ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಹಲೋಕದ ಇನ್ನಿಂಗ್ಸ್ ಮುಗಿಸಿದ 'ವಾಯ್ಸ್ ಆಫ್ ಕ್ರಿಕೆಟ್' ರಿಚಿ

By Mahesh

ಸಿಡ್ನಿ, ಏ.10: 'ವಾಯ್ಸ್ ಆಫ್ ಕ್ರಿಕೆಟ್' ಎಂದೇ ಜನಪ್ರಿಯಗೊಂಡಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಚಿ ಬೆನೊ ಅವರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅಸುನೀಗಿದ್ದಾರೆ. ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 84 ವರ್ಷ ವಯಸ್ಸಿನ ರಿಚಿ ಅವರು ಗುರುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ವಾಯ್ಸ್ ಆಫ್ರ್ ಕ್ರಿಕೆಟ್ ನಿಧನಕ್ಕೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.

2013ರಲ್ಲಿ ಭೀಕರ ಅಪಘಾತದ ಆಘಾತಕ್ಕೊಳಗಾಗಿದ್ದ ರಿಚಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ ಕಳೆದ ರಾತ್ರಿ ಯಾವುದೇ ನರಳಾಟವಿಲ್ಲದೆ ಇಹಲೋಕದ ಇನ್ನಿಂಗ್ಸ್ ಮುಗಿಸಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ 2000 ರನ್ ಹಾಗೂ 200 ವಿಕೆಟ್ ಕಿತ್ತ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆ ಹೊಂದಿದ್ದರು. ರಿಚಿ ಅವರು ನೀಡುತ್ತಿದ್ದ ಅಬ್ಬರದ ಉದ್ಗಾರಗಳಿಲ್ಲದ ಕಾಮೆಂಟರಿ ಕ್ರೀಡಾಭಿಮಾನಿಗಳಿಗೆ ಆಪ್ತವೆನಿಸಿತ್ತು. [ಆಸ್ಟ್ರೇಲಿಯಾದ ಕನ್ನಡತಿಯ ಕ್ರಿಕೆಟ್ ವ್ಯಾಮೋಹ]

64 ಟೆಸ್ಟ್ ಪಂದ್ಯಗಳನ್ನಾಡಿದ್ದ ರಿಚಿ ಅವರು ಒಟ್ಟಾರೆ 27.03 ಸರಾಸರಿಯಂತೆ 248 ವಿಕೆಟ್ ಹಾಗೂ 24.25 ರನ್ ಸರಾಸರಿಯಂತೆ 2201 ರನ್ ಗಳಿಸಿದ್ದರು. 122ರನ್ ಅವರು ಗಳಿಸಿದ್ದ ಗರಿಷ್ಠ ಮೊತ್ತ.

ರಿಚಿ ಬೆನೊ ಅವರ ಗೌರವಾರ್ಥ ಆಸ್ಟ್ರೇಲಿಯಾದ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗುತ್ತದೆ. ರಿಚಿ ಅವರು 28 ಪಂದ್ಯಗಳಿಗೆ ನಾಯಕರಾಗಿದ್ದರು ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಸೋಲು ಕಂಡಿರಲಿಲ್ಲ ಎಂದು ಪ್ರಧಾನಿ ಟೋನಿ ಅಬಾಟ್ ಹೇಳಿದ್ದಾರೆ.

ರಿಚಿ ಅವರ ಅಗಲಿಕೆಗೆ ಸಂತಾಪ ಸೂಚಕ ಸಂದೇಶಗಳು ಹರಿದು ಬಂದಿವೆ.. ಮಾಜಿ, ಹಾಲಿ ಕ್ರಿಕೆಟರ್ ಗಳು ಸಾರ್ವಜನಿಕರು ವೀ ಮಿಸ್ ಯೂ ರಿಚಿ ಎಂದು ಟ್ವೀಟ್ ಮಾಡಿದ್ದಾರೆ.

