ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಮೂರು ಎಸೆತದಲ್ಲಿ ಹ್ಯಾಟ್ರಿಕ್ ಪಡೆದ ವೇಗಿ!

By Mahesh

ಲಂಡನ್, ಆಗಸ್ಟ್ 04: ಇಂಗ್ಲೀಷ್ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಏಕದಿನ ಪಂದ್ಯವೊಂದರಲ್ಲಿ ವೇಗಿಯೊಬ್ಬರು ಹೊಸ ಸಾಧನೆ ಮಾಡಿದ್ದಾರೆ. ಮೊದಲ ಓವರ್‌ನ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ವಾರ್ಸೆಸ್ಟರ್‌ಶೈರ್ ವೇಗದ ಬೌಲರ್ ಜೋ ಲೀಚ್ ಈ ಸಾಧನೆ ಮಾಡಿದವರು.

ಜೋ ಲೀಚ್ ನಾರ್ಥಂಪ್ಟನ್‌ಶೈರ್ ವಿರುದ್ಧದ ಏಕದಿನ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದಾರೆ. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ರಿಚರ್ಡ್ ಲೇವಿ, ಎರಡನೇ ಎಸೆತದಲ್ಲಿ ರಾಬ್ ಕಿಯೊಘ್ ಹಾಗೂ ಮೂರನೇ ಎಸೆತದಲ್ಲಿ ಬೆನ್ ಡಕೆಟ್ ವಿಕೆಟ್‌ನ್ನು ಉದುರಿಸಿ ಲೀಚ್ ಹ್ಯಾಟ್ರಿಕ್ ಸಾಧಿಸಿದ್ದರು. ಅಂತಿಮವಾಗಿ ಪಂದ್ಯದ 27ನೇ ಓವರ್‌ನಲ್ಲಿ ಜೋಶ್ ಕಾಬ್ ವಿಕೆಟ್ ಪಡೆದು ಒಟ್ಟು ನಾಲ್ಕು ವಿಕೆಟ್ ಪಡೆದರು.

England bowler Joe Leach claims hat-trick with first 3 balls of match

24ರ ಹರೆಯದ ಲೀಚ್ 30 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದರೂ ಪ್ರಯೋಜನವಾಗಲಿಲ್ಲ. ನಾರ್ಥಂಪ್ಟನ್‌ಶೈರ್ ವಿರುದ್ಧ ವಾರ್ಸೆಸ್ಟರ್‌ಶೈರ್ ತಂಡ ಸೋಲು ಕಂಡಿತು. ಗೆಲ್ಲಲು ಕೇವಲ 126 ರನ್ ಗುರಿ ಪಡೆದಿದ್ದ ವಾರ್ಸೆಸ್ಟರ್‌ಶೈರ್ 21 ರನ್‌ಗಳಿಂದ ಪಂದ್ಯ ಸೋತಿದೆ.

2003ರ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಚಾಮಿಂಡಾ ವಾಸ್ ಏಕದಿನ ಕ್ರಿಕೆಟ್‌ನಲ್ಲಿ ಈ ರೀತಿ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್ ವಾಸ್ ಇನಿಂಗ್ಸ್ ನ ಮೊದಲ ಓವರ್‌ನಲ್ಲೇ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಾರ್ಸೆಸ್ಟರ್‌ಶೈರ್ ವೇಗದ ಬೌಲರ್ ಜೋ ಲೀಚ್ ಈ ಸಾಧನೆ ನೋಡಿ :




(ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X