ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಬ್ದುಲ್ ಕಲಾಂ ನಮ್ಮ ಸ್ಪೂರ್ತಿ, ನಮ್ಮ ಹೆಮ್ಮೆ: ಕ್ರಿಕೆಟರ್ಸ್

By Mahesh

ಬೆಂಗಳೂರು, ಜುಲೈ 28: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಿಧನಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್ ಕಂಬನಿ ಮಿಡಿದಿದ್ದಾರೆ. ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದ ಕಲಾಂ ಅವರಿಂದ ಕ್ರಿಕೆಟರ್ಸ್ ಕೂಡಾ ಪಾಠ ಕಲಿತ್ತಿದ್ದಾರೆ.

ದೇಶದ 11 ನೇ ರಾಷ್ಟ್ರಪತಿ, ವಿಜ್ಞಾನಿ, ಕ್ಷಿಪಣಿ ಜನಕ ಅಬ್ದುಲ್ ಕಲಾಂ ಅವರು ಸೋಮವಾರ ಸಂಜೆ ಮೇಘಾಲಯದ ಶಿಲ್ಲಾಂಗ್ ನಲ್ಲಿ ಕೊನೆಯುಸಿರೆಳೆದರು. [ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]

ಐಐಎಂ ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ವೇಳೆ ಅಸ್ವಸ್ಥರಾದ ಕಲಾಂ ಅವರನ್ನು ಬೆಥನಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ಯಾತ್ರೆ ಮುಗಿಸಿದರು. [ಅಂದಿನಿಂದ ಇಂದಿನವರೆಗೆ ನಮ್ಮ ರಾಷ್ಟ್ರಪತಿಗಳು]

ಅಬ್ದುಲ್ ಕಲಾಂ ಅವರ ನಿಧನಕ್ಕೆ ದೇಶದೆಲ್ಲೆಡೆಯಿಂದ ಸಂತಾಪ ಸಂದೇಶಗಳು ಹರಿದು ಬರುತ್ತಿವೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಅವರು, ಇಸ್ರೋ, ಡಿಆರ್ ಡಿಒ ವಿಜ್ಞಾನಿಯಾಗಿ ಭಾರತದ ಕ್ಷಿಪಣಿ ನಿರ್ಮಾತೃವಾಗಿ, ಗುರುವಾಗಿ ಬೆಳೆದರು. ಭಾರತವನ್ನು ವೈಜ್ಞಾನಿಕವಾಗಿ ಶೈಕ್ಷಣಿಕವಾಗಿ ಬೆಳೆಸಿದರು.

ಕಲಾಂ ಅವರ ನಿಧನಕ್ಕೆ ಕ್ರಿಕೆಟರ್ಸ್ ಗಳು ಕಳಿಸಿರುವ ಟ್ವೀಟ್ ಸಂದೇಶಗಳು ಮುಂದಿವೆ ನೋಡಿ...

ಕಲಾಂ ಅವರು ಭಾರತಕ್ಕೆ ಸ್ಪೂರ್ತಿ

ಕಲಾಂ ಅವರು ಭಾರತಕ್ಕೆ ಸ್ಪೂರ್ತಿ

ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ, ವಿವಿಎಸ್ ಲಕ್ಷ್ಮಣ್, ಬಿಷನ್ ಸಿಂಗ್ ಬೇಡಿ, ಸುರೇಶ್ ರೈನಾ, ಆರ್ ಅಶ್ವಿನ್, ವಿನಯ್ ಕುಮಾರ್ ಸೇರಿದಂತೆ ಹಲವಾರು ಕ್ರಿಕೆಟರ್ಸ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರಿಂದ ಟ್ವೀಟ್

ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿ, ರಾಷ್ಟ್ರಪತಿ, ವಿಜ್ಞಾನಿ, ಶ್ರೇಷ್ಠ ಮಾನವತಾವಾದಿ ಎಂದಿದ್ದಾರೆ.

ವಿರಾಟ್ ಕೊಹ್ಲಿಯಿಂದ ಟ್ವೀಟ್

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿ ಕಲಾಂ ಅವರು ನಮಗೆಲ್ಲ ಮಾದರಿ ವ್ಯಕ್ತಿಯಾಗಿದ್ದರು ಎಂದಿದ್ದಾರೆ.

ಅನಿಲ್ ಕುಂಬ್ಳೆ ಅವರಿಂದ ಟ್ವೀಟ್

ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ, ದೇಶದ ಲಕ್ಷಾಂತರ ಮಂದಿಗೆ ನೀವು ಸ್ಪೂರ್ತಿಯಾಗಿದ್ದೀರಿ ಎಂದಿದ್ದಾರೆ.

ಕಲಾಂ ಅವರ ಕನಸು ನನಸು ಮಾಡೋಣ

ಕಲಾಂ ಅವರು ಕಂಡ ವಿಷನ್ 2020 ಕನಸು ನನಸು ಮಾಡೋಣ ಎಂದ ಸ್ಪಿನ್ನರ್ ಆರ್ ಅಶ್ವಿನ್.

ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿ

ಕಲಾಂ ಅವರು ಮಗುವಿನಂಥ ಕುತೂಹಲ ಹೊಂದಿದ್ದ ವ್ಯಕ್ತಿಯಾಗಿದ್ದರು. ಯಶಸ್ಸಿನ ಸೂತ್ರ ಏನು ಎಂದು ಕೇಳಿದರೆ, hard work, hard work ಎಂದರು.

ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್

ಮಾಜಿ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಜ್ಞಾನವನ್ನು ಯುವ ಜನತೆಗೆ ಹಂಚಿದ ಮಹಾನ್ ಗುರು ಎಂದಿದ್ದಾರೆ.

ಕಲಾಂ ನಿಧನ, ತುಂಬಲಾರದ ನಷ್ಟ: ವಿನಯ್

ಕಲಾಂ ಅವರ ನಿಧನ, ತುಂಬಲಾರದ ನಷ್ಟ ಎಂದು ಕರ್ನಾಟಕದ ನಾಯಕ ವಿನಯ್ ಕುಮಾರ್ ಅವರು ಕಂಬನಿ ಮಿಡಿದಿದ್ದಾರೆ.

ಕಲಾಂ ಅವರ ಉಕ್ತಿಗಳ ಟ್ವೀಟ್

ಕಲಾಂ ಅವರ ಸ್ಪೂರ್ತಿದಾಯಕ ಉಕ್ತಿಯನ್ನೊಂದು ಟ್ವೀಟ್ ಮಾಡಿದ ಆಶೋಕ್ ಚೋಪ್ರಾ.

ಕನಸು ಕಾಣಿ ಎಂದ ಮಹಾನ್ ಗುರು

ಸದಾ ಕನಸು ಕಾಣಿ ಎಂದ ಮಹಾನ್ ಗುರು ಎಂದು ಬಣ್ಣಿಸಿದ ಮಾಜಿ ಕ್ರಿಕೆಟರ್ ಸಂಜಯ್ ಮಂಜೇಕ್ರರ್.

ಭಾರತದ ನಿಜವಾದ ರತ್ನವಾಗಿದ್ದ ಕಲಾಂ

ಭಾರತದ ನಿಜವಾದ ರತ್ನವಾಗಿದ್ದ ಕಲಾಂ ಅವರ ನಿಧನ ತುಂಬಲಾರದ ನಷ್ಟ ಎಂದ ಶ್ರೀಶಾಂತ್.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X