ಕ್ರಿಸ್ ಗೇಲ್ ಮತ್ತೊಮ್ಮೆ ಪತ್ರಕರ್ತೆಗೆ ಪೋಲಿ ಪ್ರಶ್ನೆ ಕೇಳಿದ್ನಂತೆ!

By:
Subscribe to Oneindia Kannada

ಬೆಂಗಳೂರು, ಮೇ 22: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಅವಿಭಾಜ್ಯ ಅಂಗವಾಗಿರುವ ವೆಸ್ಟ್ ಇಂಡೀಸ್ ನ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ. ಬ್ರಿಟಿಶ್ ಪತ್ರಕರ್ತೆಯೊಬ್ಬರಿಗೆ ಪೋಲಿ ಪ್ರಶ್ನೆ ಕೇಳಿದ್ದು ಈಗ ಚರ್ಚೆಯ ವಿಷಯವಾಗಿದೆ.[ಆರೋಹಿ ಗೂಗ್ಲಿಗೆ ಕ್ರಿಸ್ ಗೇಲ್ ಬೋಲ್ಡ್]

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಕ್ರಿಕೆಟ್ ಎಂದರೆ ಸಭ್ಯರ ಆಟ ಎಂಬುದು ಗೇಲ್ ಕಿವಿಗೆ ಬಿದ್ದಿಲ್ಲ, ವಿಂಡೀಸ್ ಆಟಗಾರರು ಪ್ಲೇ ಬಾಯ್ ಗಳಂತೆ ವರ್ತಿಸುವುದು ಇದೇ ಮೊದಲಲ್ಲ. ಆದರೆ, ಒಮ್ಮೆ ಆಸ್ಟ್ರೇಲಿಯನ್ ಪತ್ರಕರ್ತೆಗೆ ಕೇಳಬಾರದ್ದು ಕೇಳಿ ಸಿಕ್ಕಿ ಬಿದ್ದು, ಛೀಮಾರಿ ಹಾಕಿಸಿಕೊಂಡ ಬಳಿಕವೂ ಗೇಲ್ ಬುದ್ಧಿ ಬದಲಾಗಿಲ್ಲ. [ಮಗುವಿಗೆ 'ಬ್ಲಶ್' ಎಂದು ಹೆಸರಿಟ್ಟ ಕ್ರಿಸ್ ಗೇಲ್]

Chris Gayle does it again! West Indies batter asks female journalist if she ever had a threesome

ಬೆಂಗಳೂರಿನಲ್ಲಿ ಬ್ರಿಟಿಶ್ ಸುದ್ದಿವಾಹಿನಿಯ ಪತ್ರಕರ್ತೆಯೊಬ್ಬರು, ಗೇಲ್ ಅವರನ್ನು ಶನಿವಾರ(ಮೇ 21) ಸಂದರ್ಶಿಸಿದ್ದಾರೆ. ಮಹಿಳೆ, ಸೆಕ್ಸ್ ಹಾಗೂ ಸಮಾನತೆ ಬಗ್ಗೆ ಪ್ರಶ್ನೆ ಬಂದಾಗ ಗೇಲ್ ಅವರು ಆಕೆಗೆ ಸೆಕ್ಸ್ ಬಗ್ಗೆ ಮರು ಪ್ರಶ್ನೆ ಎಸೆದು ಮುಜಗರಕ್ಕೆ ಈಡು ಮಾಡಿದ್ದಾರೆ.[ಕ್ರಿಸ್ ಗೇಲ್ ಯಶಸ್ಸಿನ ಗುಟ್ಟು ಪುಸ್ತಕದಲ್ಲಿ ರಟ್ಟು]

ನನ್ನ ಸೆಕ್ಸ್ ಜೀವನದ ಬಗ್ಗೆ ನೀವು ಪ್ರಶ್ನಿಸುತ್ತಿದ್ದೀರಾ? ನೀವು ಸಾಮೂಹಿಕ ಸೆಕ್ಸ್ ನಲ್ಲಿ ಪಾಲ್ಗೊಂಡಿದ್ದೀರಾ? ಮಜಾ ಇರುತ್ತೆ. ನಮ್ಮಲ್ಲಿ ಎಲ್ಲಾ ಹೆಂಗಳೆಯರು ನನಗಾಗಿ ಕಾದಿರುತ್ತಾರೆ ಎಂದು ಪತ್ರಕರ್ತೆ ಶಾರ್ಲೊ ಎಡ್ವರ್ಡ್ಸ್ ಅವರಿಗೆ ಮರು ಪ್ರಶ್ನೆ ಹಾಕಿದ್ದಾರೆ.

36 ವರ್ಷದ ಜಮೈಕಾದ ದೈತ್ಯ ಬ್ಯಾಟ್ಸ್ ಮನ್ ಗೇಲ್ ಅವರು ಸಮಾನತೆ ಬಗ್ಗೆ ಮಾತನಾಡುತ್ತಾ, ಮಹಿಳೆಯರು ಸಮಾನತೆಗಿಂತ ಹೆಚ್ಚಿನದ್ದು ಪಡೆದುಕೊಳ್ಳುತ್ತಾರೆ. ಜಮೈಕಾದಲ್ಲಿ ಇಂಥದ್ದಕ್ಕೆಲ್ಲ ಮುಕ್ತವಾತಾವರಣ ಇದೆ ಎಂದಿದ್ದಾರೆ. ನನ್ನ ಬಳಿ ಅತ್ಯಂತ ದೊಡ್ಡ ಬ್ಯಾಟ್ ಇದೆ. ನಿನ್ನ ಎರಡು ಕೈ ಸಾಲುವುದಿಲ್ಲ ಎಂದು ನಗೆಯಾಡಿದ್ದಾರೆ.[ಗಳಿಸಿದ ರನ್ ಗಳಿಗಿಂತ ಹೆಚ್ಚು ಹೆಣ್ಣುಗಳ ಜತೆ ಮಲಗಿದ್ದ ಕ್ರಿಕೆಟರ್]

ಈ ಬಗ್ಗೆ ಬರೆದಿರುವ ಎಡ್ವರ್ಡ್, ನಾನು ಎಷ್ಟು ಕಪ್ಪು ಹುಡುಗರ ಜತೆ ಮಲಗಿದ್ದೆ, ಸಾಮೂಹಿಕ ಸೆಕ್ಸ್ ನಲ್ಲಿ ಪಾಲ್ಗೊಂಡೆ ಎಂದು ನೇರವಾಗಿ ಕೇಳಿದ್ದು ಮುಜುಗರಕ್ಕೀಡು ಮಾಡಿತು ಎಂದಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯನ್ ಪತ್ರಕರ್ತೆಗೆ ಪೋಲಿ ಪ್ರಶ್ನೆ ಕೇಳಿ 'ನಾಚಿಕೊಳ್ಳಬೇಡ' ಎಂದಿದ್ದ ಗೇಲ್ ಗೆ 10,000 ಆಸ್ಟ್ರೇಲಿಯನ್ ಡಾಲರ್ ದಂಡ ಹಾಕಲಾಗಿತ್ತು. ಪತ್ರಕರ್ತೆ ಬಳಿ ಕ್ಷಮೆ ಕೂಡಾ ಯಾಚಿಸಿದ್ದರು.

English summary
Months after he courted controversy by flirting to a female Australian TV reporter during a Big Bash League Twenty20 match live, West Indies explosive batsman Chris Gayle has done it yet again.
Please Wait while comments are loading...