ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ: ಮೊದಲ ಅಭ್ಯಾಸ ಪಂದ್ಯದಿಂದ ಯುವರಾಜ್ ಔಟ್!

ನವದೆಹಲಿ, ಮೇ 28 : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಟೂರ್ನಿ ಆರಂಭದಲ್ಲಿ ಭಾರತಕ್ಕೆ ವಿಘ್ನ ಎದುರಾಗಿದೆ.

ಟೀಂ ಇಂಡಿಯಾದ ಎಡಗೈ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ತೀವ್ರ ಜ್ವರದಿಂದ ಬಳಲುತ್ತಿದ್ದು ಮೇ 28ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಅಭ್ಯಾಸ ಪಂದ್ಯದದಿಂದ ದೂರ ಉಳಿಯಲಿದ್ದಾರೆ.[ಭಾರತ vs ನ್ಯೂಜಿಲೆಂಡ್, ಸ್ಪಿನ್ ಬಲವಿದ್ದರೆ ಗೆಲುವು!]

Champions Trophy: Yuvraj to miss India's first warm-up match against New Zealand due to fever

ಯುವರಾಜ್ ಸಿಂಗ್ ವಿಪರೀತ ಜ್ವರದಿಂದ ನರಳುತ್ತಿದ್ದು, ಅವರು ಗುಣಮುಖರಾಗಲು ಇನ್ನು ಒಂದೆರಡು ದಿನಗಳ ಬೇಕಾಗಬಹುದು ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

ಐಪಿಎಲ್ ಸಹಿತ ದೇಶಿ ಕ್ರಿಕೆಟ್ ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು ಅವರಿಗೆ ಇದೇನು ಅನಿವಾರ್ಯವಾದ ಅಭ್ಯಾಸ ಪಂದ್ಯವಲ್ಲ.[ಚಾಂಪಿಯನ್ಸ್ ಟ್ರೋಫಿ: ಆಂಗ್ಲರ ನಾಡಿಗೆ ಲಗ್ಗೆ ಇಟ್ಟ ಕೊಹ್ಲಿ ಪಡೆ]

ಆದರೆ, ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಗತ್ಯ ಎಂಬ ಕಾರಣಕ್ಕಾಗಿ ಎಲ್ಲ ಕ್ರಿಕೆಟಿಗರೂ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಬೇಕೆಂಬುದು ಬಿಸಿಸಿಐ ನಿರ್ಧಾರ ಎಂದು ಹೇಳಿದ್ದಾರೆ.

ಪ್ರತಿಯೊಂದು ಅಭ್ಯಾಸ ಪಂದ್ಯದಲ್ಲೂ ಹನ್ನೊಂದರ ಬದಲು 15 ಆಟಗಾರರಿಗೆ ಆಡುವ ಅವಕಾಶವನ್ನು ಕಲ್ಪಿಸಲಾಗಿದೆ. ಯುವರಾಜ್ ಸಿಂಗ್ ಬಾಂಗ್ಲಾ ಎದುರಿನ ಮೇ 30ರ ದ್ವಿತೀಯ ಅಭ್ಯಾಸ ಪಂದ್ಯದಲ್ಲೂ ಆಡುವುದು ಖಚಿತವಾಗಿಲ್ಲ ಎಂದು ಮಂಡಳಿ ಹೇಳಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X