ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಧೋನಿ ಫೈಟ್: ಭಾರತದ ಸೋಲಿಗೆ ನೈಜ ಕಾರಣ!

By Mahesh

ಕಾನ್ಪುರ, ಅ. 13: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ ಸೋಲಿನ ಸರಣಿ ಕಾನ್ಪುರದಲ್ಲಿ ಮುಂದುವರೆಯಲು ಟೀಂ ಇಂಡಿಯಾದ ನಾಯಕರಿಬ್ಬರ ಕಿತ್ತಾಟವೇ ಕಾರಣ ಎಂಬ ಸುದ್ದಿ ಹೊರ ಬಂದಿದೆ. ಇದರ ಜೊತೆಗೆ ತಾಂತ್ರಿಕವಾಗಿ ಧೋನಿ ಮಾಡಿದ ಕೆಲ ತಪ್ಪುಗಳ ವಿವರವೂ ನಿಮಗೆ ಇಲ್ಲಿ ಸಿಗಲಿದೆ.

ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಡುವೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಭಾರಿ ಚರ್ಚೆ ನಡೆದಿದೆ. ಇಬ್ಬರ ನಡುವಿನ ವೈಮನಸ್ಯದಿಂದಾಗಿ ತಂಡದ ಆಯ್ಕೆ ಹಾಗೂ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಒಮ್ಮತ ಮೂಡದ ಕಾರಣ ಸಮಸ್ಯೆ ಬಿಗಡಾಯಿಸಿ ಅದರ ಪರಿಣಾಮ ಮೈದಾನದಲ್ಲಿ ಇತರೆ ಆಟಗಾರರ ಮೇಲಾಗಿದೆ.[ಕಾನ್ಪುರ ಸೋಲಿಗೆ ಫಿನಿಶರ್ ಎಂಎಸ್ ಧೋನಿ ಕಾರಣ!]

ಅಜಿಂಕ್ಯ ರಹಾನೆ ನಂ.3 ಕ್ರಮಾಂಕದಲ್ಲಿ ಮತ್ತು ವಿರಾಟ್ ಕೊಹ್ಲಿಗೆ ನಂ.4 ಕ್ರಮಾಂಕದಲ್ಲಿ ಆಡಲು ಧೋನಿ ಸೂಚಿಸಿದ್ದೇ ಕೊಹ್ಲಿ ಸಿಟ್ಟಾಗಲು ಕಾರಣ. ಅಜಿಂಕ್ಯ ರಹಾನೆಯನ್ನು ಅಂತಿಮ XIನಲ್ಲಿ ಸೇರಿಸಿಕೊಂಡ ನಿರ್ಧಾರದ ಬಗ್ಗೆ ಕೂಡಾ ಇಬ್ಬರಿಗೂ ಕಿತ್ತಾಟವಾಗಿದೆ ಎಂದು ಟೀಂ ಇಂಡಿಯಾ ಡ್ರೆಸಿಂಗ್ ರೂಮಿನಿಂದ ಸುದ್ದಿ ಹರಿದು ಬಂದಿದೆ. [ಭಾರತಕ್ಕೆ 5 ರನ್ ಸೋಲು]

ಅಜಿಂಕ್ಯ ರಹಾನೆ ಅವರ ಆಟದ ಶೈಲಿ ಏಕದಿನ ಕ್ರಿಕೆಟ್ ಗೆ ಸೂಕ್ತವಾಗಿಲ್ಲ ಎಂದು ಪಂದ್ಯಕ್ಕೂ ಮುನ್ನ ಹೇಳಿದ್ದ ಧೋನಿ, ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಂಡಕ್ಕೆ ಆಯ್ಕೆಯಾದರೆ ನಾಲ್ಕನೇ ಕ್ರಮಾಂಕದಲ್ಲಿ ಇಳಿಸುವುದಾಗಿ ಘೋಷಿಸಿದ್ದರು. ಆದರೆ, ಪಂದ್ಯದ ದಿನ ಆಗಿದ್ದೇ ಬೇರೆ...

ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿದ್ದು

ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿದ್ದು

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದ ಸೋಲಿನ ಆಘಾತದ ಅನುಭವಿಸಲು ತಂಡದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಗಾಯಳುವಾಗಿದ್ದು ಕಾರಣ. ವಿಕೆಟ್ ಪಡೆಯುವುದು, ರನ್ ನಿಯಂತ್ರಣ ಎಲ್ಲವೂ ಅಶ್ವಿನ್ ರಿಂದ ಸಾಧ್ಯವಿತ್ತು. ಇನ್ನೂ 5.2 ಅಶ್ವಿನ್ ಬೌಲ್ ಮಾಡಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 303/5 ಸ್ಕೋರ್ ಮಾಡಿತು. ಅಶ್ವಿನ್ ಅನುಪಸ್ಥಿತಿ ಮುಳುವಾಯಿತು ಎಂದು ಧೋನಿ ಕೂಡಾ ಹೇಳಿದರು.

