ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಟಾಂಡ್ ಬೈ ಆಟಗಾರರಾಗಿ ಇರಬೇಕೆಂದು ಧೋನಿ ಹೇಳಿದ ಆ ಐವರು

ಪ್ರತಿಯೊಂದು ಪಂದ್ಯಾವಳಿಗಾಗಿ ಭಾರತ ತಂಡ ಆಯ್ಕೆಯಾಗುವ ವೇಳೆ ಇಂಥವರೇ ತಂಡದಲ್ಲಿರಬೇಕೆಂದು ಕೇಳುವ ಧೋನಿ, ಈ ವಿಚಾರದಲ್ಲಿ ಹೆಚ್ಚು ಕರಾರುವಾಕ್ ಆಗಿರುವಂಥವರು. ದೂರದೃಷ್ಟಿಯುಳ್ಳವರು. ಹಾಗಾಗಿಯೇ, ಅವರ ಸಲಹೆಯೂ ಬಿಸಿಸಿಐಗೆ ರುಚಿಸಿದೆ.

ಲಂಡನ್ ನಲ್ಲಿ ಶೀಘ್ರದಲ್ಲೇ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ 15 ಆಟಗಾರರ ಭಾರತ ಕ್ರಿಕೆಟ್ ತಂಡ ಈಗಾಗಲೇ ಪ್ರಕಟಗೊಂಡಿದೆ. ತಂಡದಲ್ಲಿ ಮೀಸಲು ಆಟಗಾರರನ್ನಾಗಿ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಇದು ಧೋನಿಯವರ ಐಡಿಯಾ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.

ಪ್ರತಿಯೊಂದು ಪಂದ್ಯಾವಳಿಗಾಗಿ ಭಾರತ ತಂಡ ಆಯ್ಕೆಯಾಗುವ ವೇಳೆ ಇಂಥವರೇ ತಂಡದಲ್ಲಿರಬೇಕೆಂದು ಕೇಳುವ ಧೋನಿ, ಈ ವಿಚಾರದಲ್ಲಿ ಹೆಚ್ಚು ಕರಾರುವಾಕ್ ಆಗಿರುವಂಥವರು. ದೂರದೃಷ್ಟಿಯುಳ್ಳವರು. ಈ ಹಿಂದಿನ ಟೂರ್ನಿಗಳಲ್ಲಿ ಇದಾಗಲೇ ಸಾಬೀತಾಗಿದೆ.

Champions Trophy: MS Dhoni advised selectors to keep 5 players on stand-by, reveals BCCI

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲೂ ಅದು ಪುನರಾವರ್ತನೆಯಾಗಿದೆ. ರಿಷಬ್ ಪಂತ್ ಸೇರಿದಂತೆ ಐವರು ಆಟಗಾರರನ್ನು ಈ ಬಾರಿ ತಂಡದಲ್ಲಿ ಸೇರ್ಪಡೆಗೊಳಿಸಿಕೊಂಡಿದ್ದಾರೆ ಅವರು. ಅವರು ಯಾರು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಕೀಪರ್ ಬಗ್ಗೆ ಭರವಸೆ

ಕೀಪರ್ ಬಗ್ಗೆ ಭರವಸೆ

ದೆಹಲಿ ಮೂಲದ 19 ವರ್ಷದ ಈ ವಿಕೆಟ್ ಕೀಪರ್-ಕಂ-ಬ್ಯಾಟ್ಸ್ ಮನ್ ಬಗ್ಗೆ ಧೋನಿಗೆ ಎಲ್ಲಿಲ್ಲದ ಭರವಸೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸದ್ದು ಮಾಡಿದ್ದ ಈ ಹುಡುಗನಿಗೆ ಮತ್ತೊಂದು ಹಾಗೂ ಮಹತ್ವದ ಅಂತಾರಾಷ್ಟ್ರೀಯ ಅವಕಾಶ ಕೊಡಲು ಧೋನಿ ನಿರ್ಧರಿಸಿದ್ದಾರೆ.

