ನವದೆಹಲಿ, ನ. 19: ಇಲ್ಲಿನ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಇದ್ದ ಅಡ್ಡಿ ಆತಂಕ ದೂರಾಗಿದೆ.
ಪೂರ್ವ ನಿಗದಿಯಾಗಿಯಂತೆ ಡಿ.3 ರಿಂದ 7ರ ವರೆಗೆ ಆಯೋಜಿಸಲು ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (ಡಿಡಿಸಿಎ) ದಿಲ್ಲಿ ಹೈಕೋರ್ಟ್ ಅನುಮತಿ ನೀಡಿದೆ ಎಂದು ಡಿಡಿಸಿಎ ಉಪಾಧ್ಯಕ್ಷ ಚೇತನ್ ಚೌಹಾಣ್ ಹೇಳಿದ್ದಾರೆ.
ಡಿಡಿಸಿಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಡಿ. ಅಹ್ಮದ್ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್ದೇವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಡಿ.1 ರಿಂದ 7 ತನಕದ ಡಿಡಿಸಿಎಗೆ ಹಿಡುವಳಿ ಪ್ರಮಾಣ ಪತ್ರವನ್ನು ಗುರುವಾರ ನೀಡುವಂತೆ ದಕ್ಷಿಣ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ಗೆ (ಎಸ್ಡಿಎಂಸಿ) ಆದೇಶ ನೀಡಿತ್ತು. ಅದರಂತೆ, ಪ್ರಮಾಣ ಪತ್ರ ಸಲ್ಲಿಸಲಾಗಿದೆ.
ಸುಮಾರು 24.45 ಕೋಟಿ ರು ಮನರಂಜನಾ ತೆರಿಗೆ ಹಾಕಲಾಗಿದ್ದು, ಈ ಪೈಕಿ ಆಸ್ತಿ ತೆರಿಗೆ ಬಾಕಿಯ 1 ಕೋಟಿ ರು ಗಳನ್ನು 50 ಲಕ್ಷ ರೂ.ಗಳಂತೆ ಎರಡು ಕಂತಿನಲ್ಲಿ ಎರಡು ವಾರದೊಳಗಾಗಿ ಠೇವಣಿ ಇರಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ದಿಲ್ಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ರನ್ನು ಹೈಕೋರ್ಟ್ ನೇಮಕ ಮಾಡಿದೆ (ಪಿಟಿಐ)