ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಚ್ ಫಿಕ್ಸರ್ಸ್ ಗ್ಯಾಂಗಿನಲ್ಲಿ ದಿನೇಶ್ ಮೊಂಗಿಯಾ

By Mahesh

ಲಂಡನ್, ಅ.13: ಇಂಗ್ಲೆಂಡ್ ಕೌಂಟಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಹೊತ್ತ ಆಜೀವ ನಿಷೇಧಕ್ಕೆ ಒಳಗಾಗಿರುವ ನ್ಯೂಜಿಲೆಂಡ್ ನ ಲೂ ವಿನ್ಸೆಂಟ್ ಅವರು ಈಗ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಬಗ್ಗೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ಮಾಡಿದ ಗ್ಯಾಂಗಿನಲ್ಲಿ ಭಾರತದ ಕ್ರಿಕೆಟರ್ ದಿನೇಶ್ ಮೊಂಗಿಯಾ ಕೂಡಾ ಇದ್ದರು ಎಂದಿದ್ದಾರೆ. ಅದರೆ, ವಿನ್ಸೆಂಟ್ ಹೇಳಿಕೆಯನ್ನು ದಿನೇಶ್ ಅಲ್ಲಗೆಳೆದಿದ್ದಾರೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

ಕಳಂಕಿತ ನ್ಯೂಜಿಲೆಂಡ್ ಕ್ರಿಕೆಟಿಗ ಲೂ ವಿನ್ಸೆಂಟ್ ಅವರು ಭಾರತದ ಮಾಜಿ ಕ್ರಿಕೆಟರ್ ದಿನೇಶ್ ಮೊಂಗಿಯಾ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದಾರೆ. ವಿನ್ಸೆಂಟ್​ರ ಆರೋಪ ಆಧಾರರಹಿತ. ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿಲ್ಲ ಎಂದು ದಿನೇಶ್ ಮೊಂಗಿಯಾ ಹೇಳಿದ್ದಾರೆ.[ಲೂ ವಿನ್ಸೆಂಟ್ ಗೆ ಆಜೀವ ನಿಷೇಧ]

ಐಸಿಸಿ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದ್ದ ಇಂಡಿಯನ್ ಕ್ರಿಕೆಟ್ ಲೀಗ್​ (ಐಸಿಎಲ್)ಗೆ ಸದ್ಯಕ್ಕೆ ಮಂಗಳ ಹಾಡಲಾಗಿದೆ. ಆದರೆ, ಐಸಿಎಲ್ ಸಮಯದಲ್ಲಿ ನಾಲ್ವರ ಸದಸ್ಯರ ಗ್ಯಾಂಗ್ ಮ್ಯಾಚ್ ಫಿಕ್ಸಿಂಗ್ ಮಾಡಿತ್ತು, ಅದರಲ್ಲಿ ಮೊಂಗಿಯಾ ಕೂಡ ಇದ್ದರು ಎಂದು ವಿನ್ಸೆಂಟ್ ಹೇಳಿಕೆ ನೀಡಿದ್ದಾರೆ.

ನಾಲ್ವರ ಸದಸ್ಯರ ಗ್ಯಾಂಗ್ ಮ್ಯಾಚ್ ಫಿಕ್ಸಿಂಗ್

ನಾಲ್ವರ ಸದಸ್ಯರ ಗ್ಯಾಂಗ್ ಮ್ಯಾಚ್ ಫಿಕ್ಸಿಂಗ್

ಐಸಿಸಿ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿದ್ದ ಇಂಡಿಯನ್ ಕ್ರಿಕೆಟ್ ಲೀಗ್​ (ಐಸಿಎಲ್)ಗೆ ಸದ್ಯಕ್ಕೆ ಮಂಗಳ ಹಾಡಲಾಗಿದೆ. ಆದರೆ, ಐಸಿಎಲ್ ಸಮಯದಲ್ಲಿ ನಾಲ್ವರ ಸದಸ್ಯರ ಗ್ಯಾಂಗ್ ಮ್ಯಾಚ್ ಫಿಕ್ಸಿಂಗ್ ಮಾಡಿತ್ತು, ಅದರಲ್ಲಿ ಮೊಂಗಿಯಾ ಕೂಡ ಇದ್ದರು ಎಂದು ವಿನ್ಸೆಂಟ್ ಹೇಳಿಕೆ ನೀಡಿದ್ದಾರೆ.