ಅತ್ಯಂತ ಗೌರವಾನ್ವಿತ ಕ್ರಿಕೆಟ್ ದಿಗ್ಗಜ ರಿಚಿ

ಅತ್ಯಂತ ಗೌರವಾನ್ವಿತ ಕ್ರಿಕೆಟ್ ದಿಗ್ಗಜ ರಿಚಿ

ವಾಯ್ಸ್ ಆಫ್ರ್ ಕ್ರಿಕೆಟ್ ನಿಧನಕ್ಕೆ ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವಾರು ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಯುವ ಆಟಗಾರರಿಗೆ ಎಂದಿಗೂ ಸ್ಪೂರ್ತಿ ಸೆಲೆ

ಯುವ ಆಟಗಾರರಿಗೆ ಎಂದಿಗೂ ಸ್ಪೂರ್ತಿ ಸೆಲೆ

ಯುವ ಆಟಗಾರರಿಗೆ ಎಂದಿಗೂ ಸ್ಪೂರ್ತಿ ಸೆಲೆಯಾಗಿದ್ದ ರಿಚಿ ಅವರಿಂದ ನಾನು ಸಾಕಷ್ಟು ಕಲಿತೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಿಂದ ಸರಣಿ ಟ್ವೀಟ್

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಂದ ಸರಣಿ ಟ್ವೀಟ್

ಸ್ಪಿನ್ ಬೌಲಿಂಗ್ ಬಗ್ಗೆ ಸಚಿನ್ ಜೊತೆ ಸಂಭಾಷಣೆ

ಶೇನ್ ವಾರ್ನ್, ರಿಚಿ ಬೆನೊ ಜೊತೆ ಮಾತನಾಡಿದ್ದನ್ನು ಸ್ಮರಿಸಿಕೊಂಡ ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಲೋಕಕ್ಕೆ ತುಂಬಲಾರದ ನಷ್ಟ

ರಿಚಿ ಅದ್ಭುತ ಕ್ರಿಕೆಟ್ ಹಾಗೂ ಅದ್ಭುತ ವ್ಯಕ್ತಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ-ಸಚಿನ್

ಮೈಕಲ್ ಕ್ಲಾರ್ಕ್ ರಿಂದ ಟ್ವೀಟ್

ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್ ರಿಂದ ಟ್ವೀಟ್ ಮಾಡಿ ರಿಚಿ ಗುಣಗಾನ ಮಾಡಿದ್ದಾರೆ.

ಟಿವಿ ಕಾಮೆಂಟರಿ ಮತ್ತೆ ಕೇಳಲು ಮನಸ್ಸಾಗಲ್ಲ

ಟಿವಿ ಕಾಮೆಂಟರಿ ಮತ್ತೆ ಕೇಳಲು ಮನಸ್ಸಾಗಲ್ಲ, ಕ್ರಿಕೆಟ್ ಲೋಕದ ದಿಗ್ಗಜನನ್ನು ಕಳೆದುಕೊಂಡಿದೆ-ಆರ್ ಅಶ್ವಿನ್

ಬಿಸಿಸಿಐ ನಿಂದ ಸಂತಾಪ ಸೂಚಕ ಸಂದೇಶ

ಬಿಸಿಸಿಐ ನಿಂದ ಸಂತಾಪ ಸೂಚಕ ಸಂದೇಶ ಹೀಗಿದೆ

ಹರ್ಷ ಬೋಗ್ಲೆ ಅವರಿಂದ ಟ್ವೀಟ್

ಜನಪ್ರಿಯ ಕಾಮೆಂಟೆಟರ್ ಹರ್ಷ ಬೋಗ್ಲೆ ಅವರಿಂದ ಟ್ವೀಟ್

ಅಜಿಂಕ್ಯ ರಾಹನೆ ಅವರಿಂದ ಸಂತಾಪ

ನೀವು ಹಾಗೂ ನಿಮ್ಮ ದನಿ ಸದಾ ಕಾಲ ನಮ್ಮ ನೆನಪಿನಲ್ಲಿರುತ್ತೆ -ಅಜಿಂಕ್ಯ ರಹಾನೆ

ರಿಚಿ ಜೊತೆ ಕಾಮೆಂಟ್ರಿ ಮಾಡಿದ ಖುಷಿಯಿದೆ

ರಿಚಿ ಜೊತೆ ಕಾಮೆಂಟ್ರಿ ಮಾಡಿದ ಖುಷಿಯಿದೆ ಎಂದು ಮಾಜಿ ಕ್ರಿಕೆಟರ್, ಹಾಲಿ ಕಾಮೆಂಟೆಟರ್ ಸಂಜಯ್ ಮಂಜೇಕ್ರರ್ ಟ್ವೀಟ್

ಐಸಿಸಿಯಿಂದ ಅಧಿಕೃತ ಸಂತಾಪ ಸೂಚಕ ಸಂದೇಶ

ಐಸಿಸಿಯಿಂದ ಅಧಿಕೃತ ಸಂತಾಪ ಸೂಚಕ ಸಂದೇಶ ಹೀಗಿದೆ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X