವಿನ್ ಪೀಟರ್ಸನ್ (ಇಂಗ್ಲೆಂಡ್)
18. ಇಶಾ ಗುಹಾ (ಇಂಗ್ಲೆಂಡ್)
19. ಡರೇನ್ ಗಂಗಾ (ವೆಸ್ಟ್ ಇಂಡೀಸ್)
20. ಪೊಮ್ಮಿ ಮಾಂಗ್ವಾ (ಜಿಂಬಾಬ್ವೆ)

(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X