ನವದೆಹಲಿ, ಜೂ. 30: ಕ್ರಿಕೆಟಿಗ ವಿರಾಟ್ ಕೊಹ್ಲಿ ಡಬ್ಸ್ಮಾಶ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಕೊಹ್ಲಿ ಆಕ್ಟ್ ಮಾಡಿರುವ ವಿಡಿಯೋ ಯುವಕರ ಮನ ಗೆಲ್ಲಯವಲ್ಲಿ ಯಶಸ್ಚಿಯಾಗಿದೆ.
'ಹೇರಾ ಫೇರಿ' ಚಿತ್ರದ ಪರೇಶ್ ರಾವಲ್ ಮಾಡಿದ ಬಾಬುರಾವ್ ಗನ್ಪತ್ರಾವ್ ಆಪ್ಟೆ ಪಾತ್ರದ ಡೈಲಾಗ್ ಗೆ ಡಬ್ಸ್ಮಾಶ್ನಲ್ಲಿ ವಿರಾಟ್ ಅಭಿನಯ ನೀಡಿದ್ದು ಎಲ್ಲರ ಮನ ಸೂರೆಗೊಂಡಿದ್ದಾರೆ. ವಿಡಿಯೋದಲ್ಲಿ ಕೊಹ್ಲಿ ಜತೆಗೆ ಅವರ ಸ್ನೇಹಿತ ಸಂದೀಪ್ ರಾಜ್ ಕಾಣಿಸಿಕೊಂಡಿದ್ದಾರೆ.[ಯುವಿ 'ಭಾಭಿ'ಯನ್ನು ಬಾಚಿ ತಬ್ಬಿಕೊಂಡ ವಿರಾಟ್ ಕೊಹ್ಲಿ!]
"ಯೇ ಬಾಬುರಾವ್ ಕೆ ಸ್ಟೈಲ್ ಹೈ' ಎಂದು ಹೇಳುತ್ತಾ ಗೆಳೆಯನ ಕೆನ್ನೆಗೆ ಏಟು ಕೊಡುವ ದೃಶ್ಯಕ್ಕೆ ಕೊಹ್ಲಿ ಅಭಿನಯ ಮಾಡಿದ್ದು ಮೆಚ್ಚುಗೆ ಗಳಿಸಿದೆ. ಇದಕ್ಕೂ ಮುನ್ನ ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್ ಸಹ ಡಬ್ ಸ್ಮಾಶ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು.[ಬೆರಳಲ್ಲಿ ಬೆರಳಿಟ್ಟು ಹೆಜ್ಜೆ ಹಾಕಿದ ಮೀರಾ-ಮಾಧವ]
ಆಂಡ್ರಾಡ್ ಫೋನ್ ಗಳಿಗೆ ಅಳವಡಿಸಿಕೊಳ್ಳಬಹುದಾದ ಡಬ್ ಸ್ಮಾಶ್ ಅಪ್ಲಿಕೇಶನ್ ಯುವಕರ ಮೆಚ್ಚುಗೆ ಗಳಿಸಿದೆ. ಈ ಅಪ್ಲಿಕೇಶನ್ ಬಳಸಿ ನಿಮಗೆ ಬೇಕಾದ ಡೈಲಾಗ್ ನಲ್ಲಿ ನೀವೇ ಅಭಿನಯಿಸಲು ಸಾಧ್ಯವಿದೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಅಭಿಮಯ ನೋಡಿ ಎಂಜಾಯ್ ಮಾಡಿ...