ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾನ್ಪುರ ಸೋಲಿಗೆ ಫಿನಿಶರ್ ಎಂಎಸ್ ಧೋನಿ ಕಾರಣ!

ಕಾನ್ಪುರ, ಅಕ್ಟೋಬರ್, 12: ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಮೂರು ಪಂದ್ಯಗಳನ್ನು ಸೋತಿರುವ ಭಾರತ ಕ್ರಿಕೆಟ್ ತಂಡ ಟೀಕೆಗಳ ಸುರಿಮಳೆಯನ್ನೇ ಎದುರಿಸುತ್ತಿದೆ. ಕಾನ್ಪುರದ ಮೊದಲ ಏಕದಿನನ ಪಂದ್ಯ ಸೋಲಿಗೆ ನಾಯಕ ಎಂ ಎಸ್ ಧೋನಿ ಅವರೇ ನೇರ ಹೊಣೆ ಎಂಬ ಅಭಿಪ್ರಾಯ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿದೆ.

304 ರನ್ ಗುರಿ ಬೆನ್ನು ಹತ್ತಿದ್ದ ಭಾರತಕ್ಕೆ ಆರಂಭಿಕ ರೋಹಿತ್ ಶರ್ಮಾ ಶತಕದ ಬಲ ನೀಡಿದ್ದರು. ರಹಾನೆ ಸಹ ಉತ್ತಮ ಆಟ ಪ್ರದರ್ಶನ ನೀಡಿದ್ದರು. ಯಾವ ಹಂತದಲ್ಲೂ ಪಂದ್ಯ ಭಾರತದ ಕೈ ತಪ್ಪುವ ಲಕ್ಷಣವೇ ಇರಲಿಲ್ಲ. ಆದರೆ ಭಾರತ ಅಂತಿಮವಾಗಿ ನಿರಾಸೆ ಅನುಭವಿಸಬೇಕಾಯಿತು.[ಆರ್ ಅಶ್ವಿನ್ ಬದಲಿಗೆ ಹರ್ಭಜನ್ ಸಿಂಗ್ ಎಂಟ್ರಿ]

ಸ್ಕೋರ್ ಬೋರ್ಡ್

ಪಂದ್ಯದ ಸೋಲಿನ ಬಳಿಕ ಮಾತನಾಡಿದ ಎಂಎಸ್ ಧೊನಿ, ಕೆಳ ಕ್ರಮಾಂಕದಲ್ಲಿ ಆಟಕ್ಕೆ ಇಳಿದು ಇಂಥ ಸೋಲು ಎದುರಾದಾಗ ಟೀಕೆಗಳನ್ನು ಎದುರಿಸಲೇಬೇಕಾಗುತ್ತದೆ. ಗೆಲ್ಲಿಸಿದ ಪಂದ್ಯಗಳಿಗಿಂತ ಜನರು ಹೆಚ್ಚಾಗಿ ಇಂಥ ಪಂದ್ಯಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಕೆಳ ಕ್ರಮಾಂಕದಲ್ಲಿ ಯಶಸ್ವಿಯಾದರೆ ಕೆಲವೊಮ್ಮೆ ಆಗುವುದಿಲ್ಲ ಎಂದು ಹೇಳಿದರು.

30 ಚೆಂಡು ಎದುರಿಸಿದ ನಾಯಕ ಎಂಎಸ್ ಧೋನಿ 31 ರನ್ ಗಳಿಸಿದರು. ಇದು ಭಾರತದ ಗೆಲುವಿಗೆ ಸಾಕಾಗಲಿಲ್ಲ. ಮಧ್ಯಮ ಕ್ರಮಾಂಕದ ವಿರಾಟ್ ಕೊಹ್ಲಿ, ಸುರೇಶ್ ರೈನಾ ಸಹ ರನ್ ಗಳಿಸದೇ ಫೆವಿಲಿಯನ್ ಸೇರಿಕೊಂಡಿದ್ದು ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಮೊದಲ ಎರಡು ಪಂದ್ಯಗಳನ್ನು ಸೋತಿದ್ದರೆ ಮೂರನೇ ಪಂದ್ಯ ಮಳೆ ಬಂದು ರದ್ದಾಗಿತ್ತು. ಇದೀಗ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಒಂದು ಸೋಲು ಅನುಭವಿಸಿದ್ದು ಹಿನ್ನಡೆ ಕಂಡಿದೆ.[ಫಲ ನೀಡದ ರೋಹಿತ್ ಶತಕ, ಭಾರತಕ್ಕೆ 5 ರನ್ ಸೋಲು]

 ಎಂಎಸ್ ಮೊದಲ ಧೋನಿಯಾಗಿಲ್ಲ!