ಅನುಭವವೇ ಅವಕಾಶದ ಹೆಬ್ಬಾಗಿಲು

ಅನುಭವವೇ ಅವಕಾಶದ ಹೆಬ್ಬಾಗಿಲು

ರೈನಾ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಭಾರತ ತಂಡದ ಪರಿಪಕ್ವ ಕ್ರಿಕೆಟಿಗರಲ್ಲೊಬ್ಬರು ರೈನಾ. ಇದೇ ವರ್ಷದಾರಂಭದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟಿ20 ಪಂದ್ಯಾವಳಿಯಲ್ಲಿ ಆಡಿದ್ದ ರೈನಾ, ಮತ್ತೆ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿಲ್ಲ. ಹಾಗಾಗಿ, ಈ ಬಾರಿ ಅವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. 2014ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗಾಧವಾದ ಅನುಭವ ಹಾಗೂ ಇಂಗ್ಲೆಂಡ್ ನೆಲದಲ್ಲಿ ಅವರಿಗಿರುವ ಅನುಭವಗಳನ್ನು ಪರಿಗಣಿಸಿ ಅವರನ್ನು ತಂಡದೊಂದಿಗೆ ಕರೆದೊಯ್ಯಲು ಧೋನಿ ನಿರ್ಧರಿಸಿದ್ದಾರೆ.

ಧರ್ಮಶಾಲಾ ಮೂಲಕ ಸಾಧನೆ ಹೆಜ್ಜೆ

ಧರ್ಮಶಾಲಾ ಮೂಲಕ ಸಾಧನೆ ಹೆಜ್ಜೆ

ಉತ್ತರ ಪ್ರದೇಶದ ಈ ಬೌಲರ್, ಕಳೆದೊಂದು ವರ್ಷದಿಂದ ಟೀಂ ಇಂಡಿಯಾದಲ್ಲಿದ್ದಾರೆ. ಧರ್ಮಶಾಲಾದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ.

ಮತ್ತೊಮ್ಮೆ ಅದೃಷ್ಟ ಪರೀಕ್ಷೆ

ಮತ್ತೊಮ್ಮೆ ಅದೃಷ್ಟ ಪರೀಕ್ಷೆ

ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ಎರಡು ಬಾರಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗಲೂ ಭಾರತ ತಂಡದ ಭಾಗವಾಗಿದ್ದರು ಠಾಕೂರ್. ಆದರೆ, ಯಾವುದೇ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಂಗ್ಲರ ನೆಲದ ಅನುಭವ ಮತ್ತೆ ಒರೆಗೆ

ಆಂಗ್ಲರ ನೆಲದ ಅನುಭವ ಮತ್ತೆ ಒರೆಗೆ

ಮೀಸಲು ಆಟಗಾರರಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಆಗಿರುವ ರೈನಾ ಅವರನ್ನು ಬಿಟ್ಟರೆ ಧೋನಿ ಪಾಲಿನ ಮತ್ತೊಬ್ಬ ಭರವಸೆಯ ಬ್ಯಾಟ್ಸ್ ಮನ್ ಎಂದರೆ ಅದು ದಿನೇಶ್ ಕಾರ್ತಿಕ್. ರೈನಾ ಅವರಂತೆ ಕಾರ್ತಿಕ್ ಕೂಡ 2014ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಸದಸ್ಯರಾಗಿದ್ದರು. ಇಂಗ್ಲೆಂಡ್ ನೆಲದಲ್ಲಿ ಅವರಿಗೆ ಸಾಕಷ್ಟು ಅನುಭವವಿರುವುದರಿಂದ ಧೋನಿ ಇವರನ್ನು ತಂಡದಲ್ಲಿಟ್ಟುಕೊಳ್ಳಲು ಸಲಹೆ ನೀಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X