ಲಂಡನ್ ಕೋರ್ಟಿಗೆ ಹಾಜರಾದ ವಿನ್ಸೆಂಟ್

ಲಂಡನ್ ಕೋರ್ಟಿಗೆ ಹಾಜರಾದ ವಿನ್ಸೆಂಟ್

36 ವರ್ಷದ ವಿನ್ಸೆಂಟ್ ಅವರು ಕ್ರಿಸ್ ಕೇರ್ನ್ಸ್​ರ ಸುಳ್ಳುಸಾಕ್ಷ್ಯ ಪ್ರಕರಣದ ವಿಚಾರಣೆಗಾಗಿ ಲಂಡನ್ ಕೋರ್ಟಿಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಐಸಿಎಲ್​ನಲ್ಲಿ ಚಂಡೀಗಢ ಲಯನ್ಸ್ ಪರ ಆಡುವ ವೇಳೆ ಹಿರಿಯ ಆಟಗಾರರ ಸೂಚನೆಯಂತೆ ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಆರೋಪವನ್ನು ಅಲ್ಲಗಳೆ ದಿನೇಶ್ ಮೊಂಗಿಯಾ

ಆರೋಪವನ್ನು ಅಲ್ಲಗಳೆ ದಿನೇಶ್ ಮೊಂಗಿಯಾ

ದಿನೇಶ್ ಮೊಂಗಿಯಾ ಜೊತೆಗೆ ಕಿವೀಸ್ ಮಾಜಿ ವೇಗಿ ಡ್ಯಾರಿಲ್ ಟಫಿ ಹೆಸರನ್ನು ವಿನ್ಸೆಂಟ್ ಬಹಿರಂಗ ಪಡಿಸಿದ್ದಾರೆ. ಅದರೆ, ದಿನೇಶ್ ಮೊಂಗಿಯಾ ಈ ಆರೋಪವನ್ನು ಅಲ್ಲಗಳೆದಿದ್ದು, ‘ವಿನ್ಸೆಂಟ್​ರ ಆರೋಪ ಆಧಾರರಹಿತ. ನಾನು ಯಾವುದೇ ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿಲ್ಲ. ಚಂಡೀಗಢ ಲಯನ್ಸ್ ಪರ ಆಡುವಾಗ ಕಿವೀಸ್ ಕ್ರಿಕೆಟರ್ಸ್(ಕ್ರೈನ್ಸ್, ವಿನ್ಸೆಂಟ್, ಟಫಿ) ಏನು ಮಾಡುತ್ತಿದ್ದರು ನನಗೆ ಗೊತ್ತಿಲ್ಲ ಎಂದಿದ್ದಾರೆ.

ದಿನೇಶ್ ಮೊಂಗಿಯಾ, 6 ವರ್ಷಗಳ ಕಾಲ ಕ್ರಿಕೆಟ್

ದಿನೇಶ್ ಮೊಂಗಿಯಾ, 6 ವರ್ಷಗಳ ಕಾಲ ಕ್ರಿಕೆಟ್

ಭಾರತ ಪರ 57 ಏಕದಿನ, ಒಂದು ಟಿ20 ಪಂದ್ಯ ಆಡಿರುವ 38 ವರ್ಷದ ದಿನೇಶ್ ಮೊಂಗಿಯಾ 6 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. 2003ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ ತಂಡದಲ್ಲಿದ್ದರು. 2008ರ ಐಸಿಎಲ್ ವೇಳೆ ದಿನೇಶ್ ಮೊಂಗಿಯಾಗೆ ನಿಷೇಧ ಹೇರಲಾಗಿದೆ. ಆ ಬಳಿಕ ದಿನೇಶ್ ಮೊಂಗಿಯಾರನ್ನು ಬಿಸಿಸಿಐ ಪರಿಗಣಿಸಲೇ ಇಲ್ಲ.

ನ್ಯೂಜಿಲೆಂಡ್ ಕ್ರಿಕೆಟರ್ ಲೂ ವಿನ್ಸೆಂಟ್

ನ್ಯೂಜಿಲೆಂಡ್ ಕ್ರಿಕೆಟರ್ ಲೂ ವಿನ್ಸೆಂಟ್

ನ್ಯೂಜಿಲೆಂಡ್ ಕ್ರಿಕೆಟರ್ ಲೂ ವಿನ್ಸೆಂಟ್ ಅವರು 2001 ರಿಂದ 2007 ರ ತನಕ 23 ಟೆಸ್ಟ್, 102 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 9 ಟ್ವೆಂಟಿ 20ಪಂದ್ಯಗಳನ್ನಾಡಿದ್ದಾರೆ.

ಎಬಿಸಿ ನ್ಯೂಸ್ ರೇಡಿಯೋ ಕ್ರೀಡಾ ಉದ್ಘೋಷಕ ಮೈಕ್ ವಿನ್ಸೆಂಟ್ ಅವರ ಮಗನಾದ ಲೂ ವಿನ್ಸೆಂಟ್, ನ್ಯೂಜಿಲೆಂಡ್ ನ ದೇಶಿ ಕ್ರಿಕೆಟ್ ನಲ್ಲಿ 1997ರಿಂದ ಸಕ್ರಿಯ. ಲಂಕಾಷೈರ್, ವೊರ್ಸೆಸ್ಟರ್ ಷೈರ್, ಸಫೊಲ್ಕ್, ನಾಥಾಂಪ್ಟನ್ ಷೈರ್, ಸಸೆಕ್ಸ್, ಖುಲ್ನಾ ರಾಯಲ್ ಬೆಂಗಾಲ್ಸ್ ಮುಂತಾದ ಕ್ಲಬ್ ಗಳ ಪರ ಆಡಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X