ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ತೊರೆದ ಸುಂದರ್ ಗೆ ರಿಲಯನ್ಸ್ ನಲ್ಲಿ ಭರ್ಜರಿ ಹುದ್ದೆ

By Mahesh

ಮುಂಬೈ, ನ.16: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಸಿಒಒ ಸ್ಥಾನ ತೊರೆದ ಸುಂದರ್ ರಾಮನ್ ಅವರಿಗೆ ರಿಲಯನ್ಸ್ ಸಂಸ್ಥೆಯಿಂದ ಭರ್ಜರಿ ಆಫರ್ ಸಿಕ್ಕಿದೆ. ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕ್ರೀಡಾ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.

ರಿಲಯನ್ಸ್ ಸಂಸ್ಥೆಯ ಕ್ರೀಡಾ ಉತ್ಪನ್ನಗಳ ಮಾರ್ಕೆಟಿಂಗ್, ಡಿಜಿಟಲ್ ಸರ್ವೀಸ್ ವಿಭಾಗದ ಜಿಐಒ, ಲಾಭರಹಿತ ಕಾರ್ಯಕ್ರಮಗಳ ನಿರ್ವಹಣೆ ಸುಂದರ್ ರಾಮನ್ ಅವರ ಮೇಲಿರುತ್ತದೆ. ಐಪಿಎಲ್ ನಿಂದ ಹೊರ ಹಾಕಲ್ಪಟ್ಟ ಸುಂದರ್ ಅವರಿಗೆ ಈ ರೀತಿ ಉನ್ನತ ಹುದ್ದೆ ಸಿಕ್ಕಿರುವುದು ಹಲವರ ಹುಬ್ಬೇರಿಸಿದೆ. [ಐಪಿಎಲ್ ಸಿಒಒ ಹುದ್ದೆಗೆ ಸುಂದರ್ ರಾಮನ್ ರಾಜೀನಾಮೆ]

Former IPL COO Sundar Raman named sports chief of Reliance Industries

ಕ್ರಿಕೆಟ್, ಪುಟ್ಬಾಲ್, ಬಾಸ್ಕೆಟ್ ಬಾಲ್, ಟೆನಿಸ್ ಹಾಗೂ ಗಾಲ್ಫ್ ಸೇರಿದಂತೆ ಹಲವಾರು ಕ್ರೀಡೆಗಳ ಮೇಲೆ ರಿಲಯನ್ಸ್ ಭಾರಿ ಹಣ ಹೂಡಿಕೆ ಮಾಡಿದೆ. ಶಿಕ್ಷಣದ ಜೊತೆಗೆ ಕ್ರೀಡಾಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡುವ ರಿಲಯನ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಸಂತಸವಾಗುತ್ತಿದೆ ಎಂದು ಸುಂದರ್ ರಾಮನ್ ಅವರು ಪ್ರತಿಕ್ರಿಯಿಸಿದ್ದಾರೆ.

ನವೆಂಬರ್ 5ರಂದು ಅಧಿಕೃತವಾಗಿ ಬಿಸಿಸಿಐ ನೀಡಿದ ಐಪಿಎಲ್ ಸಿಒಒ ಹುದ್ದೆಯನ್ನು ಸುಂದರ್ ರಾಮನ್ ತೊರೆದಿದ್ದರು. 2008ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ನ ಸಿಒಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ರಾಮನ್ ಅವರನ್ನು ಅಂದಿನ ಐಪಿಎಲ್ ಆಯುಕ್ತ ಲಲಿತ್ ಮೋದಿ ಅವರು ನೇಮಕ ಮಾಡಿದ್ದರು. ಐಪಿಎಲ್ ನಲ್ಲಿನ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವನ್ನು ಸುಂದರ್ ಅವರು ಹೊರಬೇಕಾಯಿತು.

ಮ್ಯಾಚ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಜಸ್ಟೀಸ್ ಲೋಧಾ ಅವರಿದ್ದ ನ್ಯಾಯಪೀಠ ನೀಡಿದ ಆದೇಶದಲ್ಲಿ ಆರೋಪ ಹೊತ್ತಿದ್ದ 14 ಜನರ ಹೆಸರಿನಲ್ಲಿ ಸುಂದರ್ ರಾಮನ್ ಹೆಸರು ಕೂಡಾ ಇದೆ. ನವೆಂಬರ್ 2014ರಲ್ಲಿ ಮುದ್ಗಲ್ ಸಮಿತಿ ನೀಡಿದ ಪಟ್ಟಿಯಲ್ಲೂ ಸುಂದರ್ ರಾಮನ್ ಹೆಸರನ್ನು ಆರೋಪಿ ಎಂದು ಉಲ್ಲೇಖಿಸಲಾಗಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X