ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶಿಸ್ತಿನ ಕ್ರಿಕೆಟಿಗರಿಗೆ ಮೈದಾನದಿಂದ ಬಹಿಷ್ಕಾರ ನಿಯಮ ಅ. 1ರಿಂದ ಜಾರಿ

ಪಂದ್ಯದ ವೇಳೆ ಅಶಿಸ್ತು ಪ್ರದರ್ಶಿಸುವ ಕ್ರಿಕೆಟಿಗರಿಗೆ ಇನ್ನು ಪಂದ್ಯದಿಂದ ಬಹಿಷ್ಕಾರ ಹಾಕುವ ಹೊಸ ನಿಯಮ ಜಾರಿ. ಫುಟ್ಬಾಲ್ ನಲ್ಲಿನ ರೆಡ್ ಕಾರ್ಡ್ ನಿಯಮದ ಮಾದರಿಯಲ್ಲಿ ಹೊಸ ನಿಯಮ ಅನುಷ್ಠಾನ. ಹೊಸ ನಿಯಮಗಳು ಅಕ್ಟೋಬರ್ 1ರಿಂದ ಜಾರಿಗೆ.

ದುಬೈ, ಜೂನ್ 24: ಪಂದ್ಯದ ವೇಳೆ ಗಂಭೀರ ಸ್ವರೂಪದ ಅಶಿಸ್ತು ಪ್ರದರ್ಶಿಸುವ ಆಟಗಾರರನ್ನು ಮೈದಾನದಿಂದ ಆಚೆ ಅಟ್ಟುವ ಹೊಸ ನಿಯಮ ಇದೇ ವರ್ಷ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.

ಕೆಲ ತಿಂಗಳುಗಳ ಹಿಂದೆ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ), ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮಿತಿಯು ಇಂಥದ್ದೊಂದು ನಿಯಮವನ್ನು ಅಳವಡಿಸಿಕೊಳ್ಳಬೇಕೆಂಬ ಸಲಹೆ ನೀಡಿತ್ತು.

Cricket umpires to send off players for misconduct from October 1

ಸಲಹೆ ಸ್ವೀಕರಿಸಿದ್ದ ಐಸಿಸಿ, ಇದನ್ನು ತನ್ನ ಆಡಳಿತ ಮಂಡಳಿ ಹಾಗೂ ತನ್ನ ಅಧೀನದಲ್ಲಿರುವ ಇತರ ಸಲಹಾ ಸಮಿತಿಗಳಿಗೆ ಒಪ್ಪಿಸಿ, ಇದರ ಸಾಧಕ-ಬಾಧಕಗಳನ್ನು ಅವಲೋಕಿಸುವಂತೆ ಸೂಚಿಸಿತ್ತು.

ಈ ಸಲಹೆಯ ಬಗ್ಗೆ ಆಡಳಿತ ಮಂಡಳಿ ಹಾಗೂ ಅಧೀನ ಸಮಿತಿಗಳು ಸಹಮತ ವ್ಯಕ್ತಪಡಿಸಿದ್ದರಿಂದಾಗಿ ಇದೀಗ ಐಸಿಸಿಯು ಆ ನಿಯಮದ ಜಾರಿಗೆ ಹಸಿರು ನಿಶಾನೆ ತೋರಿದೆ. ಅದರಂತೆ, ಆಟಗಾರರನ್ನು ಹೊರಗಟ್ಟುವ ಅಧಿಕಾರವನ್ನು ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿರುವ ಅಂಪೈರ್ ಗಳಿಗೆ ನೀಡಲಾಗುತ್ತದೆ.

ಫುಟ್ಬಾಲ್ ನಲ್ಲಿ ಇಂಥ ನಿಯಮವಿದೆ. ಆ ಕ್ರೀಡೆಯಲ್ಲಿ, ಮೈದಾನದಲ್ಲಿ ಅಶಿಸ್ತನ್ನು ತೋರುವ ಅಥವಾ ನಿಯಮ ಉಲ್ಲಂಘಿಸುವ ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿ ಹೊರಗಟ್ಟಲಾಗುತ್ತದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X