ಆಯ್ಕೆ ಸಮರ್ಥಿಸಿಕೊಂಡ ರಹಾನೆ

ಆಯ್ಕೆ ಸಮರ್ಥಿಸಿಕೊಂಡ ರಹಾನೆ

ಸಿಕ್ಕ ಅವಕಾಶವನ್ನು ರಹಾನೆ ಚೆನ್ನಾಗಿ ಬಳಸಿಕೊಂಡು 82 ಎಸೆತಗಳನ್ನು ಎದುರಿಸಿ 60 ರನ್‌ಗಳ ಕೊಡುಗೆ ನೀಡಿದ್ದರು. ಆದರೆ ಕೊಹ್ಲಿ 18 ಎಸೆತಗಳಲ್ಲಿ 11 ರನ್ ಸೇರಿಸಿ ಔಟಾದರು. ಕೊಹ್ಲಿ ಪಂದ್ಯದ ಬಳಿಕ ಬದಲಾವಣೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ರೋಹಿತ್, ಶಿಖರ್ ಹಾಗೂ ಕೊಹ್ಲಿ ಮೊದಲ ಮೂರು ಸ್ಥಾನಕ್ಕೆ ಫಿಕ್ಸ್ ಆಗಿರುವುದರಿಂದ ರಹಾನೆ ಆಯ್ಕೆ ಗೊಂದಲ ಹೆಚ್ಚಾಗಿತ್ತು. ಅದರೆ, ರಹಾನೆ ಆಯ್ಕೆ ಮಾಡಿ ಧೋನಿ ಅಚ್ಚರಿ ಮೂಡಿಸಿದರು.

ಇಮ್ರಾನ್ ತಾಹೀರ್ ಡಬ್ಬಲ್ ವಿಕೆಟ್ ಓವರ್

ಇಮ್ರಾನ್ ತಾಹೀರ್ ಡಬ್ಬಲ್ ವಿಕೆಟ್ ಓವರ್

ರನ್ ಚೇಸ್ ಮಾಡುವಾಗ ಭಾರತಕ್ಕೆ 24 ಎಸೆತಗಳಲ್ಲಿ 35ರನ್ ಬೇಕಿದ್ದ ಸಂದರ್ಭದಲ್ಲಿ ಭಾರತ ಸುಸ್ಥಿತಿಯಲ್ಲಿತ್ತು. ರೋಹಿತ್ 150ರನ್ ಗಳಿಸಿದ್ದರು. ಅದರೆ, 47ನೇ ಓವರ್ ನಲ್ಲಿ ಲೆಗ್ ಸ್ಪಿನ್ನರ್ ಇಮ್ರಾನ್ ಅವರು ಪಂದ್ಯದ ಗತಿ ಬದಲಾಯಿಸಿದರು. ಮೊದಲ ಎಸೆತದಲ್ಲಿ ರೋಹಿತ್ ಹಾಗೂ ಐದನೇ ಎಸೆತದಲ್ಲಿ ಸುರೇಶ್ ರೈನಾ ಅವರನ್ನು ಬಲಿ ಪಡೆದಿದ್ದು ಭಾರತಕ್ಕೆ ಮುಳುವಾಯಿತು.

ಎಬಿ ಡಿವಿಲೆಯರ್ಸ್ ಆರ್ಭಟ

ಎಬಿ ಡಿವಿಲೆಯರ್ಸ್ ಆರ್ಭಟ

ಏಕದಿನ ತಂಡದ ನಾಯಕ ಎಬಿ ಡಿವಿಲೆಯರ್ಸ್ ಅವರು 73 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ 304 ಸ್ಕೋರ್ ಮಾಡುವಂತೆ ಆಯಿತು. ಸರಾಸರಿ 240ರನ್ ಸ್ಕೋರ್ ಮಾಡಬಹುದಾದ ಪಿಚ್ ನಲ್ಲಿ 300ರನ್ ಚೇಸ್ ಮಾಡುವುದು ಟೀಂ ಇಂಡಿಯಾಕ್ಕೆ ಕಷ್ಟವಾಯಿತು.

ಕೈ ಕೊಟ್ಟ ಧೋನಿ, ರಬಡಾ ಬೊಂಬಾಟ್ ಬೌಲಿಂಗ್

ಕೈ ಕೊಟ್ಟ ಧೋನಿ, ರಬಡಾ ಬೊಂಬಾಟ್ ಬೌಲಿಂಗ್

ಕೊನೆ 6 ಎಸೆತಗಳಲ್ಲಿ 11ರನ್ ಗಳಿಸಬೇಕಾಗಿದ್ದ ಸಂದರ್ಭದಲ್ಲಿ ಎಂಎಸ್ ಧೋನಿ ಅವರು ಯುವ ವೇಗಿಯ ಎಸೆತದ ಮರ್ಮ ಅರಿಯಲಾಗದೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಧೋನಿ ಆಟವನ್ನು ನೋಡಿ ಬೆಳೆದ ನಾನು ಅವರ ವಿಕೆಟ್ ಪಡೆದಿದ್ದು ಅದ್ಭುತ ಕ್ಷಣ ಎಂದು 20ವರ್ಷ ವಯಸ್ಸಿನ ಕಂಗಿಸೋ ರಬಡಾ ಹೇಳಿದ್ದ ಅಚ್ಚರಿಯೇನಿಲ್ಲ. ಕೊನೆ ಓವರ್ ನಲ್ಲಿ 5ರನ್ ಮಾತ್ರ ನೀಡಿದ ರಬಡಾ ದಕ್ಷಿಣ ಆಫ್ರಿಕಾಕ್ಕೆ 5 ರನ್ ಗಳ ಜಯ ತಂದಿತ್ತರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X