ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಗುತ್ತಿಗೆ: ರಹಾನೆ ಮೇಲಕ್ಕೆ, ರೈನಾ ಕೆಳಕ್ಕೆ

By Mahesh

ಮುಂಬೈ, ನ.09: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಲಿ ಆಟಗಾರರ ಗುತ್ತಿಗೆಯನ್ನು ನವೀಕರಿಸಿದೆ. 2015-16 ಸೀಸನ್ ನ ಹೊಸಗುತ್ತಿಗೆ ಪ್ರಕಾರ ಅಜಿಂಕ್ಯ ರಹಾನೆ ಗ್ರೇಡ್ 'ಎ' ಗೇರಿದ್ದರೆ, ಸುರೇಶ್ ರೈನಾ ಅವರು ಗ್ರೇಡ್ 'ಬಿ' ಗೆ ದೂಡಲ್ಪಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರೂ ಏಕದಿನ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರು ಗ್ರೇಡ್ ಎ ನಲ್ಲೆ ಮುಂದುವರೆದಿದ್ದಾರೆ. ಗ್ರೇಡ್ ಎ ಪಟ್ಟಿಯಲ್ಲಿರುವ ಆಟಗಾರರು ತಲಾ 1 ಕೋಟಿ ರು ಸಂಭಾವನೆ ಪಡೆಯಲಿದ್ದಾರೆ. ಎಂಎಸ್ ಧೋನಿ ಹಾಗೂ ಅಜಿಂಕ್ಯ ರಹಾನೆ ಅಲ್ಲದೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಈ ಪಟ್ಟಿಯಲ್ಲಿದ್ದಾರೆ.[ಸಚಿನ್, ದ್ರಾವಿಡ್, ಗಂಗೂಲಿಗೆ ಸಿಗಲಿರುವ ಗೌರವ ಧನವೆಷ್ಟು?]

ಸುರೇಶ್ ರೈನಾ ಹೆಸರಿನ ಗೊಂದಲ: ಬಿಸಿಸಿಐ ಮೊದಲಿಗೆ ಪ್ರಕಟಿಸಿದ ಪಟ್ಟಿಯಲ್ಲಿ ಸುರೇಶ್ ರೈನಾ ಹೆಸರು ಯಾವ ಪಟ್ಟಿಯಲ್ಲೂ ಕಾಣಿಸಿರಲಿಲ್ಲ, ನಂತರ ಪ್ರಮಾದವನ್ನು ಸರಿಪಡಿಸಿಕಂಡ ಬಿಸಿಸಿಐ ಅವರನ್ನು ಗ್ರೇಡ್ ಬಿ ಗೆ ಸೇರಿಸಿದೆ. ರೈನಾ ಅಲ್ಲದೆ ವೇಗಿ ಭುವನೇಶ್ವರ್ ಕುಮಾರ್ ಕೂಡಾ ಎ ಗುಂಪಿನಿಂದ ಬಿ ಗುಂಪಿಗೆ ದೂಡಲ್ಪಟ್ಟಿದ್ದಾರೆ.

Full list of BCCI's contracted players for 2015-16; Rahane in Grade A

2015-16 ಸೀಸನ್ ಗೆ ನವೀಕರಣಗೊಂಡ ಆಟಗಾರರ ಗುತ್ತಿಗೆ ಪಟ್ಟಿ

ಗ್ರೇಡ್ ಎ (1 ಕೋಟಿ ರು): ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಆರ್ ಅಶ್ವಿನ್, ಅಜಿಂಕ್ಯ ರಹಾನೆ.

ಇನ್ : ರಹಾನೆ, ಔಟ್ : ಸುರೇಶ್ ರೈನಾ ಹಾಗೂ ಭುವನೇಶ್ವರ್ ಕುಮಾರ್.

ಗ್ರೇಡ್ ಬಿ (50 ಲಕ್ಷ ರು): ಸುರೇಶ್ ರೈನಾ, ಅಂಬಟಿ ರಾಯುಡು, ರೋಹಿತ್ ಶರ್ಮ, ಮುರಳಿ ವಿಜಯ್, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮ, ಚೇತೇಶ್ವರ್ ಪೂಜಾರಾ, ಮೊಹಮ್ಮದ್ ಶಮಿ.

ಗ್ರೇಡ್ ಸಿ (25 ಲಕ್ಷ ರು): ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಸ್ಟುವರ್ಟ್ ಬಿನ್ನಿ, ವೃದ್ಧಿಮಾನ್ ಸಹಾ, ಮೋಹಿತ್ ಶರ್ಮ, ವರುಣ್ ಅರೋನ್, ಕರಣ್ ಶರ್ಮ, ರವೀಂದ್ರ ಜಡೇಜ, ಕೆಎಲ್ ರಾಹುಲ್, ಧವಳ್ ಕುಲಕರ್ಣಿ, ಹರ್ಭಜನ್ ಸಿಂಗ್, ಎಸ್ ಅರವಿಂದ್.[ಬಿಸಿಸಿಐ ಆಯ್ಕೆ ಸಮಿತಿಯಿಂದ ರೋಜರ್ ಬಿನ್ನಿ ಔಟ್]

ಮಹಿಳಾ ಕ್ರಿಕೆಟರ್ಸ್

ಗ್ರೇಡ್ ಎ (15 ಲಕ್ಷ ರು) : ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್ ಪ್ರೀತ್ ಕೌರ್, ಎಂಡಿ ತಿರುಷ್ ಕಾಮಿನಿ.

ಗ್ರೇಡ್ ಬಿ (10 ಲಕ್ಷ ರು): ಸ್ಮೃತಿ ಮಂದನಾ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್, ಏಕ್ತಾ ಬಿಸ್ತ್, ವೇದಾ ಕೃಷ್ಣಮೂರ್ತಿ, ನಿರಂಜನಾ ನಾಗರಾಜನ್, ಪೂನಮ್ ರೌತ್.

ಗುತ್ತಿಗೆ ಆಧಾರದ ಪಟ್ಟಿಯಲ್ಲಿಲ್ಲದ ಆಟಗಾರರು ಟೆಸ್ಟ್/ಏಕದಿನ/ ಟಿ20 ಮೂರು ಪಂದ್ಯಗಳನ್ನಾಡಿದರೆ ಅವರನ್ನು ಗ್ರೇಡ್ ಸಿ ನಂತರ ಬಿಗೆ ಸೇರಿಸಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X