ಎಂಎಸ್ ಮೊದಲ ಧೋನಿಯಾಗಿಲ್ಲ!

ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಮೊದಲಿನ ಆಟದ ಲಯ ಕಳೆದುಕೊಂಡಿದ್ದಾರೆ. ಮೊದಲಿನ ಫಿನಿಶರ್ ಧೋನಿ ಈಗ ಕಾಣಸಿಗುತ್ತಿಲ್ಲ ಎಂದು ಹೇಳಿದ್ದಾರೆ.

 ಕೊನೆ ಓವರ್ ಸೋಲು

ಕೊನೆ ಓವರ್ ಸೋಲು

ಕೊನೆ ಓವರ್ ನಲ್ಲಿ ಭಾರತಕ್ಕೆ ಬೇಕಿದ್ದದ್ದು 11 ರನ್. ರಬಡ ಎಸೆದ ಮೊದಲೆರೆಡು ಚೆಂಡುಗಳಲ್ಲಿ ಧೋನಿ 2, 1 ರನ್ ಗಳಿಸಿದ್ದರು. 3 ನೇ ಎಸೆತದಲ್ಲಿ ಸ್ಟುವರ್ಟ್ ಬಿನ್ನಿ 1 ರನ್ ತೆಗೆದುಕೊಂಡರು. ಮತ್ತೆ ಸ್ಟ್ರೈಕ್ ಗೆ ಬಂದ ಎಂಎಸ್ ಎಂದಿನಂತೆ ಸಿಕ್ಸರ್ ಎತ್ತಲು ಮುಂದಾದರು. ಆದರೆ ಅದೃಷ್ಟ ಕೈ ಕೊಟ್ಟಿತ್ತು. ಎತ್ತರಕ್ಕೆ ಚಿಮ್ಮಿದ ಚೆಂಡನ್ನು ರಬಡ ಹಿಡಿದುಕೊಂಡರು. ಮರು ಎಸೆತದಲ್ಲಿ ಬಿನ್ನಿಯೂ ವಿಕೆಟ್ ಒಪ್ಪಿಸಿದರು.

ಕ್ರಮಾಂಕ ಬದಲಾವಣೆ

ಕ್ರಮಾಂಕ ಬದಲಾವಣೆ

ಚೇಸಿಂಗ್ ಗೆ ಇಳಿದ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಂಎಸ್ ಧೊನಿ ಬದಲಾವಣೆ ಮಾಡಿದ್ದರು. 3ನೇ ಆಟಗಾರನಾಗಿ ವಿರಾಟ್ ಕೊಹ್ಲಿ ಬದಲು ಅಜಿಂಕ್ಯ ರಹಾನೆ ಕಣಕ್ಕೆ ಇಳಿದರು. ರಹಾನೆ 82 ಎಸೆತಗಳಲ್ಲಿ 60 ಗಳಿಸಿ ನಿರ್ಗಮಿಸಿದರು.

ರೋಹಿತ್ ಶರ್ಮಾ ಆಟ ಭರ್ಜರಿ

ರೋಹಿತ್ ಶರ್ಮಾ ಆಟ ಭರ್ಜರಿ

ಭಾರತದ ಇತರೇ ಬ್ಯಾಟ್ಸ್ ಮನ್ ಗಳು ವೈಫಲ್ಯ ಅನುಭವಿಸಿದರೆ ರೋಹಿತ್ ಶರ್ಮಾ ಮಾತ್ರ ರನ್ ಹೊಳೆ ಹರಿಸುತ್ತಿದ್ದಾರೆ. ಭಾರತದ ಎಲ್ಲ ಆಟಗಾರರು ಮೂರು ಪಂದ್ಯಗಳಲ್ಲಿ ಗಳಿಸಿದ್ದಕ್ಕಿಂತ ಹೆಚ್ಚಿನ ರನ್ ಅನ್ನು ಶರ್ಮಾ ಒಬ್ಬರೇ ದಾಖಲಿಸಿದ್ದಾರೆ. ಆದರೆ ಶರ್ಮಾ ಶತಕ ಬಾರಿಸಿದ ಎರಡು ಪಂದ್ಯಗಳನ್ನು ಭಾರತ ಸೋತಿದೆ

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X